ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!

By Suvarna News  |  First Published Jul 20, 2021, 1:11 PM IST

ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸುತ್ತಿವೆ. ಈ ಸಾಲಿಗೆ ಹೊಸದಾಗಿ ರಾಜಸ್ಥಾನ ಸರ್ಕಾರವು ಸೇರಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳ ಖರೀದಿಸುವ ಗ್ರಾಹಕರಿಗೆ ಸರ್ಕಾರವು ಸ್ಟೇಟ್ ಜಿಎಸ್‌ಟಿಯನ್ನು ಮರುಪಾವತಿಸುವ ಯೋಜನೆಯನ್ನು ಪ್ರಕಟಿಸಿದೆ.


ಎಲ್ಲ ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು  ಬಳಕೆಗೆ ಉತ್ತೇಜನ ನೀಡಲಾರಂಭಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಂತೆ ಪರ್ಯಾಯ ವಾಹನಗಳ ಮಾರುಕಟ್ಟೆಯನ್ನು ವಿಸ್ತರಿಸುವ  ಪ್ರಯತ್ನ ಇರುವಂತೆ ಕಾಣುತ್ತಿದೆ. ಮೊನ್ನೆಯಷ್ಟೇ ಗುಜರಾತ್, ಗೋವಾ ರಾಜ್ಯಗಳು ತಮ್ಮ ಎಲೆಕ್ಟ್ರಿಕ್ ನೀತಿಯನ್ನು ಪ್ರಕಟಿಸಿದ್ದವು.

ಇದೀಗ ರಾಜಸ್ಥಾನವೂ ಇವಿ ನೀತಿಯನ್ನು ಘೋಷಿಸಿದೆ.  ಇದಕ್ಕೂ ಮೊದಲು ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಇವಿ ನೀತಿಯನ್ನು ಪ್ರಕಟಿಸಿ, ಜಾರಿಗೊಳಿಸುತ್ತಿವೆ. ಈಗ ಈ ಸಾಲಿಗೆ ಹೊಸದಾಗಿ ರಾಜಸ್ಥಾನವು ಸೇರಿಕೊಂಡಿದೆ.

Tap to resize

Latest Videos

undefined

ನೀವು ರಾಜಸ್ಥಾನದಲ್ಲಿ ಇವಿ ಖರೀದಿಸಿದರೆ ರಾಜ್ಯಕ್ಕೆ ಸಂಬಂಧಿಸಿದ ಜಿಎಸ್‌ಟಿ(ಎಸ್‌ಜಿಎಸ್‌ಟಿ)ಯನ್ನು ಸರಕಾರವೇ ರಿಫಂಡ್ ಮಾಡಲಿದೆ. ಆದರೆ, ಇದಕ್ಕೊಂದು ಷರತ್ತು ಇದ್ದು, 2021 ಏಪ್ರಿಲ್‌ನಿಂದ 2022 ಮಾರ್ಚ್‌ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ ಮಾತ್ರ ಈ ಬೆನೆಫಿಟ್ ಸಿಗಲಿದೆ.

499 ರೂಪಾಯಿ ಕೊಟ್ಟು Ola Electric ಸ್ಕೂಟರ್ ಬುಕ್ ಮಾಡ್ಕೊಳ್ಳಿ!

ಸ್ಟೇಟ್ ಜಿಎಸ್‌ಟಿ ರಿಫಂಡ್ ಜತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ನಗದು ರಿಯಾಯ್ತಿ ಕೂಡ ಸಿಗಲಿದೆ. ವಿಶೇಷವಾಗಿ ಎಲೆಕ್ಟ್ರಿಕ್ ದ್ವಿಚಕ್ರವಾಹನ ಮತ್ತು ತ್ರಿಚಕ್ರವಾಹನ ಖರೀದಿದಾರರಿಗೆ ಈ ಪ್ರಯೋಜನ ದೊರೆಯಲಿದೆ. ಆದರೆ, ಈ ನಗದು ರಿಯಾಯ್ತಿಯು ಗ್ರಾಹಕರಿಸುವ ಬ್ಯಾಟರಿ ಗಾತ್ರದ ಮೇಲೆ ನಿರ್ಧಾರವಾಗಲಿದೆ. ಒಟ್ಟಾರೆಯಾಗಿ 5000 ರೂ.ನಿಂದ 20,000 ರೂ.ವರೆಗೂ ನಗದು ರಿಯಾಯ್ತಿ ಇರಲಿದೆ ಎಂದು ಹೇಳಲಾಗುತ್ತಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಾರರಿಗೆ 5000 ರೂ. ಮತ್ತು 10,000 ರೂಪಾಯಿವರೆಗೆ ಪ್ರಯೋಜನ ದೊರೆಯಲಿದೆ. ಈ ನಗದು ರಿಯಾಯ್ತಿಯ ಬ್ಯಾಟರಿ ಗಾತ್ರದ ಮೇಲೆ ಅವಲಂಬಿತವಾಗಲಿದೆ. ಅಂದರೆ, 2 ಕಿಲೋ ವ್ಯಾಟ್ ಅವರ್ ನಡುವೆ ಮತ್ತು 5 ಕಿಲೋ ವ್ಯಾಟ್ ಅವರ ಮೇಲ್ಪಟ್ಟ ವಾಹನಗಳಿಗೆ ಈ ಪ್ರಯೋಜನ ದೊರೆಯಲಿದೆ.

