Safety Alerts Navigation ಕೇಂದ್ರದಿಂದ ಚಾಲಕರಿಗೆ ಅಪಘಾತ, ಅಪಾಯ ಎಚ್ಚರಿಸುವ ಉಚಿತ ನ್ಯಾವಿಗೇಶನ್ ಆ್ಯಪ್ ಬಿಡುಗಡೆ!

By Suvarna News  |  First Published Dec 19, 2021, 9:35 PM IST
  • ಕೇಂದ್ರ ರಸ್ತೆ ಸಚಿವಾಲಯದಿಂದ ಹೊಸ ನ್ಯಾವಿಗೇಶನ್ ಆ್ಯಪ್ ಲಾಂಚ್
  • ಸಂಚಾರದ ವೇಳೆ ರಸ್ತೆ ತಿರುವು, ಅಪಾಯ, ಅಪಘಾತ ವಲಯಗಳ ಎಚ್ಚರಿಕೆ
  • ಸಂಪೂರ್ಣ ಮಾಹಿತಿಗಳ ಅಲರ್ಟ್, ಉಚಿತ ಆ್ಯಪ್ ಬಿಡುಗಡೆ

ನವದೆಹಲಿ(ಡಿ.19): ಭಾರತದಲ್ಲಿ ರಸ್ತೆ ಅಪಘಾತಗಳ(Road Accident) ಪ್ರಮಾಣ ತಗ್ಗಿಸಲು ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಆದರೆ ಅಪಘಾತದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿಲ್ಲ. ಇದೀಗ ರಸ್ತೆ ಅಪಘಾತಕ್ಕೆ ಮುಕ್ತಿ ನೀಡಲು ಕೇಂದ್ರ ರಸ್ತೆ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ(Union Ministry of Road Transport and Highways) ಉಚಿತ ನ್ಯಾವಿಗೇಶನ್ ಆ್ಯಪ್(Free navigation app) ಬಿಡುಗಡೆ ಮಾಡಿದೆ. ಈ ಆ್ಯಪ್ ಚಾಲಕರಿಗೆ ಅಪಾಯದ ಮುನ್ಯೂಚನೆ ನೀಡಲಿದೆ.

ಚಾಲಕ ಆಯ್ಕೆ ಮಾಡಿಕೊಳ್ಳುವ ರಸ್ತೆ ಪ್ರಯಾಣದಲ್ಲಿ ಎದುರಾಗುವ ಅಪಾಯ, ಕಡಿದಾದ ತಿರುವು, ರಸ್ತೆ ಗುಂಡಿ, ಅಪಘಾತ ವಲಯ(accident zone), ಸ್ಪೀಡ್ ಬ್ರೇಕರ್(speed breaker) ಸೇರಿದಂತೆ ಎಲ್ಲಾ ಮುನ್ನೂಚನೆ ಎಚ್ಚರಿಕೆಯನ್ನು ಚಾಲಕರಿಗೆ ನೂತನ ನ್ಯಾವಿಗೇಶನ್ ಆ್ಯಪ್ ನೀಡಲಿದೆ. ಇದರಿಂದ ಚಾಲಕ ನ್ಯಾವಿಗೇಶನ್ ಸೂಚನೆಯಂತೆ ವಾಹನದ ವೇಗವನ್ನು ಕಡಿಮೆ ಮಾಡಿಕೊಳ್ಳಬಹುದು. ಅಥವ ಎಚ್ಚರಿಕೆಯಿಂದ ವಾಹನ ಚಲಾಯಿಸಬಹುದು. 

Tap to resize

Latest Videos

undefined

Vehicle Deregistration ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!

ನೂತನ ನ್ಯಾವಿಗೇಶನ್ ಆ್ಯಪ್‌ನ್ನು ಕೇಂದ್ರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಐಐಟಿ ಮದ್ರಾಸ್ ಹಾಗೂ ಡಿಜಿಟಲ್  ಟೆಕ್ ಕಂಪನಿ ಮ್ಯಾಪ್ ಮೈ ಇಂಡಿಯಾ ಜಂಟಿಯಾಗಿ ಈ ನ್ಯಾವಿಗೇಶನ್ ಅಭಿವೃದ್ಧಿ ಮಾಡಿದೆ. ಈ ಆ್ಯಪ್ ನ್ಯಾವಿಗೇಶನ್ ಆ್ಯಪ್ ವಾಯ್ಸ್ ಮೂಲಕ ಹಾಗೂ  ಸ್ಕ್ರೀನ್ ಮೇಲೆ ವಿಶ್ಯುಯಲ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಲಿದೆ. ಈ ಅಲರ್ಟ್ ಸಂದೇಶಕ್ಕೆ ಅನುಗುಣವಾಗಿ ಚಾಲಕ ಎಚ್ಚೆತ್ತುಕೊಳ್ಳಬಹುದು.

