Mysuru Auto Components ಜಪಾನ್ ಪ್ಲಾಂಟ್ ಮೆಂಟೆನನ್ಸ್‌ನಿಂದ ಮೈಸೂರು ವಾಹನ ಬಿಡಿಭಾಗ ತಯಾರಿಕಾ ಘಟಕಕ್ಕೆ ಶ್ರೇಷ್ಠ ಪ್ರಶಸ್ತಿ!

By Suvarna News  |  First Published Feb 7, 2022, 1:45 AM IST
  • ಮೈಸೂರು ಘಟಕಕ್ಕೆ ಟಿಪಿಎಂ ಶ್ರೇಷ್ಠತಾ ಪ್ರಶಸ್ತಿ
  •  ಜಾಗತಿಕ ಗೌರವ ಪಡೆದ 25 ಘಟಕಗಳಲ್ಲಿ ಮೈಸೂರು ಘಟಕ
  •  ಭಾರತದ 6 ಕಂಪನಿಗಳ ಸಾಲಿಗೆ ಮೈಸೂರು ಘಟಕ

ಮೈಸೂರು(ಫೆ.06): TVS ಗ್ರೂಪ್‌ನ ಕಂಪನಿಯಾಗಿರುವ ಮತ್ತು ಭಾರತದ ಪ್ರಮುಖ ಪ್ಲಾಸ್ಟಿಕ್ ಆಟೊ ಬಿಡಿಭಾಗ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಸುಂದರಂ ಆಟೊ ಕಂಪೊನೆಂಟ್ಸ್ ಲಿಮಿಟೆಡ್ (SACL) ಅತ್ಯುತ್ತಮ ಬಿಡಿ ಭಾಗ ತಯಾರಿಕಾ ಘಟಕ ಅನ್ನೋ ಪ್ರಶಸ್ತಿ(TPM Excellence Award ) ಪಡೆದಿದೆ.  ಜಪಾನ್ (Japan)ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟ್ ಮೆಂಟೆನನ್ಸ್ (JIPM) ನೀಡುವ ‘ಒಟ್ಟಾರೆ ತಯಾರಿಕೆ ನಿರ್ವಹಣೆ (TPM) ಶ್ರೇಷ್ಠತೆ ಪ್ರಶಸ್ತಿ' ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ. ಈ ಪ್ರಶಸ್ತಿಯೊಂದಿಗೆ, `ಎಸ್‌ಎಸಿಎಲ್' ಜಾಗತಿಕ ಮಟ್ಟದ ಪ್ರತಿಷ್ಠಿತ 24 ಕಂಪನಿಗಳ ಮತ್ತು ಭಾರತದ 6 ಕಂಪನಿಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

JIPMನ ಈ TPM ಪ್ರಶಸ್ತಿಯು ಜಾಗತಿಕವಾಗಿ ನೀಡಲಾಗುತ್ತಿದೆ. ಮೈಸೂರಿನಲ್ಲಿನ(Mysuru) ತನ್ನ ತಯಾರಿಕಾ ಘಟಕದಲ್ಲಿ ಉತ್ಪನ್ನಗಳ(auto component manufacturers) ಗುಣಮಟ್ಟ ಸುಧಾರಣೆ ಮತ್ತು ಉಪಕರಣಗಳು ಸ್ಥಗಿತಗೊಳ್ಳುವುದನ್ನು ತಡೆಗಟ್ಟುವ ಹಾಗೂ ಸಲಕರಣೆಗಳ ಪ್ರಮಾಣೀಕರಣದ ಮೂಲಕ ತಯಾರಿಕಾ ದಕ್ಷತೆ ಸುಧಾರಿಸುವ `ಎಸ್‌ಎಸಿಎಲ್’ನ ಬದ್ಧತೆಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.TVS ಸಮೂಹವು ಭಾರತದಲ್ಲಿ TQM ಮತ್ತು TPM ಅಳವಡಿಕೆಯಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಅದರ ಸಮೂಹಕ್ಕೆ ಸೇರಿರುವ ಎಸ್‌ಎಸಿಎಲ್ ಈ ಎಲ್ಲ ಮಾನದಂಡಗಳನ್ನು ಅನುಸರಿಸುವುದು ಸಹಜವಾಗಿದೆ. 

Tap to resize

Latest Videos

Vehicles Fitness Test ವಾಹನ ಫಿಟ್ನೆಸ್ ಟೆಸ್ಟ್‌ಗೆ ಮತ್ತಷ್ಟು ಕಠಿಣ ನೀತಿ, ಆಟೋಮೆಟೆಡ್ ವಿಧಾನ ಶೀಘ್ರದಲ್ಲೇ ಜಾರಿ!

