Tesla defamation case:ರೂಂಗೆ ಕರೆದೊಯ್ದು ಬಲವಂತವಾಗಿ ಕೆಲಸದಿಂದ ತೆಗೆದರು, ಟೆಸ್ಲಾಗೆ ಸಂಕಷ್ಟ ತಂದ ಕ್ರಿಸ್ಟಿನಾ ಕೇಸ್!

By Suvarna News  |  First Published Dec 6, 2021, 7:07 PM IST
  • ಟೆಸ್ಲಾ ಮೇಲೆ ಹಲವು ಅಪಾದನೆ ಮಾಡಿದ್ದ ಮಾಜಿ ಎಂಜಿನೀಯರ್
  • ಮಾನನಷ್ಟ ಮೊಕದ್ದಮೆ ಕೇಸ್ ಗೆಲುವಿಗೆ ಕೋರ್ಟ್ ಮೊರೆ ಹೋದ ಟೆಸ್ಲಾ
  • ಆರ್ಬಿಟ್ರೇಟರ್ ನಿರ್ಧಾರದ ದೃಢೀಕರಣ ಕೇಳಿದ ಟೆಸ್ಲಾ

ಸ್ಯಾನ್‌ ಫ್ರಾನ್ಸಿಸ್ಕೋ(ಡಿ.6): ಭಾರತದಲ್ಲಿ ಟೆಸ್ಲಾ(Tesla) ಕಾರುಗಳನ್ನು ಬಿಡುಗಡೆ ಮಾಡಲು ಟೆಸ್ಲಾ ಸಿಇಒ ಎಲನ್(Elon Musk) ಮಸ್ಕ್ ತಯಾರಿ ನಡೆಸುತ್ತಿದ್ದಾರೆ. ಚೀನಾದಲ್ಲಿನ ಟೆಸ್ಲಾ ಘಟಕಗಳನ್ನು ವಿಸ್ತರಿಸುವ ಚಿಂತನೆ ನಡೆದಿದೆ. ಈ ಮೂಲಕ ವಿಶ್ವದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ವ್ಯವಾಹರ ವಿಸ್ತರಿಸಲು ಮುಂದಾಗಿದೆ. ಇದರ ನಡುವೆ ಟೆಸ್ಲಾ ಮೇಲಿರುವ ಕೆಲ ಪ್ರಕರಣಗಳು ಎಲನ್ ಮಸ್ಕ್‌ಗೆ ಕಗ್ಗಂಟಾಗುತ್ತಿದೆ. ಇದೀಗ 2014ರ ಮಾನನಷ್ಟ ಮೊಕದ್ದಮೆ( defamation case) ಪ್ರಕರಣದ ಗೆಲುವಿಗೆ ಟೆಸ್ಲಾ ನ್ಯಾಯಲಯದ ಅನುಮೋದನೆ ಕೇಳಿದೆ.

ದೋಷಪೂರಿತ ಫ್ಲೋರ್‌ಮ್ಯಾಟ್ ಹಾಗೂ ಕೆಲಸದ ಗುತ್ತಿಗೆ ಪದ್ಧತಿ ಕುರಿತು ಆತಂಕ ವ್ಯಕ್ತಪಡಿಸಿ ಟೆಸ್ಲಾ ಸಿಇಒ ಎಲನ್ ಮಸ್ಕ್ ಗಮನಕ್ಕೆ ತರಲು ಯತ್ನಿಸಿದ್ದ ಮಾಜಿ ಎಂಜಿನಿಯರ್ ಕ್ರಿಸ್ಟಿನಾ ಬಲನ್‌ನ್ನು(Cristina Balan) ಟೆಸ್ಲಾ ಕೆಲಸದಿಂದ ವಜಾಗೊಳಿಸಿತ್ತು. ಈ ಘಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಎಂಜಿನೀಯರ್ ಕ್ರಿಸ್ಟಿನಾ ತನಗೆ ಮಾನಹಾನಿ ಮಾಡಿದ್ದಾರೆ ಎಂದು ಕೇಸ್ ದಾಖಲಿಸಿದ್ದರು. ಈ ಕೇಸ್‌ನಲ್ಲಿ ಮಧ್ಯಸ್ಥಿತಿಯೊಂದಿಗೆ ಮಾನನಷ್ಟ ಮೊಕ್ಕದ್ದಮೇ ಕೇಸ್ ಪರಿಹರಿಸಲು ಟೆಸ್ಲಾ ಮುಂದಾಗಿದೆ. ಇದಕ್ಕಾಗಿ ಟೆಸ್ಲಾ ಸ್ಯಾನ್ ಫ್ರಾನ್ಸಿಸ್ಕೋ ಕೋರ್ಟ್ ಅನುಮೋದನೆ ಕೇಳಿದೆ.

