ಬದಲಾಗುತ್ತಿದೆ ಭಾರತ, ಶೀಘ್ರದಲ್ಲೇ ಸಂಪೂರ್ಣ ಎಥೆನಾಲ್ ಇಂಧನ ಚಾಲಿತ ಕಾರು ಬಿಡುಗಡೆ!

By Suvarna News  |  First Published Jun 26, 2023, 6:34 PM IST

ಪೆಟ್ರೋಲ್, ಡೀಸೆಲ್ ದುಬಾರಿ, ಎಲೆಕ್ಟ್ರಿಕ್ ವಾಹನ ಕೈಗೆಟುಕುತ್ತಿಲ್ಲ. ಇನ್ನುಮುಂದೆ ಜನರ ಸಮಸ್ಯೆಗೆ ಮುಕ್ತಿ ಸಿಗಲಿದೆ. ಕಾರಣ ಭಾರತದಲ್ಲಿ ಸಂಪೂರ್ಣವಾಗಿ ಎಥೆನಾಲ್ ಇಂಧನದಲ್ಲಿ ಚಾಲಿತ ಕಾರಗಳು ಬಿಡುಗಡೆಯಾಗುತ್ತಿದೆ.


ನವದೆಹಲಿ(ಜೂ.26) ಪೆಟ್ರೋಲ್ ಬೇಕಿಲ್ಲ, ಎಲೆಕ್ಟ್ರಿಕ್ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಭಾರತದಲ್ಲಿ ಸಂಪೂರ್ಣ ಎಥೆನಾಲ್ ಇಂಧನ ಚಾಲಿತ ಕಾರು ರಸ್ತೆಗಿಳಿಯಲಿದೆ. ಹೌದು ಎಥೆನಾಲ್ ಬೆಲೆ ಪೆಟ್ರೋಲ್‌ಗಿಂತ ಭಾರಿ ಕಡಿಮೆ. ಜೊತೆಗೆ ವಾಹನಕ್ಕೂ ಉತ್ತಮ ಮೈಲೇಜ್ ಸಿಗಲಿದೆ. ಸದ್ಯ ಭಾರತದಲ್ಲಿ ಶೇಕಡಾ 10 ಹಾಗೂ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟದಲ್ಲಿದೆ. ಆದರೆ ಶೀಘ್ರದಲ್ಲೇ ಭಾರತದ ಸಂಪೂರ್ಣ ಎಥೆನಾಲ್ ಚಾಲಿತ ವಾಹನ ಬಿಡುಗಡೆ ಮಾಡುತ್ತಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮೊದಲ ಹಂತದಲ್ಲಿ ಹೈಎಂಡ್ ಕಾರುಗಳು, ಆಟೋ ರಿಕ್ಷಾ, ಸೇರಿದಂತೆ ಇತರ ಕೆಲ ವಾಹನಗಳು ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳಾಗಿ ಬಿಡುಗಡೆಯಾಗಲಿದೆ. ಇದಕ್ಕೆ ಮುಖ್ಯ ಕಾರಣ ಸದ್ಯ ಭಾರತದಲ್ಲಿ ಎಥೆನಾಲ್ ಉತ್ಪಾದನೆ ವೇಗವಾಗಿ ಹೆಚ್ಚುತ್ತಿದೆ. ಆದರೆ ಒಂದೇ ಸಮನೆ ಎಲ್ಲಾ ವಾಹನಗಳನ್ನು ಸಂಪೂರ್ಣ ಎಥೆನಾಲ್ ಇಂಧನಗಳಾದರೆ ಎಥೆನಾಲ್ ಕೊರತೆ ಎದುರಾಗಲಿದೆ. ಹೀಗಾಗಿ ರೈತರು ಎಥೆನಾಲ್ ಉತ್ಪಾದನೆ ಮಾಡುವ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಉತ್ತಮ ಲಾಭ ಪಡೆಯಲು ಸಾಧ್ಯವಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Latest Videos

undefined

 

ಎಲೆಕ್ಟ್ರಿಕ್‌, ಹೈಡ್ರೋಜನ್‌ ವಾಹನಗಳ ಮೂಲಕ ಇಂಧನದ ಬೇಡಿಕೆ ತಗ್ಗುತ್ತದೆ: ಬೆಂಗಳೂರಲ್ಲಿ ಮೋದಿ ಮಾತು

