ಟಾಟಾ ಮೋಟಾರ್ಸ್ ಅತ್ಯಾಧುನಿಕ ಹಾಗೂ ಅತ್ಯುತ್ತಮ ಕಾರ್ಯಾಚರಣೆಯ ದಕ್ಷತೆಯೊಂದಿಗೆ ನೂತನ ಟ್ರಕ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ಲಘು ವಾಣಿಜ್ಯ ವಾಹನ, ಅಲ್ಟ್ರಾ ಕ್ಯಾಬಿನ್ , ಅತ್ಯುತ್ತಮ ಅನುಕೂಲ, ಮತ್ತು ಚಲನಶೀಲತೆ ಹೊಂದಿದೆ. ನೂತನ ಟ್ರಕ್ ವಿವರ ಇಲ್ಲಿವೆ.
ಬೆಂಗಳೂರು(ಜ.04): ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ಉತ್ಪಾದಕರಾದ ಟಾಟಾ ಮೋಟಾರ್ಸ್ ದೇಶದ ಅತ್ಯಾಧುನಿಕ ಲಘು ವಾಣಿಜ್ಯ ವಾಹನ (LCV) ಅಲ್ಟ್ರಾ T.7 ಅನ್ನು ಪರಿಚಯಿಸುತ್ತಿದೆ. ಹೊಚ್ಚ ಹೊಸ ಅಲ್ಟ್ರಾ ಕ್ಯಾಬಿನ್ ಹೊಂದಿರುವ ಈ ವಾಹನವನ್ನು ನಾಗರಿಕ ಸಾರಿಗೆಗೆ ವಿಶೇಷವಾಗಿ ರಚಿಸಲಾಗಿದೆ. ಬಹು ಪ್ರಶಂಸನೀಯವಾದ ಅಲ್ಟ್ರಾ ಕ್ಯಾಬಿನ್ ಅನ್ನು ಬಹಳ ನಾಜೂಕಾಗಿ ರೂಪಿಸಲಾಗಿದ್ದು, ಅತ್ಯುತ್ತಮ ಅನುಕೂಲ, ಮತ್ತು ಚಲನಶೀಲತೆ ಹೊಂದಿದೆ, ಮತ್ತು ತನ್ನ 1900 ಮಿ.ಮೀ. ಅಗಲದ ಕ್ಯಾಬಿನ್‍ನಿಂದಾಗಿ ಹಿಂದಿರುಗುವ ಸಮಯವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಟ್ರಕ್ ಮಾಲಿಕರಿಗೆ ಹೆಚ್ಚು ಆದಾಯದ ಸಾಧ್ಯತೆ ಉಂಟಾಗುತ್ತದೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಹೆಚ್ಚು ದಕ್ಷತೆಯಿಂದ ಹೆಚ್ಚು ಲಾಭ ತರುತ್ತದೆ. ಅಲ್ಟ್ರಾ T.7 ಶ್ರೇಣಿಯು ಮಾಡ್ಯುಲಾರ್ ವೇದಿಕೆಯಲ್ಲಿ ನಿರ್ಮಿಸಲಾಗಿದ್ದು, ವಿವಿಧ ಡೆಕ್ ಉದ್ದ ಮತ್ತು 4 ಗಾಲಿಗಳ ಮತ್ತು 6 ಗಾಲಿಗಳ ಭಿನ್ನತೆಗಳಲ್ಲಿ ಲಭ್ಯವಿದೆ. ಇದರಿಂದ ಅನೇಕ ರೀತಿಯ ಬಳಕೆಗಳಿಗೆ ಸೂಕ್ತವಾಗಿದೆ.
83ನೇ ವಸಂತಕ್ಕೆ ಕಾಲಿಟ್ಟ ರೋಲ್ ಮಾಡೆಲ್, ಉದ್ಯಮಿ, ಸಹೃದಯಿ ರತನ್ ಟಾಟಾ!.