Tap to resize

Latest Videos

undefined

ಎಲಾನ್‌ ಮಸ್ಕ್‌ರ Tesla ವಿರುದ್ಧ ಲೈಂಗಿಕ ಕಿರುಕುಳ ಮೊಕದ್ದಮೆ!

ಕ್ರಿಸ್ಟಿನಾ ಬಲನ್ 2010ರಲ್ಲಿ ಟೆಸ್ಲಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಕಂಪನಿ ಫ್ಲೋರ್‌ಮ್ಯಾಟ್(floor mat) ಹಾಗೂ ಕಂಪನಿಗೆ ಪೂರೈಕೆದಾರರು(suppliers) ನಡೆಸುತ್ತಿರುವ ಅವ್ಯವಹಾರವನ್ನು ಪತ್ತೆ ಹಚ್ಚಿ ಕಂಪನಿ ಸಿಇಓ ಎಲನ್‌ ಮಸ್ಕ್‌ಗೆ ತಿಳಿಸಿದ್ದರು. ಮೇಲ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕಂಪನಿಯಲ್ಲಿ ಯಾವುದೇ ಅವ್ಯವಾಹರ ನಡೆದರೂ, ಗೋಚರಿಸಿದರೂ ನೇರವಾಗಿ ಮೇಲ್ ಮುಖಾಂತರ ತನಗೆ ತಿಳಿಸುವಂತೆ ಘೋಷಿಸಿದ್ದರು. ಈ ಮೂಲಕ ವಿಶ್ವದಲ್ಲೆಡೆ ಭಾರಿ ಸದ್ದು ಮಾಡಿದ್ದರು. ಈ ಮಾತಿನಂತೆ ಕ್ರಿಸ್ಟಿನಾ ಮೇಲ್ ಮುಖಾಂತರ ಫ್ಲೋರ್ ಮ್ಯಾಟ್ ಹಾಗೂ ಗುತ್ತಿಗೆ ಪದ್ದತಿಯಲ್ಲಿನ ಅವ್ಯವಾಹರವನ್ನು ಮಸ್ಕ್‌ಗೆ ತಿಳಿಸಿದ್ದರು. 

ಮೇಲ್ ಸ್ವೀಕರಿಸಿದ ಎಲನ್ ಮಸ್ಕ್ ಮೀಟಿಂಗ್ ಕರೆಯಬೇಕಿತ್ತು. ಕನಿಷ್ಠ ಪಕ್ಷ ತನ್ನ ಬಳಿ ಮಾಹಿತಿ ಕೇಳಬೇಕಿತ್ತು, ಅವ್ಯವಾಹರ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ ಇದ್ಯಾವುದು ಸಂಭವಿಸಲಿಲ್ಲ. ಎಲನ್ ಮಸ್ಕ್, ಕ್ರಿಸ್ಟಿನಾ ಕರೆದು ಅವ್ಯವಹಾರದ ಮಾಹಿತಿ ಪಡೆದುಕೊಂಡಿಲ್ಲ. ಬದಲಾಗಿ ಬಲವಂತವಾಗಿ ರಾಜೀನಾಮೆ ನೀಡಲು ಬೆದರಿಕೆ ಹಾಕಿದ್ದಾರೆ. ಇಷ್ಟೇ ಅಲ್ಲ ಎಂಜಿನೀಯರ್ ತಂಡದ ಎಲ್ಲಾ ಸದಸ್ಯರನ್ನು ಗಡೀಪಾರು ಮಾಡುವಂತೆ ಬೆದರಿಕೆ ಹಾಕಿದ್ದರು ಎಂದು ಕಿಸ್ಟಿನಾ ಮಾನನಷ್ಟ ದೂರಿನಲ್ಲಿ ಆರೋಪಿಸಿದ್ದರು.