ಭಾರತದಲ್ಲಿ ರಸ್ತೆಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಈಗಾಗಲೇ ನಡೆದಿರುವ ಅಪಾಘತ ಹಾಗೂ ದುರಂತಗಳ ಅಂಕಿ ಅಂಶಗಳ ಆಧಾರದಲ್ಲಿ ಕೆಲ ವಲಯಗಳನ್ನು ಅಪಘಾತ ವಲಯ, ಅಪಾಯ ವಲಯವಾಗಿ ಗುರುತಿಸಲಾಗಿದೆ.  ಈ ಅಂಕಿ ಅಂಶ ಹಾಗೂ ಇತರ ಕೆಲ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ನ್ಯಾವಿಗೇಶನ್ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ.

ಐಐಟಿ ಮದ್ರಾಸ್, ಮ್ಯಾಪ್ ಮೈ ಇಂಡಿಯಾ 32 ರಾಜ್ಯಗಳ ರಸ್ತೆ ಅಂಕಿ ಅಂಶಗಳನ್ನು ಪಡೆದುಕೊಂಡು ನ್ಯಾವಿಗೇಶನ್ ಅಭಿವೃದ್ಧಿ ಮಾಡಿದೆ. 32 ರಾಜ್ಯಗಳಲ್ಲಿ ನಡೆದ ರಸ್ತೆ ಅಪಘಾತ, ರಸ್ತೆ ಗುಂಡಿ, ರಸ್ತಿ ತಿರುವು, ಹಿಲ್ ರೋಡ್, ಕಡಿದಾದ ರಸ್ತೆ, ಅಪಾಯಕಾರಿ ರಸ್ತೆಯ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಈ ನ್ಯಾವಿಗೇಶನ್ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ.

Hydrogen Fuel:ಸವಾರರಿಗೆ ಸಿಹಿ ಸುದ್ದಿ, ಪೆಟ್ರೋಲ್ ಡೀಸೆಲ್ ಬೇಕಿಲ್ಲ, ಬಂದಿದೆ ಘನತ್ಯಾಜ್ಯ, ಕೊಳಚೆ ನೀರಿನಿಂದ ಓಡುವ ವಾಹನ!

ಕೇಂದ್ರ ರಸ್ತೆ ಸಚಿವಾಲಯ ಭಾರತದಲ್ಲಿ ಆಗುತ್ತಿರುವ ಅಪಘಾತಗಳನ್ನು ಗಣನೀಯವಾಗಿ ತಗ್ಗಿಸಲು ಸತತ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದೆಡೆ ಭಾರತದ ಹೆದ್ದಾರಿ ಹಾಗೂ ಇತರ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಭರದಿಂದ ಸಾಗುತ್ತಿದೆ. 2030ರ ವೇಳೆ ಭಾರತದಲ್ಲಿನ ರಸ್ತೆ ಅಪಘಾತಗಳ ಪ್ರಮಾಣವನ್ನು ಶೇಕಡಾ 50ಕ್ಕೆ ಇಳಿಸಲು ಕೇಂದ್ರ ರಸ್ತೆ ಸಚಿವಾಲಯ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ಚಾಲಕರು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಭಾರತ ನಿರ್ಮಿಸುತ್ತಿದೆ.

ವಾಹನ ಸವಾರರೇ ಎಚ್ಚರ;ಗೂಗಲ್ ಮ್ಯಾಪ್, ಮ್ಯೂಸಿಕ್ ಸಿಸ್ಟಮ್‌ ಬಳಕೆಗೆ ಹೊಸ ರೂಲ್ಸ್!

ತಿರುವು, ಅಪಘಾತ ವಲಯ ಮಾತ್ರವಲ್ಲ, ರಸ್ತೆ ಗುಂಡಿಗಳಿಂದಲೂ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ಹಲವು ಜೀವನಗಳು ಇದೇ ರಸ್ತೆ ಗುಂಡಿಗೆ ಬಲಿಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅತ್ಯುತ್ತಮ ದರ್ಜೆಯ ರಸ್ತೆ ನಿರ್ಮಿಸುತ್ತಿದೆ. ಇದರ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದೀಗ ಉಚಿತ ನ್ಯಾವಿಗೇಶನ್ ಆ್ಯಪ್ ಕೂಡ ಸೇರಿಕೊಂಡಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಭಾರತ ಹಿಂದೆಂದೂ ಕಾಣದ ರೀತಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸುಖಕರ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಸುರಂಗ ಮಾರ್ಗ, ಫ್ಲೈ ಓವರ್ ಸೇರಿದಂತೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಗುಣಮಟ್ಟದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ.  

click me!