ಬೆಂಗಳೂರು(ಡಿ.18): ಭಾರತದಲ್ಲಿ ವಾಹನ ಸ್ಕ್ರಾಪ್ ಪಾಲಿಸಿ(vehicle scrappage policy) ಜಾರಿಗೆ ತರಲಾಗಿದೆ. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಗ್ಗಿಸಲು(Pollution) ಹಾಗೂ ಇಂಧನ ಪೋಲಾಗುತ್ತಿರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹಳೇ ವಾಹನಗಳನ್ನು ಗುಜುರಿ ಹಾಕುವ ನೀತಿ ತರಲಾಗಿದೆ. ಇದೀಗ ವಾಹನಗಳನ್ನು ಗುಜುರಿಗೆ ಹಾಕಲು ವಿಲೇವಾರಿ ಮಾಡಲು ಘಟಕಗಳು ತಲೆ(vehicle scrappage facility) ಎತ್ತುತ್ತಿದೆ. ಇದೀಗ ಟಾಟಾ ಮೋಟಾರ್ಸ್(Tata Motors) ವಾಹನ ಗುಜುರಿ ಘಟಕ ನಿರ್ಮಾಣಕ್ಕೆ ಮಹಾರಾಷ್ಟ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದೀಗ ದೇಶದಲ್ಲಿ ಅತೀ ದೊಡ್ಡ ಗುಜುರಿ ವಾಹನ ಘಟಕ ತಲೆ ಎತ್ತಲಿದೆ
ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಕರಾದ ಟಾಟಾ ಮೋಟಾರ್ಸ್ ಮಹಾರಾಷ್ಟ್ರದಲ್ಲಿ(Maharastra) ನೋಂದಾಯಿತ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ (RVSF) ಅನ್ನು ಸ್ಥಾಪನೆಯನ್ನು ಬೆಂಬಲಿಸುವ ಉದ್ದೇಶಕ್ಕಾಗಿ ಮಹಾರಾಷ್ಟ್ರ ಸರ್ಕಾರದ ಕೈಗಾರಿಕೆಗಳು, ಇಂಧನ ಮತ್ತು ಕಾರ್ಮಿಕ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತ ಸರ್ಕಾರದ ಗೌರವಾನ್ವಿತ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ(Nitin Gadkari) ಮತ್ತು ಇತರ ಪ್ರತಿನಿಧಿಗಳ ಸಮ್ಮುಖದಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಹೆದ್ದಾರಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್‍ನಲ್ಲಿ ಹೂಡಿಕೆಯ ಅವಕಾಶಗಳ ಸಮಾವೇಶದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರಸ್ತಾವಿತ ಸ್ಕ್ರ್ಯಾಪೇಜ್ ಕೇಂದ್ರವು ಜೀವನಾವಧಿ ಮುಗಿದಿರುವ ಸುಮಾರು 35,000 ದಷ್ಟು ಸಾರಿಗೆ ಮತ್ತು ವಾಣಿಜ್ಯ ವಾಹನಗಳ ಮರುಬಳಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
undefined
Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!