ಭಾರತ ಪ್ರತಿ ವರ್ಷ  ಸರಾಸರಿ 8 ಲಕ್ಷ ಕೋಟಿ ರೂಪಾಯಿ ಹಣವನ್ನು ಇಂಧನ ಆಮದು ಮಾಡಿಕೊಳ್ಳಲು ಬಳಸುತ್ತಿದೆ. ಇದೀಗ ಎಥೆನಾಲ್ ಮಿಶ್ರಿತ ಇಂಧನ ಬಳಕೆ ಮಾಡುತ್ತಿರುವ ಭಾರತದಲ್ಲಿ ಆಮದು ಪ್ರಮಾಣ ಇಳಿಕೆಯಾಗುತ್ತಿದೆ. ಸಂಪೂರ್ಣ ಎಥೆನಾಲ್ ವಾಹನಗಳು ಬಿಡುಗಡೆಯಾದರೆ ಈ ಪ್ರಮಾಣ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಎಥೆನಾಲ್ ಪರಿಸರಕ್ಕೂ ಪೂರಕವಾಗಿದೆ. ಟಿವಿಎಸ್ ಮೋಟಾರ್, ಬಜಾಜ್ ಆಟೋ ಕಂಪನಿಗಳು ಈಗಾಗಲೇ ಸಂಪೂರ್ಣ ಎಥೆನಾಲ್ ಇಂಧನದ ವಾಹನ ಉತ್ಪಾದನೆಯಲ್ಲಿ ತೊಡಗಿದೆ.ಇದರ ಜೊತೆ ಫ್ಲೆಕ್ಸ್ ಇಂಧನ ಎಂಜಿನ್ ಕೂಡ ಉತ್ಪಾದನೆ ಮಾಡಲಾಗುತ್ತದೆ. ಇದರಿಂದ ಎಥೆನಾಲ್ ಜೊತೆಗೆ ಮೆಂಥಾಲ್ ಮಿಶ್ರಣ ಮಾಡಲು ಸಾಧ್ಯವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 

Invest Karnataka 2022: ಏಷ್ಯಾದಲ್ಲೇ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ: ವಿಜಯ್‌ ನಿರಾಣಿ

ಎಥೆನಾಲ್‌ ಸಕ್ಕರೆ ಅಥವಾ ಬೆಲ್ಲ ಉತ್ಪಾದನೆ ವೇಳೆ ಕಬ್ಬಿನಿಂದ ಸಿಗುವ ಉಪ ಉತ್ಪನ್ನವಾಗಿದೆ. ಇದರ ಬಳಕೆಯಿಂದ ಎಥೆನಾಲ್‌ಗೆ ಹೆಚ್ಚಿನ ಬೇಡಿಕೆ ಲಭ್ಯವಾಗಿ ರೈತರಿಗೆ ಆದಾಯದ ಮತ್ತೊಂದು ಮೂಲವಾಗಿ ಹೊರಹೊಮ್ಮಲಿದೆ. ಜೊತೆಗೆ ಇದು ಪರಿಸರ ಸ್ನೇಹಿ ಇಂಧನ. ಇದರ ಬಳಕೆಯಿಂದ ಸಹಜವಾಗಿಯೇ ಅಷ್ಟುಪ್ರಮಾಣದ ಪೆಟ್ರೋಲ್‌ನಿಂದ ಹೊರಹೊಮ್ಮುತ್ತಿದ್ದ ಮಾಲಿನ್ಯ ಕಡಿಮೆಯಾಗಲಿದೆ. 2030ರಲ್ಲಿ ಇದರ ಜಾರಿಗೆ ಉದ್ದೇಶಿಸಲಾಗಿತ್ತು. ಆದರೆ 7 ವರ್ಷ ಮೊದಲೇ ಗುರಿ ತಲುಪಲಾಗಿದ್ದು, ‘ಇ-20’ ಪೆಟ್ರೋಲ್‌ ಬಳಕೆಗೆ ಲಭ್ಯವಾಗಲಿದೆ.

ಕರ್ನಾಟ ಏಷ್ಯಾದಲ್ಲಿ ಅತೀ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಾಗಿ ಮಾಡಲಾಗುತ್ತಿದೆ. ಮುಂದಿನ 5 ವರ್ಷದಲ್ಲಿ 10 ಪಟ್ಟು ಹೆಚ್ಚಿಸಲು ಗುರಿ ಇಟ್ಟುಕೊಂಡಿದೆ.

click me!