ಅಲ್ಟ್ರಾ T.7 ನಲ್ಲಿ ತಾಂತ್ರಿಕವಾಗಿ ಮುಂದುವರೆದ 4SPCR ಇಂಜಿನ್ ಹೊಂದಿದ್ದು, ಉನ್ನತವಾದ 100HP ಶಕ್ತಿ ಮತ್ತು 1200-2200 rpm ನಿಂದ 300Nm ಟಾರ್ಕ್ ಅನ್ನು ನೀಡುತ್ತದೆ. ಹೆಚ್ಚು ಬಾಳಿಕೆಗಾಗಿ ಬಲವಾದ ಮಾಡ್ಯುಲಾರ್ ಚಾಜಿ ಮತ್ತು ಹೆಚ್ಚು ಇಂಧನ ದಕ್ಷತೆಗೆ ರೇಡಿಯಲ್ ಟ್ಯುಬ್ಲೆಸ್ ಟೈರ್ ಹೊಂದಿದೆ. ಇದಲ್ಲದೆ, ಟಾಟಾ ಅಲ್ಟ್ರಾ T.7 ಅನ್ನು ಟಾಟಾ ಅವರ ತತ್ವವಾದ ಪವರ್ ಆಫ್ 6 (6ರ ಶಕ್ತಿ) ಯನ್ನು ಆಧರಿಸಿ ರೂಪಿಸಲಾಗಿದೆ. ಇದು ಹೆಚ್ಚು ಫ್ಲೀಟ್ ಲಾಭದಾಯಕತೆ, ವಾಹನದ ದಕ್ಷತೆ, ಚಾಲನೆಯ ಸುಗಮತೆ, ಸೌಲಭ್ಯ ಮತ್ತು ಸಂಪರ್ಕಶೀಲತೆ ಮತ್ತು ಸುರಕ್ಷತೆಗಳನ್ನು ಒದಗಿಸುತ್ತದೆ, ಮತ್ತು ಎಲ್ಲವನ್ನೂ ಕಡಿಮೆ ಒಟ್ಟು ಕಾರ್ಯಾಚರಣೆಯ ವೆಚ್ಚ (TCO) ದಲ್ಲಿ ನೀಡುತ್ತದೆ. ಇದನ್ನು ವಿವಿಧರೀತಿಯ ರಸ್ತೆಗಳು ಮತ್ತು ಸ್ಥಿತಿಗಳಲ್ಲಿ ತೀವ್ರವಾದ ನೈಜವಾದ ಮತ್ತು ಪೈಲಟ್ ಪರೀಕ್ಷೆಗಳಿಂದ ದೃಢಪಡಿಸಲಾಗಿದೆ. ತನ್ನ I&LCV ಗ್ರಾಹಕರಿಗೆ ಮೂರು ಅನನ್ಯವಾದ ಮತ್ತು ಭಿನ್ನವಾದ ಕ್ಯಾಬಿನ್ ಆಯ್ಕೆಗಳನ್ನು ನೀಡುತ್ತಿರುವ ಏಕೈಕ ಭಾರತೀಯ ವಾಣಿಜ್ಯ ವಾಹನಗಳ ಉತ್ಪಾದಕನೆಂದರೆ ಟಾಟಾ ಮೋಟಾರ್ಸ್ - ಅಲ್ಟ್ರಾ, SFC ಮತ್ತು LPT ಶ್ರೇಣಿಯ ಟ್ರಕ್‍ಗಳು.
ಹೊಸ ವರ್ಷದಿಂದ ಟಾಟಾ ವಾಣಿಜ್ಯ ವಾಹನ ಬೆಲೆ ಹೆಚ್ಚಳ!.
ILCV ಉತ್ಪನ್ನಗಳು, ಟಾಟಾ ಮೋಟಾರ್ಸ್ ಹೇಳಿದರು "ಅತ್ಯಾಧುನಿಕ ಅಲ್ಟ್ರಾ T.7 ನ ಪರಿಚಯದೊಂದಿಗೆ, ನವೀನ ವಾಹನ ಉತ್ಪಾದನೆಯ ಶಿಖರವನ್ನು ಮುಟ್ಟುವ ತನ್ನ ಬದ್ಧತೆಯನ್ನು ಮುಂದುವರೆಸಿದೆ, ಮತ್ತು ಈ ಮೂಲಕ ಕಡಿಮೆ ವೆಚ್ಚಗಳಲ್ಲಿ ವಿವಿಧ ರೀತಿಯ ಬಳಕೆಗಳಿಗೆ ಅನೇಕ ರೀತಿಯ ಉತ್ಪನ್ನಗಳನ್ನು ನೀಡುತ್ತಿದೆ. ಪ್ರವರ್ತಕ ಮತ್ತು ಪ್ರಶಸ್ತಿ ವಿಜೇತ ವಿನ್ಯಾಸದಿಂದ ಕೂಡಿದ ಅಲ್ಟ್ರಾ T.7 ಎರಡು ರೀತಿಯ ಲಾಭಗಳನ್ನು ತನ್ನ ಗ್ರಾಹಕರಿಗೆ ತಂದಿದೆ - ಆರಾಮ ಮತ್ತು ಚಲನಶೀಲತೆ ಜೊತೆಗೆ ತನ್ನ ಮಾಲಿಕರಿಗೆ ಅತ್ಯುತ್ತಮ ಲಾಭವನ್ನೂ ತಂದಿದೆ. ಉದ್ಯಮದಲ್ಲಿ ಅತ್ಯುತ್ತಮವಾದ ಕಾರ್ಯಾಚರಣೆಯ ಆರ್ಥಿಕತೆ, ಉನ್ನತ ಇಂಧನ ದಕ್ಷತೆ ಮತ್ತು ಶಕ್ತಿ, ದೀರ್ಘಬಾಳಿಕೆಯ ಚಕ್ರಗಳು, ಇವುಗಳಿಮ್ದ ಈ ವರ್ಗದಲ್ಲಿ ಇದು ಅತ್ಯುತ್ತಮ ವಾಹನವಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ವಿ ಸೀತಾಪತಿ ಹೇಳಿದ್ದಾರೆ.
ಹೆಚ್ಚು ಸುರಕ್ಷತೆಗೆ ಅಪಘಾತ-ಪರೀಕ್ಷಿತ ಕ್ಯಾಬಿನ್ ಮತ್ತು ಹೆಚ್ಚು ಶಕ್ತಿಶಾಲಿ ಏರ್ ಬ್ರೇಕ್, ಹೊಂದಿಸಿಕೊಳ್ಳಬಹುದಾದ ಆಸನಗಳು, ಟಿಲ್ಟ್- ಮತ್ತು ಟೆಲೆಸ್ಕೋಪಿಕ್ ಪವರ್ ಸ್ಟೀರೀಂಗ್, ಮತ್ತು ಅನುಕೂಲಕ್ಕಾಗಿ ಡ್ಯಾಶ್ ಗೇರ್ ಶಿಫ್ಟರ್ ನೊಂದಿಗೆ, ಅಲ್ಟ್ರಾ T.7 ಭವಿಶ್ಯದ ವಿನ್ಯಾಸಕ್ಕೆ ಆರಾಮವನ್ನು ಮೇಳೈಸಿದೆ, ಬಹಳ ಕಡಿಮೆ NVH ಮಟ್ಟಗಳನ್ನು ಮತ್ತು ಆಯಾಸರಹಿತ ಚಾಲನೆಯ ಅನುಭವ ನೀಡುತ್ತದೆ. ಇದರ ಮಾನಕ ಜೋಡಣೆಗಳೆಂದರೆ ಒಂದು ಮ್ಯುಸಿಕ್ ಸಿಸ್ಟಂ, USB ಫಾಸ್ಟ್ ಚಾರ್ಜಿಂಗ್ ಪೋರ್ಟ್, ಸಾಕಷ್ಟು ದಾಸ್ತಾನು ಸ್ಥಳ, ಮತ್ತು ಟಾಟಾ ಮೋಟಾರ್ಸ್ ನ ಮುಂದಿನ ಪೀಳಿಗೆಯ ಸಂಪರ್ಕಶೀಲ ವಾಹನ ಪರಿಹಾರವಾದ ಫ್ಲೀಟ್ ಎಡ್ಜ್. ಇದರಿಂದಾಗಿ ಸುಲಭವಾದ ವಾಹನಪಡೆಯ ನಿರ್ವಹಣೆ ಸಾಧ್ಯವಾಗುತ್ತದೆ. ಇದರ ಜೊತೆಗೆ ವಾಹನದಲ್ಲಿದೆ ಸ್ವಚ್ಛ ಲೆನ್ಸ್ ಹೆಡ್‍ಲ್ಯಾಂಪ್ ಮತ್ತು LED ಟೈಲ್ ಲ್ಯಾಂಪ್; ಇದರಿಂದ ರಾತ್ರಿಯವೇಳೆಯಲ್ಲಿ ಚಾಲಕರಿಗೆ ಹೊರಗೆ ಉತ್ತಮವಾಗಿ ಕಾಣುತ್ತದೆ.