RVSF ಸ್ಥಾಪನೆಗಾಗಿ ಮಹಾರಾಷ್ಟ್ರದ ರಾಜ್ಯ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಬಿಡುಗಡೆ ಮಾಡಿದ ಕರಡು ವಾಹನ ಸ್ಕ್ರ್ಯಾಪೇಜ್ ನೀತಿಯ ಪ್ರಕಾರ ಅಗತ್ಯ ಅನುಮೋದನೆಗಳನ್ನು ಕೈಗಾರಿಕೆಗಳು, ಇಂಧನ ಮತ್ತು ಕಾರ್ಮಿಕ ಇಲಾಖೆಯು ಸುಗಮಗೊಳಿಸುತ್ತದೆ. ಸ್ಕ್ರ್ಯಾಪ್ ಮತ್ತು ಕಚ್ಚಾ ತೈಲಕ್ಕಾಗಿ ಕಡಿಮೆ ಆಮದು ಸುಂಕ, MSME ಗಳಿಗೆ ಉದ್ಯೋಗಾವಕಾಶಗಳು, OEM ಗಳಿಗೆ ಹೊಸ ವಾಹನ ಮಾರಾಟದಲ್ಲಿ ಮೇಲುಗೈ ಸಾಧ್ಯತೆ, ವಾಹನ ಮಾಲೀಕರಿಗೆ ಕಡಿಮೆ ಕಾರ್ಯಾಚರಣೆಗಳ ವೆಚ್ಚ, ಗ್ರಾಹಕರಿಗೆ ಸುರಕ್ಷಿತ ಮತ್ತು ಸ್ವಚ್ಛ ವಾಹನಗಳು ಮತ್ತು ಎಲ್ಲರಿಗೂ ಸುಸ್ಥಿರ ಪರಿಸರಗಳಂತಹ ಪ್ರಯೋಜನಗಳೊಂದಿಗೆ ಎಲ್ಲಾ ಮಧ್ಯಸ್ಥಿಕೆದಾರರ ಉದ್ದೇಶವನ್ನು ಇದು ಪರಿಹರಿಸುತ್ತದೆ. ಟಾಟಾ ಮೋಟಾರ್ಸ್ ಪಾಲುದಾರರ ಸಹಯೋಗದಲ್ಲಿ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಸ್ಥಾಪಿಸುತ್ತದೆ. ಟಾಟಾ ಮೋಟಾರ್ಸ್ ಈ ಹಿಂದೆ ಗುಜರಾತ್ ಸರ್ಕಾರದೊಂದಿಗೆ ಅಹಮದಾಬಾದ್‍ನಲ್ಲಿ ನೋಂದಾಯಿತ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ (RVSF) ಅನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ವಾಹನ ಸ್ಕ್ರ್ಯಾಪ್ ನೀತಿಯನ್ನು ಬೆಂಬಲಿಸಲು ಹೆಚ್ಚಿನ ಉಪಕ್ರಮಗಳಿಗೆ ಇತರ ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ.
Vehicle Scrapping Centre: ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ!
"ಮಹಾರಾಷ್ಟ್ರದಲ್ಲಿ ಸ್ಕ್ರ್ಯಾಪಿಂಗ್ ಸೌಲಭ್ಯಗಳ ಸ್ಥಾಪನೆಯನ್ನು ಬೆಂಬಲಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಸೂಕ್ತವಾದ ವಾಹನ ಸ್ಕ್ರ್ಯಾಪಿಂಗ್ ಕೊಡುಗೆ– ವರ್ತುಲ ಆರ್ಥಿಕತೆಯ ಸಿದ್ಧತೆಯ ಉತ್ತೇಜನ - ದ ಜೊತೆಗೆ, ಈ ಉಪಕ್ರಮವು ಸಮರ್ಥನೀಯ ಚಲನಶೀಲತೆಯ ಕ್ಷೇತ್ರದಲ್ಲಿ ನಮ್ಮ ನಾಯಕತ್ವವನ್ನು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಸಹಾಯ ಮಾಡುತ್ತದೆ. ದೇಶಾದ್ಯಂತ ಸ್ಕ್ರ್ಯಾಪಿಂಗ್ ಸೌಲಭ್ಯಗಳನ್ನು ಸ್ಥಾಪಿಸುವ ಈ ಉಪಕ್ರಮದಲ್ಲಿ ನೀತಿ ನಿರೂಪಕರೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ. ಇದು ಒಂದು ಹೊಸ ಅಧ್ಯಾಯದ ಆರಂಭ ಮತ್ತು ಭಾರತದ ಸಾರಿಗೆ ವಲಯಕ್ಕೆ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಎಂದು ಟಾಟಾ ಮೋಟಾರ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಹೇಳಿದ್ದಾರೆ.