ಇಷ್ಟು ದಿನ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಫಾಸ್ಟ್ಯಾಗ್ ಬಳಸಲಾಗುತ್ತಿತ್ತು. ಆದರೆ ಇನ್ಮುಂದೆ ಫಾಸ್ಟ್ಯಾಗ್ ಬದಲು ಜಿಪಿಎಸ್ ಸಿಸ್ಟಮ್ ಆಧಾರಿಸಿ GNSS ಬಳಸಲಾಗುತ್ತಿದೆ. ಪ್ರಾಯೋಗಿಕ ಹಂತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊಸ ವಿಧಾನ ಜಾರಿಯಾಗುತ್ತಿದೆ. ಏನಿದು ಜಿಎನ್‌ಎಸ್‌ಎಸ್ ಟ್ರೋಲ್ ಸಂಗ್ರಹ, ಇದರಿಂದ ಸವಾರರಿಗೇನು ಲಾಭ?
ನವದೆಹಲಿ(ಜು.27) ಭಾರತದಲ್ಲಿ ಟೋಲ್ ಸಂಗ್ರಹ ಸುಲಭಗೊಳಿಸಲು ಫಾಸ್ಟ್ಯಾಗ್ ಜಾರಿ ಮಾಡಿ ಹಲವು ವರ್ಷಗಳು ಉರುಳಿದೆ. ಇದೀಗ ಟೋಲ್ ಸಂಗ್ರಹದಲ್ಲಿ ಮತ್ತೊಂದು ಮಹತ್ತರ ಬದಲಾವಣೆಯಾಗುತ್ತಿದೆ. ಇನ್ಮುಂದೆ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹ ಇರುವುದಿಲ್ಲ, ಇಷ್ಟೇ ಅಲ್ಲ ಟೋಲ್ ರಸ್ತೆಯಲ್ಲಿ ಟೋಲ್ ಬೂತ್, ಅಲ್ಲೊಂದು ಸ್ಕ್ರಾನರ್ ಕೂಡ ಇರುವುದಿಲ್ಲ. ಜಿಪಿಎಸ್ ಆಧಾರಿತ ಟ್ರೋಲ್ ಸಂಗ್ರಹ GNSS ಜಾರಿಯಾಗುತ್ತಿದೆ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈಗಾಗಲೇ ಮಾಹಿತಿ ನೀಡಿದ್ದಾರೆ. ಹೊಸ GNSS ಟೋಲ್ ಸಂಗ್ರಹ ಪ್ರಾಯೋಗಿಕ ಹಂತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿಂದೆ ಕೆಲ ಎಕ್ಸ್‌ಪ್ರೆಸ್ ವೇನಲ್ಲಿ ಜಾರಿಯಾಗುತ್ತಿದೆ.
ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (GNSS ) ಮೂಲಕ ಇನ್ನು ಟೋಲ್ ಸಂಗ್ರಹವಾಗಲಿದೆ. ಗಡ್ಕರಿ ಈ ಹಿಂದೆ ಈ ಕುರಿತು ಸೂಚನೆ ನೀಡಿದ್ದರು. ಇದೀಗ ಭಾರತದಲ್ಲಿ ಹೊಸ ವಿಧಾನ ಜಾರಿಯಾಗುತ್ತಿದೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಜೊತೆಗೆ ಹರ್ಯಾಣದ ಪಾಣಿಪತ್-ಹಿಸಾರ್ ವಿಭಾಗದ NH-709ರಲ್ಲೂ ಇದೇ ಮಾದರಿ ಜಾರಿಯಾಗುತ್ತಿದೆ.
undefined
ಫ್ರಂಟ್ ವಿಂಡ್‌ಶೀಲ್ಡ್‌ಗೆ ಫಾಸ್ಟ್ಯಾಗ್ ಅಳವಡಿಸದಿದ್ದರೆ ಟೋಲ್ ಶುಲ್ಕ ದುಪ್ಪಟ್ಟು ವಸೂಲಿ
ಏನಿದು GNSS ಸಿಸ್ಟಮ್?
ಇದು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ. ಇಷ್ಟು ದಿನ ಟೋಲ್ ರಸ್ತೆಯಲ್ಲಿನ ಟೋಲ್ ಬೂತ್‌ನಲ್ಲಿ ಇಂತಿಷ್ಟು ಹಣ ಪಾವತಿಸಿ ಮುಂದೆ ಸಾಗಬೇಕು. ಟೋಲ್ ರಸ್ತೆಯಲ್ಲಿ ಕೆಲವೇ ದೂರ ಕ್ರಮಿಸಿ ಬಳಿಕ ನಿರ್ಗಮಿಸಿದರೂ ಸಂಪೂರ್ಣ ಹಣ ಪಾವತಿಸಬೇಕು. ಫಾಸ್ಟ್ಯಾಗ್ ಮೂಲಕ ಈ ಹಣ ಪಾವತಿಯಾಗುತ್ತದೆ. GNSS ಮೂಲಕ ಟೋಲ್ ರಸ್ತೆಯಲ್ಲಿ ಎಷ್ಟು ದೂರ ಕ್ರಮಿಸುತ್ತೀರೋ, ಅಷ್ಟು ದೂರಕ್ಕೆ ಹಣ ಪಾವತಿಸಿದರೆ ಸಾಕು.
