ಬೆಂಗಳೂರು(ಜು.19): ಕೊರೋನಾ ಸಂಕಷ್ಟದಲ್ಲಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಲು ಕೊಡುಗೆ ನೀಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ರಾಮನಗರ ಕೋವಿಡ್ ಆಸ್ಪತ್ರೆಗೆ ಟೊಯೋಟಾ ಕಿರ್ಲೋಸ್ಕರ್ ಅತ್ಯಾಧುನಿಕ ಸಿಟಿ ಸ್ಕ್ಯಾನರ್ ಹಸ್ತಾಂತರಿಸಿದೆ.
ಬಿಡದಿ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಸ್ಥಾಪನೆ: ಟೊಯೋಟಾ ಕಿರ್ಲೋಸ್ಕರ್!
ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರ ಸಮ್ಮುಖದಲ್ಲಿ ಸಿಟಿ ಸ್ಕ್ಯಾನರ್ ಹಸ್ತಾಂತರಿಸಲಾಗಿದೆ. ಇದರೊಂದಿಗೆ ತುರ್ತು ಅಗತ್ಯವುಳ್ಳ ರೋಗಿಗಳು ಸಿಟಿ ಸ್ಕ್ಯಾನ್ ಗಾಗಿ ಹೆಚ್ಚು ದೂರ ಪ್ರಯಾಣಿಸಬೇಕಾಗಿಲ್ಲ, ಆ ಮೂಲಕ ತ್ವರಿತ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಅನುವು ಮಾಡಿಕೊಡಲಾಗುತ್ತಿದೆ.
ಆರೋಗ್ಯ ಸೌಲಭ್ಯಗಳನ್ನು ತ್ವರಿತವಾಗಿ ವಿಸ್ತರಿಸುವ ಕರ್ನಾಟಕ ಸರ್ಕಾರದ ಪ್ರಯತ್ನಗಳಿಗೆ, ವಿಶೇಷವಾಗಿ ರಾಜ್ಯದ ಗ್ರಾಮೀಣ ಭಾಗಗಳ ಜನರಿಗೆ ಟಿಕೆಎಂ ನಿರಂತರವಾಗಿ ಪೂರಕ ಕೆಲಸಗಳನ್ನು ಮಾಡುತ್ತಿದ್ದು, ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ, ಕಾರ್ಪೊರೇಟ್ ಗಳ ಸಹಾಯದಿಂದ ಈಗ ರಚಿಸಲಾಗುತ್ತಿರುವ ಮೂಲಸೌಕರ್ಯವು ಅಗತ್ಯ ಸಂದರ್ಭದಲ್ಲಿ ತ್ವರಿತವಾಗಿ ರೋಗ ಪತ್ತೆ ಪ್ರಕ್ರಿಯೆಯನ್ನು ಸುಧಾರಿಸುವ ಮೂಲಕ ಸಾಂಕ್ರಾಮಿಕವನ್ನೂ ಮೀರಿ ಸಾರ್ವಜನಿಕರಿಗೆ ಹೆಚ್ಚು ಸಹಾಯ ಮಾಡಲಿದೆ ಎಂದು ಡಾ.ಸಿ ಎನ್ ಅಶ್ವತ್ಥನಾರಾಯಣ್ ಹೇಳಿದರು.
ಟೊಯೋಟಾ ಕಿರ್ಲೋಸ್ಕರ್‌ನಿಂದ ರಾಜ್ಯಕ್ಕೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ನೆರವು!
ಅನೇಕ ಜನರು ತಮ್ಮ ಚಿಕಿತ್ಸೆಯ ಅಗತ್ಯಗಳಿಗಾಗಿ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಅವಲಂಬಿತರಾಗಿದ್ದು, ಸಾರ್ವಜನಿಕ ಕ್ಷೇತ್ರದ ಆರೋಗ್ಯ ಮೂಲಸೌಕರ್ಯವನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯಗಳ ಅನುಕೂಲಕ್ಕಾಗಿ ಟಿಕೆಎಂ ಸರ್ಕಾರದೊಂದಿಗೆ ಕೈ ಜೋಡಿಸುವ ಮೂಲಕ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡಲು ಬದ್ಧವಾಗಿದೆ. ಸಾಂಕ್ರಾಮಿಕ ರೋಗವು ಲಭ್ಯವಿರುವ ಆರೋಗ್ಯ ಮೂಲಸೌಕರ್ಯದ ಮೇಲೆ ಹೆಚ್ಚು ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ ನಾವು ಈ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್. ದಾಲ್ವಿ ಹೇಳಿದ್ದಾರೆ.