ಟ್ವೀಟರ್‌ನಲ್ಲಿ ಸಮೀಕ್ಷೆ ನಡೆಸಿ 2 ದಿನದಲ್ಲಿ 4 ಲಕ್ಷ ಕೋಟಿ ಕಳೆದುಕೊಂಡ ಎಲಾನ್‌ ಮಸ್ಕ್‌!

ಕ್ರಿಸ್ಟಿನಾ ಟೆಸ್ಲಾ ಕಂಪನಿಯಲ್ಲಿ ತಮ್ಮ ವೈಯುಕ್ತಿ ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದರು. ಇದು ಕಂಪನಿ ನಿಯಮಕ್ಕೆ ವಿರುದ್ಧವಾಗಿದೆ. ವೈಯುಕ್ತಿ ಕೆಲಸಕ್ಕೆ ಕ್ರಿಸ್ಟಿನಾ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾ, ಬೇರೆ ಒಪ್ಪಂದ ಕೆಲಸಗಳನ್ನು, ಆದಾಯವನ್ನು ಪಡೆಯುವುದು ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ಕಂಪನಿ ಕ್ರಿಸ್ಟಿನಾ ಅವರನ್ನು ವಜಾ ಮಾಡಿದೆ ಎಂದು ವಾದಿಸಿತ್ತು

ಮತ್ತೊಂದು ಹೈಪ್ರೊ​ಫೈಲ್‌ ವಿಚ್ಛೇದ​ನ: ಮಸ್ಕ್‌ ದಂಪತಿ ಡೈವೋ​ರ್ಸ್‌!

ಕಳೆದ ಮಾರ್ಚ್ ತಿಂಗಳಲ್ಲಿ  ನ್ಯಾಯಾಲಯವು(US Court) ಕಿಸ್ಟಿನಾ ಪ್ರಕರಣ ಟೆಸ್ಲಾ ಉದ್ಯೋಗಕ್ಕೆ ನೇರವಾಗಿ ಸಂಬಂಧಿಸಿದ ವಿಚಾರವಾಗಿದೆ. ಹೀಗಾಗಿ ಮಾನನಷ್ಟ ಹಕ್ಕುಗಳನ್ನು ಮಧ್ಯಸ್ಥಿಕೆ ವಹಿಸುವ ಅಗತ್ಯವಿದೆ ಎಂದು ತೀರ್ಪು ನೀಡಿತ್ತು. ಕುರಿತು ಟೆಸ್ಲಾ ಫೆಡರಲ್ ನ್ಯಾಯಾಲಯದಲ್ಲಿ ಆರ್ಬಿಟ್ರೇಟರ್ ನಿರ್ಧಾರವನ್ನು ದೃಢೀಕರಿಸಲು ಕೇಳಿದ್ದಾರೆ. ಇತ್ತ ಕ್ರಿಸ್ಟಿನಾ ಮಧ್ಯಸ್ಥಿಕೆ  ತೆರವು ಮಾಡಲು ಕೋರುವುದಾಗಿ ಮೇಲ್ ಮುಖಾಂತರ ಹೇಳಿದ್ದಾರೆ. ಟೆಸ್ಲಾ ಈಗಾಗಲೇ ಹಲವು ಪ್ರಕರಣಗಳನ್ನು ಎದುರಿಸಿದೆ. ಇನ್ನೂ ಹಲವು ಪ್ರಕರಣಗಳು ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆಯುತ್ತಿದೆ. ಕೇವಲ ಬೆರಳೆಣಿಕೆ ಪ್ರಕರಣಗಳು ಮಾತ್ರ ಸುಖಾಂತ್ಯ ಕಂಡಿದೆ. 

click me!