Vehicles Fitness Test ವಾಹನ ಫಿಟ್ನೆಸ್ ಟೆಸ್ಟ್‌ಗೆ ಮತ್ತಷ್ಟು ಕಠಿಣ ನೀತಿ, ಆಟೋಮೆಟೆಡ್ ವಿಧಾನ ಶೀಘ್ರದಲ್ಲೇ ಜಾರಿ!

By Suvarna News  |  First Published Feb 4, 2022, 7:05 PM IST
  • ಮಾಲಿನ್ಯ ತಡೆಯಲು ಸರ್ಕಾರದಿಂದ ಎಲೆಕ್ಟ್ರಿಕ್ ವಾಹನಕ್ಕೆ ಒತ್ತು
  • ಹಳೇ ವಾಹನ ಉಳಿಸಲು, ಓಡಿಸಲು ಮತ್ತಷ್ಟು ಕಠಿಣ ನಿಯಮ
  • ವಾಹನ ಫಿಟ್ನೆಸ್ ಟೆಸ್ಟ್‌ಗೆ ಅಟೋಮೇಟೆಡ್ ವಿಧಾನ 

ನವದೆಹಲಿ(ಫೆ.04): ಕೇಂದ್ರ ಸರ್ಕಾರ ಈಗಾಗಲೇ ವಾಹನ ಗುಜುರಿ ನೀತಿ(vehicle scrappage policy) ಪರಿಚಯಿಸಿದೆ. ಈ ಮೂಲಕ ಅವದಿ ಮುಗಿದ ಹಳೆ ವಾಹನಗಳನ್ನು ಗುಜುರಿಗೆ ಹಾಕಬೇಕು. ಈ ವಾಹನ ಉಳಿಸಿಕೊಳ್ಳಲು ಫಿಟ್ನೆಸ್ ಟೆಸ್ಟ್, ಎಮಿಶನ್ ಟೆಸ್ಟ್, ರಿ ರಿಜಿಸ್ಟ್ರೇಶನ್ ಸೇರಿದಂತೆ ಹಲವು ಟೆಸ್ಟ್ ಪಾಸ್ ಆಗಬೇಕು. ಇಷ್ಟು ವರ್ಷ ಸುಲಭವಾಗಿ ನಡೆಯುತ್ತಿದ್ದ ವಾಹನ ಫಿಟ್ನೆಸ್ ಟೆಸ್ಟ್ ಇನ್ಮುಂದೆ ಅತ್ಯಂತ ಕಠಿಣ. ಕಾರಣ ಶೀಘ್ರದಲ್ಲೇ ಸರ್ಕಾರ ಆಟೋಮೇಟೆಡ್ ಫಿಟ್ನೆಸ್ ಟೆಸ್ಟ್(Automated Vehicle test) ಜಾರಿ ಮಾಡುತ್ತಿದೆ.

ವಾಹನ ಫಿಟ್ನೆಸ್‌ನಲ್ಲಿ ಲೋಪಗಳಿವೆ ಅನ್ನೋದು ಹಲವು ವರ್ಷಗಳಿಂದಲೇ ಕೇಳಿಬರುತ್ತಿರುವ ಮಾತು. ವಾಹನ ಫಿಟ್ನೆಸ್ ಟೆಸ್ಟ್ ಹಣ ಪಾವತಿ ಮಾಡಿದರೆ ಖಾಸಗಿ ಕೇಂದ್ರಗಳು ಸುಲಭವಾಗಿ ಫಿಟ್ನೆಸ್ ಪಾಸ್ ಟೆಸ್ಟ್ ನೀಡುತ್ತಾರೆ. ಆದರೆ ಕೇಂದ್ರ ಸರ್ಕಾರ ಇದೀಗ ಈ ಫಿಟ್ನೆಸ್ ಪರೀಕ್ಷೆಯನ್ನು ಆಟೋಮ್ಯಾಟಿಕ್ ಮಾಡುತ್ತಿದೆ. ಇದರಿಂದ ವಾಹನ ಫಿಟ್ನೆಸ್ ಆಟೋಮೇಟೆಡ್ ಮೂಲಕ ಪರೀಕ್ಷೆ ನಡೆಯಲಿದೆ. ಇದರಲ್ಲಿ ಮೋಸ ಕಷ್ಟ. ಇಷ್ಟೇ ಅಲ್ಲ ವಾಹನದ ನೈಜ ಫಿಟ್ನೆಸ್ ಬಯಲಾಗಲಿದೆ.

Tap to resize

Latest Videos

Vehicle Scrap Policy ಹಳೇ ವಾಹನ ಮಾಲೀಕರು ಪ್ರತಿ ವರ್ಷ ಮಾಡಬೇಕು FC,ಕಟ್ಟಬೇಕು ಗ್ರೀನ್ ಟ್ಯಾಕ್ಸ್, ಇದ್ಕಿಂತ ಹೊಸ ವಾಹನವೇ ಲೇಸು 

ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಶನ್(Automated Testing Station) ಜಾರಿಗೊಳಿಸಲಿದೆ. ಸದ್ಯ ಕರಡು ನೀತಿಯನ್ನು(draft notification) ಸಿದ್ಧಪಡಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದೆ. ಇಷ್ಟೇ ಅಲ್ಲ ಮುಂದಿನ ವರ್ಷ ಎಪ್ರಿಲ್ 1 ರಿಂದ ಹೊಸ ನೀತಿ ಜಾರಿಗೆ ಬರಲಿದೆ.  ಇಷ್ಟೇ ಅಲ್ಲ ಹಂತ ಹಂತವಾಗಿ ಆಟೋಮೇಟೆಡ್ ಫಿಟ್ನೆಸ್ ಟೆಸ್ಟ್ ನೀತಿ ಜಾರಿಯಾಗಲಿದೆ.

