ಜುಲೈನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ, ಆಟೋ ಸಂಚಾರ ನಿಷೇಧ!

By Suvarna News  |  First Published Jun 29, 2023, 5:34 PM IST

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತದ ಸಂಖ್ಯೆ ಹೆಚ್ಚಾಗುತ್ತಿದೆ. ಸಾವು ನೋವಿನ ಸಂಖ್ಯೆಗಳು ಹೆಜ್ಜಾಗುತ್ತಿದೆ. ಇದರ ಬೆನ್ನಲ್ಲೇ NHAI ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜುಲೈ ತಿಂಗಳಿನಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನ, ಆಟೋ ರಿಕ್ಷಾ ಪ್ರವೇಶ ನಿಷೇಧ ಮಾಡಲಾಗುತ್ತಿದೆ.


ಬೆಂಗಳೂರು(ಜೂ.29): ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಬಳಿಕ ಪ್ರಯಾಣದ ಅವಧಿ ಕಡಿಮೆಯಾಗಿದೆ. ಆದರೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಉದ್ಘಾಟನೆ ಬಳಿಕ ಎಲ್ಲಾ ವಾಹನಗಳಿಗೆ ಮುಕ್ತ ಪ್ರವೇಶ ನೀಡಲಾಗಿದೆ. ಅತೀ ವೇಗದ ಚಾನಲೆ, ರಸ್ತೆ ನಿಯಮ ಉಲ್ಲಂಘನೆ, ವಿರುದ್ಧ ದಿಕ್ಕಿನಿಂದ ಸಂಚಾರ ಸೇರಿದಂತೆ ಹಲವು ಕಾರಣಗಳಿಂದ ಎಕ್ಸ್‌ಪ್ರೆಸ್‌ವೇನಲ್ಲಿನ ಅಪಘಾತ ಸಂಖ್ಯೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಕಟ್ಟ ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜುಲೈ 15 ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನ ಸಂಚಾರ ಹಾಗೂ ಆಟೋ ರಿಕ್ಷಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗತ್ತಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಮುಖವಾಗಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದು ದುರಂತಕ್ಕೆ ಕಾರಣವಾಗುತ್ತಿದೆ. ಇದರ ಜೊತೆಗೆ ರಸ್ತೆ ಇಕ್ಕೆಲ ವ್ಯಾಪಾರಿಗಳು ಹಾಕಿರುವ ಫೆನ್ಸಿಂಗ್ ಮುರಿದಿದ್ದಾರೆ. ತಮ್ಮ ವ್ಯಾಪಾರಕ್ಕಾಗಿ ಫೆನ್ಸಿಂಗ್ ಮುರಿದಿದ್ದಾರೆ. ಇದರಿಂದ ಜನರು ರಸ್ತೆ ದಾಟುತ್ತಿದ್ದಾರೆ. ಇದರ ಜೊತೆಗೆ ನಾಯಿಗಳು ಪ್ರಾಣಿಗಳು ಇದೇ ದಾರಿ ಮೂಲಕ ದಾಟುತ್ತಿದ್ದಾರೆ. ಇದು ಕೂಡ ಅಪಘಾತಕ್ಕೆ ಪ್ರಮುಖ ಕಾರಣಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  

Latest Videos

undefined

 

ಅಪಘಾತ ಹೆಚ್ಚಳ ; ಹೆದ್ದಾರೀಲಿ ವಾಹನಗಳ ವೇಗ ನಿಯಂತ್ರಣಕ್ಕೆ ಡ್ರೋನ್‌!

ಅತೀ ವೇಗದ ಚಾಲನೆ, ಲೇನ್ ಬದಲಾಯಿಸುವಿಕೆ, ದಿಢೀರ್ ನಿಲ್ಲಿಸುವಿಕೆಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ದ್ವಿಚಕ್ರ ವಾಹನ ಸವಾರರು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದಾರೆ.ಹೆಚ್ಚಿನ ಅಪಘಾತದ ಹಿಂದೆ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಕಾರಣವಿದೆ. ಹೀಗಾಗಿ ಜುಲೈ 15ರ ಬಳಿಕ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಸಂಚರ ನಿಷೇಧಿಸಲಾಗುತ್ತಿದೆ. ಅಧಿಕೃತ ಅಧಿಸೂಚನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯುತ್ತಿದೆ.  ಜುಲೈ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ವೇಗ ಗಂಟೆಗೆ 120 ಕಿಲೋಮೀಟರ್ ನಿಗದಿ ಮಾಡಲಾಗಿದೆ. ಆದರೆ ಆಟೋ ರಿಕ್ಷಾ, ಬೈಕ್ 120 ಕಿಲೋಮೀಟರ್ ವೇಗದಲ್ಲಿ ಸಂಚಾರ ಅಪಾಯ ತಂದೊಡ್ಡಲಿದೆ. ಬೆಂಗಳೂರು ಮೈಸೂರು 90 ನಿಮಿಷಗಳ ಪ್ರಯಾಣವಾಗಿದೆ. 

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಇತ್ತೀಚೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಹೆಚ್ಚಾಸಲಾಗಿದೆ. ಇದರ ವಿರುದ್ದ ಪ್ರತಿಭಟೆಗಳೂ ನಡೆದಿದೆ. ಕಾರ್‌, ವ್ಯಾನ್‌, ಜೀಪ್‌ಗಳ ಏಕಮುಖ ಟೋಲ್ ದರ 135 ರೂಪಾಯಿಯಿಂದ 165 ರು.ಗೆ ಏರಿಸಲಾಗಿದೆ. ದ್ವಿಮುಖ ಸಂಚಾರ ದರವು 205 ರಿಂದ 250 ರೂಪಾಯಿಗೆ ಏರಿಕೆಯಾಗಿದೆ. ಸ್ಥಳೀಯ ವಾಹನಗಳಿಗೆ 70ರಿಂದ 85 ರೂಗಳಿಗೆ, ತಿಂಗಳ ಪಾಸ್‌ ಅನ್ನು 4525 ರೂಪಾಯಿಂದ 5575 ರುಪಾ​ಯಿಗೆ ಹೆಚ್ಚಿಸ​ಲಾ​ಗಿ​ದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ 220ರಿಂದ 270 ರೂ ಹಾಗೂ ದ್ವಿಮುಖ ಸಂಚಾರಕ್ಕೆ 330 ರಿಂದ 405 ರುಪಾಯಿ (75ರು. ಹೆಚ್ಚಳ) ನಿಗದಿ ಆಗಿದೆ. ಸ್ಥಳೀಯ ವಾಹ​ನ​ಗ​ಳಿಗೆ 110 ರಿಂದ 135 ರು., ತಿಂಗಳ ಪಾಸ್‌ ಅನ್ನು 7315 ರಿಂದ 9000 ರುಪಾ​ಯಿಗೆ ನಿಗದಿ ಪಡಿ​ಸ​ಲಾ​ಗಿ​ದೆ.
 

click me!