ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇತ್ತೀಚೆಗೆ ಟಾಟಾ ಸನ್ಸ್ ಮಾಜಿ ಚೇರ್ಮೆನ್ ಸೈರಸ್ ಮಿಸ್ತ್ರಿ ನಿಧನದ ಬಳಿಕ ಕಾರಿನ ಸೀಟ್ ಬೆಲ್ಟ್ ವಿಚಾರ ಭಾರಿ ಚರ್ಚೆಯಾಗಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದೆ. ಇದೀಗ ಕರ್ನಾಟಕದಲ್ಲೂ ಕಾರಿನನಲ್ಲಿ ಸೀಟ್ ಬೆಲ್ಟ್ ಕಡ್ಡಾಯ ನಿಯಮ ಜಾರಿಯಾಗಿದೆ.
ಬೆಂಗಳೂರು(ಅ.19); ಭಾರತದಲ್ಲಿ ಮೂಲಭೂತ ಸೌಕರ್ಯಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರ ಬೆನ್ನಲ್ಲೇ ವಾಹನಗಳ ನಿಯಮದಲ್ಲೂ ಹಲವು ಬದಲಾವಣೆ ತರಲಾಗಿದೆ. ಪ್ರಮುಖವಾಗಿ ಸುರಕ್ಷತೆ ವಿಚಾರದಲ್ಲಿ ಭಾರತ ಯಾವುದೇ ರಾಜಿಯಾಗುತ್ತಿಲ್ಲ. ಇದೀಗ ಕಾರು ಪ್ರಯಾಣಿಕರ ಸುರಕ್ಷತೆ ನಿಯಮ ಮತ್ತಷ್ಟು ಬಿಗಿಯಾಗಿದೆ. ಟಾಟಾ ಸನ್ಸ್ ಮಾಜಿ ಚೇರ್ಮೆನ್ ಸೈರಸ್ ಮಿಸ್ತ್ರಿ ಅಪಘಾತದ ಬಳಿಕ ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸೀಟ್ ಬೆಲ್ಟ್ ಕಡ್ಡಾಯ ಮಾಡಬೇಕು ಅನ್ನೋ ಚರ್ಚೆ ಹೆಚ್ಚಾಗಿತ್ತು. ಕೇಂದ್ರ ಸರ್ಕಾರ ಈಗಾಗಲೇ ಈ ಕುರಿತು ಸ್ಪಷ್ಟ ಸೂಚನೆ ನೀಡಿದೆ. ಹಲವು ರಾಜ್ಯಗಳಲ್ಲಿ ಈ ನಿಯಮ ಜಾರಿಯಾಗಿದೆ. ಇದೀಗ ಕರ್ನಾಟಕದಲ್ಲೂ ಕಾರು ಪ್ರಯಾಣಿಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ಅಕ್ಟೋಬರ್ 19 ರಿಂದ ನೂತನ ನಿಯಮ ಜಾರಿಯಾಗಿದೆ. ಈ ಹಿಂದೆ ಕಾರು ಚಾಲಕ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿತ್ತು. ಇದೀಗ ಕಾರು ಚಾಲಕನ ಜೊತೆಗೆ ಕಾರಿನಲ್ಲಿರುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸೈರಸ್ ಮಿಸ್ತ್ರಿ ನಿಧನದ ಬಳಿಕ ಕೇಂದ್ರ ಸರ್ಕಾರ ಪ್ರಯಾಣಿಕರು ಸುರಕ್ಷತೆಗೆ ಕಠಿಣ ನಿಯಮ ತೆಗೆದುಕೊಂಡಿದೆ. ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು ಎಂದಿದೆ. ಈ ಕುರಿತು ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ರಾಜ್ಯಗಳಿಗೆ ಆದೇಶ ನೀಡಿದೆ. ಇದರ ಅನ್ವಯ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇದೀಗ ಮೈಸೂರು ನಗರ, ಹುಬ್ಬಳ್ಳಿ ಧಾರವಾಡ ನಗರ, ಮಂಗಳೂರು, ಬೆಳಗಾವಿ, ಕಲಬುರಗಿ, ಬೆಂಗಳೂರು ನಗರ ಹಾಗೂ ಗ್ರಾಮೀಣ, ಕೆಜಿಎಫ್ ಸೇರಿದಂತೆ ಎಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆದೇಶ ನೀಡಿದ್ದಾರೆ. ಸುತ್ತೋಲೆ ಹೊರಡಿಸಿದ್ದು, ಕಟ್ಟು ನಿಟ್ಟಾಗಿ ನಿಯಮ ಪಾಲಿಸಲು ಸೂಚಿಸಲಾಗಿದೆ.
undefined
ಕಾರುಗಳಲ್ಲಿ ಆರು ಏರ್ಬ್ಯಾಗ್ ಕಡ್ಡಾಯ: ಆದೇಶದ ಜಾರಿ ಮುಂದೂಡಿಕೆ ಸಾಧ್ಯತೆ
ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿದರೆ 1,000 ರೂಪಾಯಿ ದಂಡ ವಿಧಿಸಲು ಸೂಚಿಸಲಾಗಿದೆ. ಎರಡು ಅಥವಾ ಮೂರು ಬಾರಿ ನಿಯಮ ಉಲ್ಲಂಘಿಸಿದರೆ ದಂಡದ ಮೊತ್ತ ಹಾಗೂ ಕಠಿಣ ಶಿಕ್ಷೆಯೂ ವಿಧಿಸಲಾಗುತ್ತದೆ.
ಮುಂಬೈನಲ್ಲಿ ನವೆಂಬರ್ 1 ರಿಂದ ಸೀಟ್ ಬೆಲ್ಟ್ ಕಡ್ಡಾಯ
ನಗರದಲ್ಲಿ ನಾಲ್ಕು ಚಕ್ರದ ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರೂ ನ.1ರಿಂದಲೇ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂದು ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ.ಒಬ್ಬರು ಸೀಟ್‌ಬೆಲ್ಟ್ ಧರಿಸದಿದ್ದರೂ 1000 ರುಗಳ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. 2019ರ ಮೋಟಾರು ವಾಹನ ಕಾಯ್ದೆ ಪ್ರಕಾರ ಸೆಕ್ಷನ್ 194ರಡಿಯಲ್ಲಿ ಸೀಟ್‌ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸೀಟ್‌ಬೆಲ್ಟ್ ಸೌಲಭ್ಯ ಇಲ್ಲದ ವಾಹನಗಳಿಗೆ ಸೀಟ್‌ಬೆಲ್ಟ್ ಅಳವಡಿಸಿಕೊಳ್ಳಲು ನ.1 ರವರೆಗೆ ಕಾಲಾವಕಾಶ ನೀಡಲಾಗಿದೆ. ಮುಂಬೈ ರಸ್ತೆಗಳಲ್ಲಿ ಓಡಾಡುವ ಎಲ್ಲ ನಾಲ್ಕು ಚಕ್ರ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಿದ್ದು ಅನುಸರಿಸದೇ ಹೋದಲ್ಲಿ ಸೆ 194 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತಿಚೆಗೆ ಕಾರು ಅಪಘಾತದಲ್ಲಿ ಸೀಟ್‌ಬೆಲ್ಟ್ ಧರಿಸದೆ ಅನೇಕ ಸಾವು ನೋವುಗಳಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸೀಟ್ ಬೆಲ್ಟ್ ನನ್ನ ಜೀವ ಉಳಿಸಿತು, ಅಪಘಾತವಾದರೂ ಬದುಕುಳಿದ ವ್ಯಕ್ತಿಯ ಅನುಭವ ಕಥನ