ಅದೇ ರೀತಿ, 3ರಿಂದ 5 ಕಿಲೋ ವ್ಯಾಟ್ ಅವರ್ ಮತ್ತು ಅದಕ್ಕಿಂತ ಮೇಲ್ಪಟ್ಟ ಬ್ಯಾಟರಿಯನ್ನು ಹೊಂದಿರುವ ತ್ರಿಚಕ್ರವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ರಾಜಸ್ಥಾನ ಸರ್ಕಾರವು 10,000 ರೂಪಾಯಿ ಮತ್ತು 20,000 ನಗದು ರಿಯಾಯ್ತಿಯನ್ನು ನೀಡಲಿದೆ. ಆದರೆ, ಇತರ ರಾಜ್ಯಗಳಂತೆ ರಾಜಸ್ಥಾನ ಸರ್ಕಾರವು, ಪ್ರಯಾಣಿಕ ಎಲೆಕ್ಟ್ರಿಕ್ ಕಾರುಗಳು ಮತ್ತು ಬಸ್‌ಗಳ ಖರೀದಿಗೆ ಯಾವುದೇ ರೀತಿಯ ಸಬ್ಸಿಡಿಯನ್ನು ಒದಗಿಸುತ್ತಿಲ್ಲ. ಮಹಾರಾಷ್ಟ್ರ, ಗುಜರಾತ್ ಮತ್ತು ದಿಲ್ಲಿ ರಾಜ್ಯಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ದ್ವಿಚಕ್ರವಾಹನ ಮತ್ತು ತ್ರಿಚಕ್ರ ವಾಹನಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತ ಕೂಡ ಕಡಿಮೆಯೇ ಆಗಿದೆ ಎಂದು ವಿಶ್ಲೇಷಿಸಬಹುದಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷದಲ್ಲಿ ಎಲ್ಲಾ ಸೋಲ್ಡೌಟ್, ಯಾವ ಬೈಕಿದು?

ಸದ್ಯ ಭಾರತೀಯ ವಾಹನೋದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ವೇಗದಲ್ಲಿ ಸಾಗುತ್ತಿದೆ. ವಿಶೇಷವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದನ್ನು ಮತ್ತಷ್ಟು ಬೆಳಗಿಸುವ ಕೆಲಸವನ್ನು ರಾಜ್ಯ ಸರ್ಕಾರಗಳು ಮಾಡುತ್ತಿವೆ. ಇದೇ ಅವಕಾಶವನ್ನು ಬಳಸಿಕೊಳ್ಳಲು ಹಲವು ಕಂಪನಿಗಳು ಕೂಡ ಮುಂದಾಗಿವೆ. ಓಲಾದಂತೆ ಮೊಬಿಲಿಟಿ ಕಂಪನಿಗಳು ಕೂಡ ಎಲೆಕ್ಟ್ರಿಕ್ ಸ್ಕೂಟರ್‌ ಉತ್ಪಾದನೆಗಿಳಿದಿರುವುದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು.

ಕೋವಿಡ್ ಕಾರಣದಿಂದಾಗಿ ವೈಯಕ್ತಿ ವಾಹನಗಳ ಖರೀದಿಯನ್ನು ಜನರು ಹೆಚ್ಚಾಗ ಇಷ್ಟಪಡುತ್ತಿದ್ದಾರೆ. ಇದರ ಪರಿಣಾಮವೇ ಎಲೆಕ್ಟ್ರಿಕ್ ಬೈಕುಗಳಿಗೆ ಹೆಚ್ಚಿನ  ಬೇಡಿಕೆಯುಂಟಾಗುತ್ತಿದೆ. ಆದರೆ, ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿರುವಷ್ಟು ಬೇಡಿಕೆ ತ್ರಿ ಚಕ್ರವಾಹನಗಳಿಗಿಲ್ಲ. ಕೇಂದ್ರ ಸರ್ಕಾರವು ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಬ್ಸಿಡಿ ಸೇರಿದಂತೆ ಇನ್ನಿತರ ಆಕರ್ಷಕ ಯೋಜನೆಗಳನ್ನು ಪ್ರಕಟಿಸುವ ಮೂಲಕ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುವಂತೆ ಮಾಡಲಾಗುತ್ತಿದೆ. 

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ವರ್ಷಕ್ಕೆ 25 ಕೋಟಿ ರೂ. ಸಬ್ಸಿಡಿ

ಎಲೆಕ್ಟ್ರಿಕ್ ವಾಹನಗಳ ಖರೀದಿ ಮತ್ತು ಬಳಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಉಳಿತಾಯ ಮಾತ್ರವಲ್ಲದೇ ಪರಿಸರ ಸಂರಕ್ಷಣೆಯೂ ಆಗಲಿದೆ. ಹಾಗಾಗಿ, ಎಲ್ಲ ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನುಹೆಚ್ಚಿಸಲು ಪ್ರಯತ್ನ ಪಡುತ್ತಿವೆ.

click me!