ಕನಿಷ್ಠ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ನಿಗದಿತ ಸಮಯಕ್ಕೆ ತಲುಪಿಸುವ ಮೂಲಕ ಗ್ರಾಹಕರ ಸಂತೃಪ್ತಿ ಸುಧಾರಿಸುವ ಗುರಿಯೊಂದಿಗೆ ಆಗಸ್ಟ್ 2016 ರಲ್ಲಿ ಮೈಸೂರು ಘಟಕದಲ್ಲಿ `SACL ಪಯಣ ಆರಂಭಗೊಂಡಿತ್ತು. ಇದರ ಪರಿಣಾಮವಾಗಿ, 2016 ಮತ್ತು 2021ರ ನಡುವೆ ಘಟಕದ ಒಟ್ಟಾರೆ ಉಪಕರಣದ ದಕ್ಷತೆಯು ಶೇ 20ರಷ್ಟು ಸುಧಾರಿಸಿದೆ. ಗ್ರಾಹಕರಿಗೆ ಸೇವೆ ಸಲ್ಲಿಸಲು ಶೇ 50 ರಷ್ಟು ಸಮಯದ ಉಳಿತಾಯವಾಗಿದೆ. ತಯಾರಿಕಾ ಲೈನ್‌ನಲ್ಲಿನ ದೋಷಗಳನ್ನು ಶೇ 33ರಷ್ಟು  ಕಡಿಮೆ ಮಾಡಲಾಗಿದೆ. ಈ ಎಲ್ಲ ಉಪಕ್ರಮಗಳಿಂದ ತಯಾರಿಕಾ ವೆಚ್ಚದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ನಿರಂತರವಾಗಿ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನನ್ನು ಉಳಿಸಿಕೊಳ್ಳಲು ಇದು ಕಂಪನಿಗೆ ಅವಕಾಶ ಮಾಡಿಕೊಟ್ಟಿದೆ. ಈ ಎಲ್ಲ ಉಪಕ್ರಮಗಳು ತಯಾರಿಕಾ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ನೈತಿಕತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ.

ಜಾಗತಿಕ ಮಟ್ಟದಲ್ಲಿ `TPM’ ಪ್ರಶಸ್ತಿಗಳ ಅತ್ಯುನ್ನತ ಗುಣಮಟ್ಟವಾಗಿರುವ `JIPM’ನಿಂದ ಈ ಗೌರವ ಪಡೆಯುವುದಕ್ಕೆ ನಮಗೆ ಅತೀವ ಸಂತಸವಾಗುತ್ತಿದೆ. ‘ಟಿಪಿಎಂ’ನ ಒಟ್ಟಾರೆ ಚೌಕಟ್ಟನ್ನು ಕಾರ್ಯಗತಗೊಳಿಸಲು, ಅಳವಡಿಸಲು ಮತ್ತು ಪ್ರಮಾಣೀಕರಿಸಲು ನಮ್ಮ ತಂಡವು ಶ್ರದ್ಧೆಯಿಂದ ಕೆಲಸ ಮಾಡಿದೆ. ಇದು ನಷ್ಟವನ್ನು ಕಡಿಮೆ ಮಾಡುವ ಮೂಲಕ ತಯಾರಿಕೆ ಪ್ರಮಾಣ ಹೆಚ್ಚಳಗೊಳ್ಳುವುದಕ್ಕೆ ಕಾರಣವಾಗಿದೆ. ನಮ್ಮ ತಂಡವು ಇನ್ನೂ ಹೆಚ್ಚಿನ ಕಾರ್ಯದಕ್ಷತೆ ಸಾಧಿಸಲು ಈ ಪ್ರಶಸ್ತಿಯ ಮನ್ನಣೆಯು ಮತ್ತಷ್ಟು ಸ್ಫೂರ್ತಿ ನೀಡುತ್ತದೆ ಎಂಬುದರ ಬಗ್ಗೆ ನನಗೆ ಖಾತ್ರಿ ಇದೆ' ಎಂದು  ಎಸ್‌ಎಸಿಎಲ್'ನ ಅಧ್ಯಕ್ಷ ರಾಜೇಶ್ ಉಮ್ಮನ್ ಹೇಳಿದ್ದಾರೆ.

Driving Without DL ಲೈಸೆನ್ಸ್ ಇಲ್ಲದೆ ಕಳೆದ 70 ವರ್ಷಗಳಿಂದ ಸತತ ಡ್ರೈವಿಂಗ್, 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ!

 ‘ಜೆಐಪಿಎಂ’ನ ತಜ್ಞರ ತಂಡವು `ಟಿಪಿಎಂ' ಪ್ರಶಸ್ತಿಗೆ ಎರಡು ಹಂತಗಳಲ್ಲಿ ಮೌಲ್ಯಮಾಪನ ನಡೆಸಿದೆ. ಈ ಮೌಲ್ಯಮಾಪನವು `ಟಿಪಿಎಂ’ ಕಾರ್ಯತಂತ್ರದ ಎಂಟು ಮಾನದಂಡಗಳಿಗೆ ಸಂಬಂಧಿಸಿದಂತೆ ಕಾರ್ಖಾನೆಯ ನೀತಿಗಳು, ಪ್ರವೃತ್ತಿಗಳು ಮತ್ತು ಪ್ರದರ್ಶನಗಳನ್ನು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿದೆ. ಈ ಪ್ರಶಸ್ತಿಯಿಂದ ಘಟಕದ ಜವಾಬ್ದಾರಿ ಹೆಚ್ಚಿದೆ. ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಬಿಡಿ ಭಾಗಗಳನ್ನು ತಕ್ಕ ಸಮಯದಲ್ಲಿ ನೀಡುವುದನ್ನು ಮುಂದುವರಿಸಲಿದ್ದೇವೆ. ಗ್ರಾಹಕರಿಗೆ ಮತ್ತಷ್ಟು ಸೇವೆ ನೀಡಲಿದ್ದೇೆವೆ. ಈ ಪ್ರಶಸ್ತಿ ಅತೀವ ಸಂತಸ ತಂದಿದೆ ಎಂದು ಮೈಸೂರು ಘಟಕದ ಉದ್ಯೋಗಿಗಳು ಹೇಳಿದ್ದಾರೆ. 

click me!