ಫಾಸ್ಟ್ಯಾಗ್ ಬದಲು ಜಿಪಿಎಸ್ ಆಧಾರಿತ GNSS ಟೋಲ್‌ನಿಂದ ಯಾರಿಗೆ ಲಾಭ?

By Chethan KumarFirst Published Jul 29, 2024, 8:52 PM IST
Highlights

ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಹೊಸ GNSS ಜಾರಿಗೆ ಘೋಷಣೆಯಾಗಿದೆ. ಫಾಸ್ಟ್ಯಾಗ್ ಮೂಲಕ ಟ್ರೋಲ್ ಸಂಗ್ರಹ ಹಂತ ಹಂತವಾಗಿ ಅಂತ್ಯಗೊಳ್ಳಲಿದೆ. ಹೊಸದಾಗಿ ಆರಂಭಿರುವ ಜಿಪಿಎಸ್ ಆಧಾರಿತ ಟೋಲ್‌ನಿಂದ ಯಾರಿಗೆ ಲಾಭ? ವಾಹನ ಮಾಲೀಕರು ಏನು ಮಾಡಬೇಕು.

ನವದೆಹಲಿ(ಜು.29)  ಹೆದ್ದಾರಿಗಳಲ್ಲಿ ಪ್ರಯಾಣಕ್ಕೆ ವಾಹನಗಳು ಟೋಲ್ ಕಟ್ಟಬೇಕು. ಇದುವರೆಗೆ ಫಾಸ್ಟ್ಯಾಗ್ ಮೂಲಕ ಹಣ ಪಾವತಿಯಾಗುತ್ತಿದೆ. ಆದರೆ ನಿತಿನ್ ಗಡ್ಕರಿ ಈಗಾಗಲೇ ಜಿಪಿಎಸ್ ಆಧಾರಿತ ಜಿಎನ್‌ಎಸ್‌ಎಸ್ ಸಿಸ್ಟಮ್ ಮೂಲಕ ಟೋಲ್ ಸಂಗ್ರಹ ಘೋಷಣೆಯಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ, ಪಾಣಿಪತ್ ಹಿಸ್ಸಾರ್ ಎಕ್ಸ್‌ಪ್ರೆಸ್‌ವೇನಲ್ಲಿ ಜಾರಿಯಾಗುತ್ತಿದೆ. ಹಂತ ಹಂತವಾಗಿ ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹ ವಿಸ್ತರಣೆಗೊಳ್ಳಲಿದೆ. ಇದು ಸಂಪೂರ್ಣವಾಗಿ ಜಿಪಿಎಸ್ ಸಿಸ್ಟಮ್ ಮೂಲಕ ದರ ವಿಧಿಸುತ್ತದೆ ಜೊತಗೆ ವ್ಯಾಲೆಟ್ ಅಥವಾ ಲಿಂಕ್ ಮಾಡಿದ ಖಾತೆಯಿಂದ ಹಣ ಪಾವತಿಯಾಗುತ್ತದೆ. 

ಹೊಸ ವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಸರ್ಕಾರ ಇಬ್ಬರಗೂ ಲಾಭವಿದೆ. ಹೊಸ GNSS ಟೋಲ್ ವ್ಯವಸ್ಥೆಯಲ್ಲಿ ನೀವು ಎಷ್ಟು ದೂರ ಕ್ರಮಿಸಿದ್ದೀರಿ ಅಷ್ಟು ದೂರಕ್ಕೆ ಮಾತ್ರ ಪಾವತಿಸಿದರೆ ಸಾಕು. ಮೊದಲೇ ಟೋಲ್ ಪಾವತಿಸಿ ಬಳಿಕ ಅರ್ಧಕ್ಕೆ ಎಕ್ಸಿಟ್ ಆಗುವ ಚಿಂತೆ ಇಲ್ಲ. ದೂರಕ್ಕೆ ತಕ್ಕ ದರ ಪಾವತಿ ಮಾಡಿದರೆ ಸಾಕು. ಇನ್ನು ನಿಯತ್ತಾಗಿ ಟೋಲ್ ಪಾವತಿಸಿ ಹೋಗುವಾಗ, ಕೆಲವರು ಟೋಲ್ ಗೇಟ್ ತಪ್ಪಿಸಿ ಬಳಿಕ ಹೆದ್ದಾರಿ ಪ್ರವೇಶ ಮಾಡಿ, ಮತ್ತೆ ನಿರ್ಗಮಿಸಿ ಟೋಲ್ ಇಲ್ಲದೆ ಸಾಗಿದ ಘಟನೆಗಳು ಇವೆ. ಆದರೆ ಹೊಸ ವ್ಯವಸ್ಥೆಯಲ್ಲಿ ಟೋಲ್ ಬೂತ್ ಅವಶ್ಯತೆ ಇರುವುದಿಲ್ಲ. ಜಿಪಿಎಸ್ ಆಧಾರಿತ ಟ್ರಾಕಿಂಗ್ ವ್ಯವಸ್ಥೆಯಾಗಿರುವ ಕಾರಣ ಹೆದ್ದಾರಿ ಪ್ರವೇಶಿಸಿ ಒಂದು ಕೀಲೋಮೀಟರ್ ಕ್ರಮಿಸಿದರೆ, ಅಷ್ಟಕ್ಕೆ ಪಾವತಿ ಮಾಡಬೇಕು. 

Latest Videos

ಇನ್ಮುಂದೆ ಫಾಸ್ಟ್ಯಾಗ್ ಬದಲು GNSS ಟೋಲ್ ಸಂಗ್ರಹ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಾರಿ!

ಸರ್ಕಾರಕ್ಕೂ ಇದರಿಂದ ಲಾಭವಾಗಲಿದೆ. ಈಗಾಗಲೇ ಫಾಸ್ಟ್ಯಾಗ್ ಮೂಲಕ ಸರ್ಕಾರ ಸೋರಿಕೆ ತಡೆಗಟ್ಟಿದೆ. 40,000 ಕೋಟಿ ಸಂಗ್ರಹವಿರುವ ಟೋಲ್ ಹೊಸ ಪದ್ಧತಿಯಿಂದ 1,40,000 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಟೋಲ್ ಸಿಬ್ಬಂದಿಗಳು, ಅವರಿಗೆ ವೇತನದ ಅವಶ್ಯಕತೆ ಇಲ್ಲ. ಟೋಲ್ ಬೂತ್ ನಿರ್ಮಾಣ ಬೇಕಿಲ್ಲ. ಎಲ್ಲವೂ ಡಿಜಿಟಲ್ ಮೂಲಕವೇ ದರ, ಪಾವತಿ ವ್ಯವಸ್ಥೆಯಾಗಲಿದೆ. ಇದು ಸ್ಯಾಟಲೈಟ್ ಮೂಲಕ ಟೋಲ್ ಪಾವತಿ ವ್ಯವಸ್ಥೆ. ಜಿಪಿಎಸ್ ಹಾಗೂ ಜಿಎನ್ಎಸ್‌ಎಸ್ ತಂತ್ರಜ್ಞಾನ ಬಳಸಿಕೊಂಡು ಟೋಲ್ ದರ ಪಾವತಿ ವ್ಯವಸ್ಥೆ ಮಾಡಲಾಗುತ್ತದೆ. ಪ್ರಮುಖವಾಗಿ 

ಹೊಸ ಜಿಎನ್‌ಎಸ್ಎಸ್ ಆನ್ ಬೋರ್ಡ್ ಯುನಿಟ್ ಅಳವಡಿಸಲಾಗುತ್ತದೆ. ಸದ್ಯ ಇರುವ ಫಾಸ್ಟ್ಯಾಗ್‌ಗೂ ಈ ಯುನಿಟ್ ಇಂಟಿಗ್ರೇಟ್ ಮಾಡಲು ಸಾಧ್ಯ. ಆರಂಭಿಕ ಹಂತದಲ್ಲಿ ಟೋಲ್ ಬೂತ್‌ಗಳಲ್ಲಿ ಜಿಎನ್‌ಎಸ್‌ಎಸ್ ಟೋಲ್‌ಗೆ 2 ಪ್ರವೇಶ ದ್ವಾರ ನೀಡಲಾಗುತ್ತದೆ. ಬಳಿಕ ಹಂತ ಹಂತವಾಗಿ ಸಂಪೂರ್ಣ ಜಿಎನ್‌ಎಸ್ಎಸ್ ವ್ಯವಸ್ಥೆಯಾಗಿ ಮಾರ್ಪಾಟು ಮಾಡಲಾಗುತ್ತದೆ.

ಫ್ರಂಟ್ ವಿಂಡ್‌ಶೀಲ್ಡ್‌ಗೆ ಫಾಸ್ಟ್ಯಾಗ್ ಅಳವಡಿಸದಿದ್ದರೆ ಟೋಲ್ ಶುಲ್ಕ ದುಪ್ಪಟ್ಟು ವಸೂಲಿ

ಹೆದ್ದಾರಿಗಳಲ್ಲಿ ಅಳವಡಿಸಿರುವ ಕ್ಯಾಮೆರಾ, ಜಿಪಿಎಸ್ ಆಧಾರಿತ ಟ್ರಾಕಿಂಗ್ ಹಾಗೂ ದರ ನಿಗಧಿಗೆ ಬಳಸಿರುವ ಅತ್ಯಾಧುನಿಕ ಎಐ ತಂತ್ರಜ್ಞಾನದ ಸಾಫ್ಟವೇರ್ ಇದರ್ಲಿ ಕಾರ್ಯನಿರ್ವಹಿಸುತ್ತದೆ. 
 

click me!