ಉದಾಹರಣೆಗೆ ಸದ್ಯ 50 ಕಿ.ಮೀ ದೂರದ ಟೋಲ್ ರಸ್ತೆಗೆ 100 ರೂಪಾಯಿ ಟೋಲ್ ಪಾವತಿಮಾಡೇಬೇಕಿದ್ದರೆ, ಆರಂಭದಲ್ಲೇ 100 ರೂಪಾಯಿ ಪಾವತಿಸಿ ಸಾಗಬೇಕು. ಬಳಿ 20 ಕಿ.ಮೀ ಸಾಗಿ ನಿರ್ಗಮಿಸಿದರೂ ದುಬಾರಿ ಹಣ ಪಾವತಿಸಬೇಕಿತ್ತು. ಆದರೆ ಹೊಸ ಟೋಲ್ ಪ್ರಕಾರ 20 ಕಿ.ಮೀ ಸಾಗಿದರೆ ಕೇವಲ 40 ರೂಪಾಯಿ ಜಿಪಿಎಸ್ ಆಧಾರಿತವಾಗಿ ಪಾವತಿಯಾಗಿಲಿದೆ.
ಇದರಿಂದ ವಾಹನ ಸವಾರರಿಗೂ ಲಾಭವಾಗಲಿದೆ. ಎಷ್ಟು ದೂರ , ಅಷ್ಟು ಹಣ ಮಾತ್ರ ಪಾವತಿಸಿದರೆ ಸಾಕು . ಇಷ್ಟೇ ಅಲ್ಲ ಸರ್ಕಾರಕ್ಕೂ ಸೋರಿಕೆ ತಪ್ಪಿಸಲು ಇದು ನೆರವಾಗುತ್ತದೆ. ಪ್ರಮುಖವಾಗಿ ಟೋಲ್ ಬೂತ್ ಹತ್ತಿರಬರುತ್ತಿದ್ದಂತೆ ಸರ್ವೀಸ್ ರಸ್ತೆ ಮೂಲಕ ಸಾಗಿ ಬಳಿ ಹೆದ್ದಾರಿಗೆ ಪ್ರವೇಶಿಸುತ್ತಾರೆ. ಇನ್ನು ಮುಂದಿನ ಟೋಲ್ ಬೂತ್ ಸಿಗುವ ಮುನ್ನ ಮತ್ತೆ ಹೆದ್ದಾರಿಯಿಂದ ನಿರ್ಗಮಿಸಿ ಟೋಲ್ ಪಾವತಿಸದೇ ಸಾಗುತ್ತಾರೆ. GNSS ಪದ್ಧತಿಯಿಂದ ಇದು ಸಾಧ್ಯವಿಲ್ಲ. ಟೋಲ್ ರಸ್ತೆ ಪ್ರವೇಶಿಸಿದರೆ ಎಷ್ಟು ದೂರ ಕ್ರಮಿಸುತ್ತೀರೋ ಅಷ್ಟು ದೂರದ ಹಣ ಪಾವತಿಸಬೇಕು.
ಸ್ಯಾಟ್‌ಲೈಟ್ ಆಧಾರಿತ ಟೋಲ್ ಸಂಗ್ರಹ ಹೇಗೆ ಕೆಲಸ ಮಾಡುತ್ತೆ? ಇದರ ಲಾಭಗಳೇನು?
GNSS ಖಾತೆಯಲ್ಲಿ ಹಣ ಹಾಕದೇ ಟೋಲ್ ಹೆದ್ದಾರಿಯಲ್ಲಿ ಸಾಗಿದರೆ ಇಂತಿಷ್ಟು ದಂಡ ವಿಧಿಸಲಾಗುತ್ತದೆ. ಆನ್‌ಲೈನ್ ಚಲನ್ ಮೂಲಕ ವಾಹನ ಮಾಲೀಕರಿಗೆ ಬರಲಿದೆ. ಫಾಸ್ಟ್ಯಾಗ್ ಇಲ್ಲದೆ ಸಾಗಿದರೆ ಸದ್ಯ ದುಪ್ಪಟ್ಟು ಹಣ ನೀಡಬೇಕು. ಇದೇ ರೀತಿ GNSS ಖಾತೆಯಲ್ಲಿ ಹಣವಿಲ್ಲದೆ ಟೋಲ್ ರಸ್ತೆ ಮೂಲಕ ಸಾಗಿದರೆ ದುಪ್ಪಟ್ಟು ದಂಡ ಪಾವತಿಸಬೇಕು.