ಪೆಟ್ರೋಲ್, ಡೀಸೆಲ್ ದರಗಳು ಗಗನಕ್ಕೇರುತ್ತಿದ್ದಂತೆ ಬಹಳಷ್ಟು ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಆದರೆ, ಈ ವಾಹನಗಳ ಬೆಲೆ ಅಗಾಧವಾಗಿರುವುದರಿಂದ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಿಡಿಯನ್ನು ಘೋಷಿಸುತ್ತಿವೆ.
ಕರ್ನಾಟಕವು ಸೇರಿದಂತೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಹಲವು ಉತ್ತೇಜನಕಾರಿ ಉಪಕ್ರಮಗಳನ್ನು ಘೋಷಿಸುತ್ತಿವೆ. ಈ ಸಾಲಿಗೆ ಇದೀಗ ಓಡಿಶಾ ರಾಜ್ಯ ಕೂಡ ಸೇರಿದೆ.
ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಯ ಮೇಲೆ ಹಲವು ಆಫರ್‌ಗಳನ್ನು ಓಡಿಶಾ ಸರ್ಕಾರ ನೀಡಲಿದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಿಗುವ ಯಾವುದೇ ಅವಕಾಶಗಳನ್ನು ರಾಜ್ಯ ಸರ್ಕಾರ ಕೈ ಚೆಲ್ಲಲು ಬಿಡುತ್ತಿಲ್ಲ. ಕಳೆದ ತಿಂಗಳ ಅಧಿಸೂಚನೆಗೊಂಡ ಎಲೆಕ್ಟ್ರಿಕ್ ವೆಹಿಕಲ್ ಕರಡು ನೀತಿಯ ಪ್ರಕಾರ, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಶೇ.15ರಷ್ಟು ಆಫರ್ ದೊರೆಯುವ ನಿರೀಕ್ಷೆ ಇದೆ. ಜೊತೆಗೆ 2025ರ ಹೊತ್ತಿಗೆ ಸರ್ಕಾರ ಮಟ್ಟದಲ್ಲಿ ಶೇ.20ರಷ್ಟು ಬ್ಯಾಟರಿ ಚಾಲಿತ ವಾಹನಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹಾಕಿಕೊಂಡಿದೆ ಎಂದು ಮಾಧ್ಯಮಗಳು, ಸುದ್ದಿ ಜಾಲತಾಣಗಳು ವರದಿ ಮಾಡಿವೆ.
undefined
ಬಜಾಜ್‍ನ ಹೊಸ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಬಿಡುಗಡೆ
ಓಡಿಶಾ ಸರ್ಕಾರ ರೂಪಿಸಿರುವ ಕರಡು ನೀತಿಯ ಪ್ರಕಾರ, ಬ್ಯಾಟರಿ ಚಾಲಿತ ತ್ರಿಚಕ್ರವಾಹನಗಳ ಖರೀದಿ ಮೇಲೆ ಗರಿಷ್ಠ 12,000 ರೂಪಾಯಿ, ದ್ವಿಚಕ್ರ ವಾಹನಗಳ ಖರೀದಿ ಮೇಲೆ 5 ಸಾವಿರ ರೂಪಾಯಿ ಹಾಗೂ ನಾಲ್ಕು ಚಕ್ರ ವಾಹನಗಳ ಖರೀದಿ ಮೇಲೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೂ ಸಬ್ಸಿಡಿ ದೊರೆಯಲಿದೆ.
ಒಂದು ವೇಳೆ ಸರ್ಕಾರಿ ನೌಕರರು ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಿದರೆ ಅವರಿಗೆ ಶೇ.100ರಷ್ಟು ಬಡ್ಡಿ ರಹಿತ ಸಾಲ ದೊರೆಯಲಿದೆ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ. ಹಾಗೆಯೇ, ಕಚೇರಿಯ ಅಧಿಕೃತ ಕೆಲಸಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳನ್ನೇ ಸರ್ಕಾರಿ ಇಲಾಖೆಗಳು, ಕಚೇರಿಗಳು, ಸಾರ್ವಜನಿಕ ವಲಯದ ಕಂಪನಿಗಳು ಬಾಡಿಗೆಗೆ ತೆದುಕೊಳ್ಳಬೇಕು. ಎಲೆಕ್ಟ್ರಿಕ್ ವೆಹಿಕಲ್‌ಗಳಿಗೆ ಪ್ರಥಮ ಆದ್ಯತೆ ನೀಡಬೇಕೆಂದು ನೀತಿಯಲ್ಲಿ ತಿಳಿಸಲಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಮುನ್ಸಿಪಲ್ ಅಧಿಕಾರಿಗಳು, ಎಲ್ಲ ಎಲೆಕ್ಟ್ರಿಕ್ ವಾಹನಗಳ ನಿಲುಗಡೆಯಲ್ಲಿ ಸಬ್ಸಿಡಿ ನೀಡಬೇಕು ಮತ್ತು ಬ್ಯಾಟರಿ ಚಾರ್ಜಿಂಗ್ ಪಾಯಿಂಟ್ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ನೀತಿಯಲ್ಲಿ ತಿಳಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಈ ಕೆಲಸವನ್ನು ಮಾಡಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ, ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಿಡಿ ಮಾತ್ರವಲ್ಲದೇ ರಸ್ತೆ ತೆರಿಗೆ, ವಾಹನ ನೋಂದಣಿಯಲ್ಲೂ ರಿಯಾಯ್ತಿ ನೀಡುವ ಬಗ್ಗೆ ಓಡಿಶಾ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಟಾಟಾ ಟಿಯಾಗೋ ಈಗ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯ!
