ITI ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಜೊತೆ ಟೊಯೋಟಾ ಕಿರ್ಲೋಸ್ಕರ್ ಒಪ್ಪಂದ!

By Suvarna NewsFirst Published Jul 17, 2021, 8:40 PM IST
Highlights
  • ರಾಜ್ಯಾದ್ಯಂತ ಐಟಿಐಗಳಲ್ಲಿ ಕೈಗಾರಿಕಾ-ನಿರ್ದಿಷ್ಟ ಕೌಶಲ್ಯ ಅಭಿವೃದ್ಧಿಗಾಗಿ ಯೋಜನೆ
  • ಟೊಯೋಟಾ ಕಿರ್ಲೋಸ್ಕರ್ ಮೋಟಾರ್-ರಾಜ್ಯ ಸರ್ಕಾರ ಒಪ್ಪಂದ
  • ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿರುವ ಐಟಿಐಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ

ಬೆಂಗಳೂರು(ಜು.17): ಕರ್ನಾಟಕದ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ವಿದ್ಯಾರ್ಥಿಗಳಿಗೆ ಕೈಗಾರಿಕೆ-ನಿರ್ದಿಷ್ಟ ಕೌಶಲ್ಯ ಮತ್ತು ಜ್ಞಾನವನ್ನು ನೀಡಲು ಟೊಯೋಟಾ ಕಿರ್ಲೋಸ್ಕರ್ ಮುಂದಾಗಿದೆ. ಇದಕ್ಕಾಗಿ  ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತರೊಂದಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಒಪ್ಪಂದ ಮಾಡಿಕೊಂಡಿದೆ.

ಟೊಯೋಟಾ ಕಿರ್ಲೋಸ್ಕರ್‌ನಿಂದ ರಾಜ್ಯಕ್ಕೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ನೆರವು!

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಮೇಲೆ ಭಾರತ ಸರ್ಕಾರ ಹೆಚ್ಚಿನ ಗಮನ ಹರಿಸಿರುವ ಹಿನ್ನೆಲೆಯಲ್ಲಿ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಕೌಶಲ್ಯದ ಅಗತ್ಯವಿದೆ. ಹೆಚ್ಚಿನ ಪ್ರಮಾಣದ ಉತ್ಪಾದನೆಗೆ ಸಜ್ಜುಗೊಳಿಸಲು, ಉದ್ಯಮಿಗಳಿಗೆ ನುರಿತ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು  ಟೊಯೋಟಾ ಒಪ್ಪಂದ ಮಾಡಿಕೊಂಡಿದೆ.

ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿರುವ ಐಟಿಐಗಳಲ್ಲಿ ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತರಬೇತಿ ಕಾರ್ಯಕ್ರಮವು ಐಟಿಐ ಕೋರ್ಸ್ ಗಳನ್ನು ಅನುಸರಿಸುತ್ತಿರುವ ಯುವಕರನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮಕ್ಕೆ ಪ್ರವೇಶಗಳು ಆಗಸ್ಟ್  2021ರಲ್ಲಿ ಪ್ರಾರಂಭವಾಗುತ್ತವೆ. ಒನ್ ಟ್ರೇಡ್ –ಆಟೋಮೊಬೈಲ್ ಅಸೆಂಬ್ಲಿಯಲ್ಲಿ 96 ಗಂಟೆಗಳ  ನುರಿತ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮವನ್ನು ನೀಡಲಾಗುವುದು.

ಕಾರ್ಯಕ್ರಮದ ಮೂಲಕ  ಟಿಕೆಎಂ, ಐಟಿಐ ವಿದ್ಯಾರ್ಥಿಗಳಿಗೆ ಉತ್ಪಾದನಾ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಪಡೆಯಲು ಮತ್ತು ಅವರ ಉದ್ಯೋಗ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡಿಕೊಡುತ್ತದೆ.  ಜಾಗತಿಕವಾಗಿ ಪ್ರಸಿದ್ಧವಾಗಿರುವ  ಟೊಯೋಟಾ  ಪ್ರೊಡಕ್ಷನ್ ಸಿಸ್ಟಮ್ ನಲ್ಲಿ ವ್ಯಾಪಕ ವಾದ ಅನುಭವವನ್ನು ಹೊಂದಿರುವ ಪ್ರಮಾಣೀಕೃತ ಟೊಯೋಟಾ ತರಬೇತುದಾರರಿಂದ ಯುವಕರಿಗೆ ತರಬೇತಿ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ಆಟೋಮೋಟಿವ್ ಉದ್ಯಮದಲ್ಲಿ ಅಪ್ರೆಂಟಿಸ್ ಶಿಪ್ ಗೆ ಅರ್ಹರಾಗಲು ಐಟಿಐ ಮತ್ತು ಟಿಕೆಎಂ ಜಂಟಿಯಾಗಿ ನಡೆಸುವ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

click me!