ಮೊದಲ ಹಂತದಲ್ಲಿ ಘನ ವಾಹನದ ಆಟೋಮೇಟೆಡ್ ಫಿಟ್ನೆಸ್ ಟೆಸ್ಟ್ ಎಪ್ರಿಲ್ 1, 2023ರಿಂದ ಕಡ್ಡಾಯವಾಗಲಿದೆ. ಅಂದರೆ ಲಾರಿ, ಟ್ರಕ್ ಸೇರಿದಂತೆ ಗೂಡ್ಸ್ ವಾಹನ ಹಾಗೂ ಬಸ್ ಸೇರಿದಂತೆ ಸಾರಿಗೆ ವಾಹನಗಳ ಆಟೋಮೇಟೆಡ್ ಫಿಟ್ನೆಸ್  ಟೆಸ್ಟ್ ಮುಂದಿನ ವರ್ಷ ಎಪ್ರಿಲ್ ತಿಂಗಳಿಂದ ಜಾರಿಯಾಗಲಿದೆ. ಇನ್ನು ಇನ್ನು ಮಧ್ಯಮ ಗಾತ್ರದ ವಾಹನಗಳು, ಮಧ್ಯಮ ಗಾತ್ರದ ಪ್ಯಾಸೆಂಜರ್ ವಾಹನ, ಕಾರು ಸೇರಿದಂತೆ ಇತರ ವಾಹನಗಳ ಆಟೋಮೇಟೆಡ್ ಫಿಟ್ನೆಸ್ ಟೆಸ್ಟಿಂಗ್ ಜೂನ್ 1, 2024ರಿಂದ ಜಾರಿಯಾಗಲಿದೆ.

Old Diesel Vehicles ನೋಂದಣಿ ರದ್ದಾದ ಹಳೇ ಡೀಸೆಲ್ ವಾಹನ ರಿ ರಿಜಿಸ್ಟ್ರೇಶನ್ ಮಾಡಲು ಇದೆ ದಾರಿ!

ಆಟೋಮೆಟೆಡ್ ಫಿಟ್ನೆಸ್ ಟೆಸ್ಟ್ ನೀತಿ ಇಲ್ಲಿಗೆ ಅಂತ್ಯವಾಗಿಲ್ಲ. 8 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನ(ಸಾರಿಗೆ)ವಾಹನಗಳಿಗೆ ಆಟೋಮೇಟೆಡ್ ಫಿಟ್ನೆಸ್ ಟೆಸ್ಟ್ 2 ವರ್ಷ ಅನ್ವಯವಾಗಲಿದೆ. ಇನ್ನು ಖಾಸಗಿ ವಾಹನಗಳಾದ ಕಾರು, ಬೈಕ್ ಸೇರಿದಂತೆ ಇತರ ವಾಹನಗಳು 15 ವರ್ಷದ ಬಳಿಕ ಫಿಟ್ನೆಸ್ ಆಟೋಮೆಟೆಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. 

10 ವರ್ಷ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ರಸ್ತೆ ಮೇಲೆ ಓಡಿಸಲು ಆಟೋಮೇಟೆಡ್ ಫಿಟ್ನೆಸ್ ಪರೀಕ್ಷೆ, ರಿ ರಿಜಿಸ್ಟ್ರೇಶನ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಪಾಸ್ ಆದರೆ ಮಾತ್ರ ಬಳಕೆಗೆ ಅನುಮತಿ ಸಿಗಲಿದೆ. ಆದರೆ ಇಷ್ಟು ಪರೀಕ್ಷೆ ಹಾಗೂ ಅದರ ನೋಂದಣಿಗೆ ದುಬಾರಿ ಹಣ ವ್ಯಯಿಸಬೇಕು. ಇದಕ್ಕಿಂತ ಹೊಸ ವಾಹನವೇ ಲೇಸಾಗಲಿದೆ. 

Vehicle Scrappage Center ಟಾಟಾದಿಂದ ವಾಹನ ಗುಜುರಿ ಘಟಕ, ಮಹಾ ಸರ್ಕಾರದ ಜೊತೆ ಒಪ್ಪಂದ!

ಇನ್ನು ಅವದಿ ಮುಗಿದ ವಾಹನಗಳನ್ನು ಸದ್ಯ ಸ್ವಯಂಪ್ರೇರಿತರಾಗಿ ಗುಜುರಿಗೆ ಹಾಕಬಹುದು. ಗುಜುರಿಗೆ ಹಾಕುವ ವೇಳೆ ಮಾಲೀಕರಿಗೆ ವಾಹನದ ಮಾರುಕಟ್ಟೆ ಬೆಲೆಯನ್ನು ಗುಜುರಿ ಕೇಂದ್ರಗಳು ನೀಡಲಿದೆ.  ಈ ಮೂಲಕ ದೇಶದಲ್ಲಿ ಹೊಗೆ ಉಗುಳುವ ಹಳೇ ವಾಹನಗಳ ಓಡಾಟಕ್ಕೆ ಕೇಂದ್ರ ಬೇಕ್ ಹಾಕಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಿದೆ. 

click me!