ಅಲ್ಟ್ರಾ T.7 ಇವಾಣಿಜ್ಯ ಸರಕಿನ, FMCG, ಕೈಗಾರಿಕಾ ಉತ್ಪನ್ನಗಳ, ಗ್ರಾಹಕರ ಉತ್ಪನ್ನಗಳ, ಎಲೆಕ್ಟ್ರಾನಿಕ್ಸ್, ಅಗತ್ಯವಸ್ತುಗಳು ಮತ್ತು LPG ಸಿಲಿಂಡರ್‍ಗಳ ಸಾಗಣೆಗೆ ಅತ್ಯುತ್ತಮ ವಾಹನವಾಗಿದೆ. T.7 ನ ರೀಫರ್ ಭಿನ್ನತೆಗಳು ಲಸಿಕೆಗಳು, ಔಷಧಗಳು, ಕೊಳೆಯುವ ವಸ್ತುಗಳ, ಹಾಲು ಮತ್ತು ಮೊಟ್ಟಗಳಂತಹ ಆಹಾರವಸ್ತುಗಳ, ಮತ್ತು ಕೃಷಿ ಉತ್ಪನ್ನಗಳ ಸಾಗಣೆಗೆ ಉತ್ತಮವಾಗಿದೆ. ಅಲ್ಟ್ರಾ T.7 ಪೂರ್ಣ ನಿರ್ಮಿತ ಪರಿಹಾರಗಳೊಂದಿಗೆ ಲಭ್ಯವಿದೆ, ಇದರಿಂದ ಗ್ರಾಹಕರಿಗೆ ಏಕಗವಾಕ್ಷಿಯ ಅನುಕೂಲ ದೊರೆಯುತ್ತದೆ - ಉತ್ತಮ ಹಣಕಾಸು ಸೌಲಭ್ಯ, ರಾಷ್ಟ್ರವ್ಯಾಪಿ ಸೇವಾ ಸೌಲಭ್ಯ, ಮತ್ತು ಉನ್ನತ ಮರುಮಾರಾಟ ಮೌಲ್ಯ - ಇದರಿಂದಾಗಿ ಗ್ರಾಹಕರಿಗೆ ಹೆಚ್ಚು ಲಾಭವಾಗಲಿದೆ. ಇವುಗಳಲ್ಲದೆ, ಟಾಟಾ ಮೋಟಾರ್ಸ್ I&LCV ಶ್ರೇಣಿಯು 3 ವರ್ಷಗಳ/3 ಲಕ್ಷ ಕಿ.ಮೀ.ಗಳ ವಾರಂಟಿಯೊಂದಿಗೆ ಲಭ್ಯವಿದೆ ಮತ್ತು ಸಂಪೂರ್ಣ ಸೆವಾ 2.0 ಮತ್ತು ಟಾಟಾ ಸಮರ್ಥ್ ಅನ್ನೂ ನೀಡುತ್ತದೆ - ಇದು ವಾಣಿಜ್ಯ ವಾಹನ ಚಾಲಕರ ಕಲ್ಯಾಣ, ಅಪ್‍ಟೈಮ್ ಖಾತ್ರಿ, ಸ್ಥಳದಲ್ಲಿ ಸೇವೆ, ಮತ್ತು ಗ್ರಾಹಕೀಕೃತ ವಾರ್ಷಿಕ ದುರಸ್ತಿ ಮತ್ತು ವಾಹನಪಡೆ ನಿರ್ವಹಣಾ ಪರಿಹಾರಗಳನ್ನೂ ನೀಡುತ್ತದೆ.