ಓಡಿಶಾದಲ್ಲಿ ಸದ್ಯ 3,500ರಷ್ಟು ಬ್ಯಾಟರಿ ಚಾಲಿತ ವಾಹನಗಳು ಓಡಾಡುತ್ತಿವೆ. ಇದೇ ವೇಳೆ ರಾಜ್ಯದಲ್ಲಿ ತೈಲ ಇಂಧನ ಆಧರಿತ 26 ಲಕ್ಷ ವಾಹನಗಳು ಸಕ್ರಿಯವಾಗಿದ್ದು, ಈ ಪೈಕಿ 21 ಲಕ್ಷ ದ್ವಿ ಚಕ್ರ ವಾಹನಗಳಿವೆ. ಅಂದರೆ ಒಟ್ಟು ತೈಲ ಇಂಧನ ಆಧರಿತ ವಾಹನಗಳ ಪೈಕಿ ಶೇ.82ರಷ್ಟು ಪಾಲನ್ನು ದ್ವಿಚಕ್ರವಾಹನಗಳೇ ಪಡೆದುಕೊಂಡಿವೆ.
ಇದೇ ವೇಳೆ, ರೆಸೆಡೆನ್ಷಿಯಲ್ ಮತ್ತು ಕಮರ್ಷಿಯಲ್ ಬಿಲ್ಡಿಂಗ್ ಮಾಲೀಕರು ತಮ್ಮ ಆವರಣಗಳಲ್ಲಿ ಖಾಸಗಿಯಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಓಡಿಶಾ ಸರ್ಕಾರದ ಕರಡು ನೀತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೌಸಿಂಗ್ ಮತ್ತು ಅರ್ಬನ್ ಡೆವಲಪ್‌ಮೆಂಟ್ ಇಲಾಖೆಯು ಹೌಸಿಂಗ್ ಪಾಲಿಸಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಲಿದೆ. ಹಾಗೆಯೇ, ಖಾಸಗಿಯಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಬೇಕಾಗುವ ಪರಿಕರಗಳನ್ನು ಖರೀದಿಗೆ ಓಡಿಶಾ ಸರ್ಕಾರ 5 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿವರೆಗೂ ಹಣಕಾಸು ನೆರವವನ್ನು ಕೊಡಲಿದೆ ಎಂದು ನೀತಿಯಲ್ಲಿ ತಿಳಿಸಲಾಗಿದೆ.
ಈ ಮೊದಲೇ ಹೇಳಿದಂತೆ ಓಡಿಶಾದಂತೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಜನರನ್ನು ಪ್ರೇರೇಪಿಸಲು ಹಲವು ಯೋಜನೆಗಳನ್ನು ಪ್ರಕಟಿಸುತ್ತಿವೆ. ಕೇಂದ್ರ ಸರ್ಕಾರ ಕೂಡ ಈ ದಿಸೆಯಲ್ಲಿ ಕಾರ್ಯನಿರತವಾಗಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಯಿಂದ ಇಂಧನ ಉಳಿತಾಯ ಮಾತ್ರವಲ್ಲದೇ ಪರಿಸರ ಸಂರಕ್ಷಣೆ ಕೂಡಾ ಆಗಲಿದೆ.
ಮೇ ತಿಂಗಳಲ್ಲಿ ಮಾರುತಿಯ ಹೊಸ ಸೆಲೆರಿಯೋ ಕಾರು ಮಾರುಕಟ್ಟೆಗೆ?