ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಆರಂಭ

Published : May 23, 2023, 08:17 PM IST
ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಆರಂಭ

ಸಾರಾಂಶ

ಮೇ19 ರಿಂದ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಸೇವೆಯನ್ನು ಕಲ್ಪಿಸಲಾಗಿದೆ. ಎಲೆಕ್ಟ್ರಿಕ್ ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ತಡೆರಹಿತ ಪ್ರಯಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ.23): ಕರ್ನಾಟಕ ಸಾರಿಗೆ ಸಂಸ್ಥೆ ಬದಲಾವಣೆಗೆ ಮುಂದಾಗಿದ್ದು, ಎಲೆಕ್ಟ್ರಿಕ್ ಬಸ್‌ಗಳ ಕಡೆ ಮುಖ ಮಾಡಿದೆ. ಮೇ19 ರಿಂದ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಸೇವೆಯನ್ನು ಕಲ್ಪಿಸಲಾಗಿದೆ. ಎಲೆಕ್ಟ್ರಿಕ್ ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ತಡೆರಹಿತ ಪ್ರಯಾಣಕ್ಕೆ ಸಂತಸ ಹೊರಹಾಕುತ್ತಿದ್ದಾರೆ.

ಎಲೆಕ್ನಿಕ್ ಬಸ್ ಪ್ರಯಾಣದ ಅನುಕೂಲ: 
ಬೆಂಗಳೂರಿಗೆ 6ಎಲೆಕ್ಟ್ರಿಕ್ ಬಸ್ ಸೇವೆಯ ಮೂಲಕ ಬೆಂಗಳೂರು-ಚಿಕ್ಕಮಗಳೂರು ಸಂಪರ್ಕದ ನಡುವೆ ಬರುವ ಹಾಸನ-ಬೇಲೂರು ಪ್ರಯಾಣಿಕರಿಗೂ ಸುಖಾಸೀನ ಎಲೆಕ್ನಿಕ್ ಬಸ್ ಪ್ರಯಾಣದ ಅನುಕೂಲ ಸಿಕ್ಕಂತಾಗಿದೆ.ದುಬಾರಿ ಇಂಧನ ಬೆಲೆ ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿದ್ದು, ಪೇಟ್ರೋಲ್, ಡಿಸೇಲ್ ಬೈಕ್, ಕಾರು ಹಾಗೂ ಆಟೋಗಳ ಜಾಗವನ್ನುಎಲೆಕ್ಟ್ರಿಕ್ ಬೈಕ್ ಕಾರು ಮತ್ತು ಆಟೋಗಳು ಆವರಿಸಿಕೊಳ್ಳುತ್ತಿದೆ.

ಈ ಹಿಂದೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ವೋಲ್ವಾ ಬಸ್ ಸಂಚಾರ ನಡೆಸುತ್ತಿದ್ದವು. ವೋಲ್ವಾ ಬಸ್ಗಳ ಬದಲಾಗಿ ಸದ್ಯ ಇವಿ ಪವರ್ ಪ್ಲೇಸ್ ಎಂಬಎಲೆಕ್ಟ್ರಿಕ್ ಬಸ್ಗಳು ಸಂಚಾರ ಆರಂಭಿಸಿವೆ. ಚಿಕ್ಕಮಗಳೂರು-ಬೆಂಗಳೂರು ಸೇವೆ ನೀಡುವ ಜೊತೆಗೆ ಹಾಸನ-ಬೇಲೂರು ಪ್ರಯಾಣಿಕರಿಗೂ ಸೇವೆ ಒದಗಿಸುತ್ತಿವೆ.ವೋಲ್ವಾ ಬಸ್ನಂತೆ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಬಸ್ಗಳು ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಫ್ರೀ ಕರೆಂಟ್‌ ಎಫೆಕ್ಟ್‌: ಎಲ್‌ಪಿಜಿ ತ್ಯಜಿಸಿ ವಿದ್ಯುತ್‌ ಒಲೆ ಖರೀದಿಸುತ್ತಿರುವ ಜನ..!

ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಸಂಚಾರ ಆರಂಭ:
ಬೆಂಗಳೂರಿನಿಂದ ನಿತ್ಯ ಬೆಳಿಗ್ಗೆ 5ಗಂಟೆ ಯಿಂದ ಸಂಚಾರ ಆರಂಭಿಸುವ ಆರು ಇವಿ ಪವರ್ ಪ್ಲೇಸ್ ಬಸ್ಗಳು ರಾತ್ರಿ 12ಗಂಟೆಯವರೆಗೂ ಪ್ರಾಯಾಣಿಕರ ಸೇವೆ ಸಲ್ಲಿಸಲಿವೆ.ಬೆಂಗಳೂರು-ಚಿಕ್ಕಮಗಳೂರು ಸಂಚಾರ ಕಲ್ಪಿಸುವಎಲೆಕ್ಟ್ರಿಕ್ ಬಸ್ಗಳ ಬ್ಯಾಟರಿ ಚಾರ್ಚ್ಗಾಗಿ ನಗರದ ಕೆಎಸ್ಆರ್ಟಿಸಿ ಡಿಪೋದಲ್ಲಿ ಎರಡು ಚಾರ್ಜರ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಏಕಕಾಲದಲ್ಲಿ ಎರಡು ಬಸ್ಗಳ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಲು ಎರಡು ಗಂಟೆಗಳ ಕಾಲಾವಕಾಶ ಬೇಕಾಗಿದ್ದು, ಒಮ್ಮೆ ಚಾರ್ಜ್ ಮಾಡಿದಲ್ಲಿ 300 ಕಿ.ಮೀ. ಸಾಗುವ ಸಾಮರ್ಥ್ಯವನ್ನು ಹೊಂ ದಲಾಗಿದೆ.  ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಸಿ, ಪುಶ್ಬ್ಯಾಕ್ ಸೀಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

212 ಕಿ.ಮೀ ಮೈಲೇಜ್, ಕೈಗೆಟುಕವ ದರ; ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಬಸ್‌ನ ಒಳಬದಿ ಮತ್ತು ಹಿಂಬದಿಯಲ್ಲಿ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ. ಟಿ.ವಿ., ಸೇರಿದಂತೆ ಮೊಬೈಲ್ ಚಾರ್ಜರ್ ವ್ಯವಸ್ಥೆಯನ್ನು ಪ್ರತೀ ಆಸನದಲ್ಲಿ ಕಲ್ಪಿಸಲಾಗಿದೆ. ಬಸ್ ಶಬ್ಧವು ಕಡಿಮೆ ಯಾಗಿದೆ. ತಡೆರಹಿತ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬಸ್ ಇದಾಗಿದೆ. 45 ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಒಟ್ಟಾರೆ ವೋಲ್ವಾ ಬಸ್ಗೆ ಯಾವುದೇ ಸೌಲಭ್ಯ ಕಡಿಮೆ ಇಲ್ಲದಂತೆಎಲೆಕ್ಟ್ರಿಕ್ ಬಸ್ಗಳನ್ನು ವಿನ್ಯಾಸಗೊಳಿಸಿದ್ದು, ಜನಾಕರ್ಷಕವಾಗಿದೆ. ಕಾಫಿನಾಡಿನಿಂದ ಬೆಂಗಳೂರಿಗೆಎಲೆಕ್ಟ್ರಿಕ್ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುವುದು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಸಂತೋಷವನ್ನುಂಟು ಮಾಡಿದೆ.

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು