ಬೆಂಗಳೂರು ವಾಹನ ಸವಾರರ ಟ್ರಾಫಿಕ್, ರಸ್ತೆ ಚಿಹ್ನೆ ಜ್ಞಾನ ಎಷ್ಟಿದೆ? ಅಚ್ಚರಿ ನೀಡಿದ NBF ಸಮೀಕ್ಷೆ!

By Suvarna News  |  First Published Jun 1, 2022, 6:49 PM IST
  • ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ರಸ್ತೆ ಚಿಹ್ನೆಗಳ  ಸಮೀಕ್ಷೆ
  • ಬೈಕ್, ಸ್ಕೂಟರ್, ಅಟೋ, ಬಸ್ ಸೇರಿ ಎಲ್ಲಾ ವಾಹನ ಸವಾರರ ಸಮೀಕ್ಷೆ
  • ಬಿಎಂಟಿಸಿ ಬಸ್ ಚಾಲಕರ ಹೊರತು ಪಡಿಸಿದರೆ ಉಳಿದವರೆಲ್ಲರ ಜ್ಞಾನ ಅಷ್ಟಕಷ್ಟೆ

ಬೆಂಗಳೂರು(ಜೂ.01): ಟ್ರಾಫಿಕ್ ನಿಯಮ, ರಸ್ತೆಗಳಲ್ಲಿ ಅಳವಡಿಸಿರುವ ಚಿಹ್ನೆಗಳ ಕುರಿತು ನಿಮಗೆಷ್ಟು ಗೊತ್ತು? ನಮ್ಮ ಬೆಂಗಳೂರು ಫೌಂಡೇಷನ್(NBF ) ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದೆ. NBF ಸಮೀಕ್ಷೆಯಲ್ಲಿನ ಉತ್ತರ ಹಲವು ಅಚ್ಚರಿಗೂ ಕಾಣವಾಗಿದೆ. ಕಾರಣ ದ್ವಿಚಕ್ರ ವಾಹನ ಸವಾರರ ರಸ್ತೆ ಚಿಹ್ನೆ, ಟ್ರಾಫಿಕ್ ನಿಯಮ ಜಾಗೃತಿ ಅಷ್ಟಕಷ್ಟೆ, ಆಟೋ ಚಾಲಕರ ಉತ್ತರ ಕೇಳುವುದೇ ಬೇಡ, ಇರೋದರಲ್ಲಿ ಬಿಎಂಟಿಸಿ ವಾಹನ ಚಾಲಕರು ಪರವಾಗಿಲ್ಲ. 

ನಗರಗಳಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ಕೆಲಸ. ಅಡ್ಡಾದಿಡ್ಡಿ ಚಾಲನೆ, ಸಿಗ್ನಲ್ ಜಂಪ್, ಸಿಗ್ನಲ್ ನೀಡದೆ ವಾಹನ ಚಾಲನೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತದೆ. ವಾಹನ ಸವಾರರಿಗೆ ಟ್ರಾಫಿಕ್ ನಿಯಮ, ರಸ್ತೆ ಚಿಹ್ನೆಗಳ ಸ್ಪಷ್ಟ ಅರಿವಿದ್ದರೆ ಈ ಸಮಸ್ಯೆಗಳು ಹೆಚ್ಚಾಗಿ ತಲೆದೋರುವುದಿಲ್ಲ. ಹೆಚ್ಚಾಗುತ್ತಿರುವ ವಾಹನ ಹಾಗೂ ಟ್ರಾಫಿಕ್ ಸಮಸ್ಯೆ ನಡುವೆ ಬೆಂಗಳೂರಿನ ವಾಹನ ಸವಾರರ ರಸ್ತೆ ಚಿಹ್ನೆ ಜಾಗೃತಿ ಎಷ್ಟಿದೆ ಅನ್ನೋದನ್ನು ನಮ್ಮ ಬೆಂಗಳೂರು ಫೌಂಡೇಷನ್ ಸಮೀಕ್ಷೆ ಮೂಲಕ ಬಹಿರಂಗ ಪಡಿಸಿದೆ.  

Latest Videos

undefined

ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ದೊಡ್ಡನಕುಂದಿ ಕೆರೆ ಸ್ವಚ್ಚತಾ ಕಾರ್ಯ, ಸ್ಥಳೀಯರಿಂದ ಮೆಚ್ಚುಗೆ!

ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ 20 ವಿದ್ಯಾರ್ಥಿಗಳು ಜಂಟಿಯಾಗಿ ಬೆಂಗಳೂರಿನ ಬ್ರಿಗೇಡ್ ರೋಡ್, ಎಂಜಿ ರೋಡ್ ಹಾಗೂ ರೆಸಿಡೆನ್ಸಿ ರೋಡ್‌ನಲ್ಲಿ ಸಮೀಕ್ಷೆ ಮಾಡಲಾಗಿದೆ. ದ್ವಿಚಕ್ರ ವಾಹನ, ಆಟೋ ರಿಕ್ಷಾ, ನಾಲ್ಕು ಚಕ್ರದ ವಾಹನ, ಬಸ್, ಲಾರಿ ಸೇರಿ ಎಲ್ಲಾ ವಾಹನಗಳ ಚಾಲಕರು ಹಾಗೂ ವಾಹನವೇ ಇಲ್ಲದವರನ್ನು, ಟ್ರಾಫಿಕ್ ಪೊಲೀಸರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 189 ಮಂದಿ ಬಳಿ ಸಮೀಕ್ಷೆ ಪ್ರಶ್ನೆ ಕೇಳಿ ಉತ್ತರ ದಾಖಲಿಸಲಾಗಿದೆ. ಪ್ರತಿಯೊಬ್ಬರಿಗೆ 5 ರಸ್ತೆ ಚಿಹ್ನೆಗಳನ್ನು ತೋರಿಸಿ ಉತ್ತರ ಹೇಳಲು ಹೇಳಲಾಗಿದೆ. ಇದರ ಜೊತೆಗೆ ಟ್ರಾಫಿಕ್ ನಿಯಮದ ಕುರಿತು ಪ್ರಶ್ನೆ ಕೇಳಲಾಗಿದೆ.

ಈ ಸಮೀಕ್ಷಾ ವರದಿ ಇಲ್ಲಿದೆ:

  • ಬೈಕ್, ಸ್ಕೂಟರ್ ಸವಾರರಿಗೆ ಟ್ರಾಫಿಕ್ ಚಿಹ್ನೆ, ಆರ್‌ಟಿಓ ಹಾಗೂ ಲೈಸೆನ್ಸ್ ಕುರಿತು ಉತ್ತಮ ಜ್ಞಾನವಿಲ್ಲ. ಇವರಿಗೆ ಲೈಸೆನ್ಸ್ ಪರೀಕ್ಷೆ, ಕಲಿಕೆಯಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಬೇಕು.
  • ಕಾರು ಸೇರಿದಂತೆ ನಾಲ್ಕು ಚಕ್ರವದ ವಾಹನ ಚಾಲಕರಲ್ಲೂ ರಸ್ತೆ ಚಿಹ್ನೆ, ಟ್ರಾಫಿಕ್ ನಿಯಮದ ಕುರಿತು ಹೆಚ್ಚಿನ ಅರಿವಿಲ್ಲ. ಹೀಗಾಗಿ ಲೈಸೆನ್ಸ್ ನೀಡುವ ಪ್ರಕ್ರಿಯೆ ಮತ್ತಷ್ಟು ಕಠಿಣಗೊಳಿಸಬೇಕು
  • ಆಟೋ ಚಾಲಕರ ರಸ್ತೆ ಚಿಹ್ನೆ, ಟ್ರಾಫಿಕ್ ನಿಯಮದ ಜ್ಞಾನ ಬಹುತೇಕರಲ್ಲಿ ಶೂನ್ಯ. ಇದರಿಂದಲೇ ಪ್ರಯಾಣಿಕರ ಸುರಕ್ಷತೆಗೆ ಅಡ್ಡಿಯಾಗುವ ಹಲವು ಘಟನೆಗಳು ನಡೆಯುತ್ತಲೇ ಇದೆ. ಆಟೋ ಚಾಲಕರಿಗಿಂತ ಯಾವುಗೇ ವಾಹನ ಇಲ್ಲದವರ ರಸ್ತೆ ಚಿಹ್ನೆ, ಟ್ರಾಫಿಕ್ ನಿಯಮದ ಜ್ಞಾನ ಹೆಚ್ಚಿದೆ
  • ಸಮೀಕ್ಷೆ ನಡೆಸಿದವರ ಪೈಕಿ BMTC ಬಸ್ ಚಾಲಕರ ಜ್ಞಾನ ಉತ್ತಮವಾಗಿದೆ. ಟ್ರಾಫಿಕ್ ಚಿಹ್ನೆ, ಟ್ರಾಫಿಕ್ ನಿಯಮವನ್ನು ತಿಳಿದುಕೊಂಡಿದ್ದಾರೆ. ಹೆಚ್ಚು ಜವಾಬ್ದಾರಿಯುತವಾಗಿ ಚಾಲನೆ ಮಾಡಲು ಬದ್ಧರಾಗಿದ್ದಾರೆ.
  • ಘನ ವಾಹನ ಚಾಲಕರು ಉತ್ತಮ ಜ್ಞಾನ ಹೊಂದಿದ್ದಾರೆ. ಸಿಗ್ನಲ್, ಸೈನ್, ಸೂಚನೆಗಳ ಕುರಿತು ಅರಿವುಹೊಂದಿದ್ದಾರೆ. ಘನ ವಾಹನ ಚಾಲಕರು ಹೆಚ್ಚು ಶಿಕ್ಷಣ ಪಡೆದವರಲ್ಲ. ಆದರೂ ಟ್ರಾಫಿಕ್, ಚಿಹ್ನೆಗಳ ಜ್ಞಾನ ಉತ್ತಮವಾಗಿದೆ.
  • ಟ್ರಾಫಿಕ್ ಪೊಲೀಸರು ಈ ವಿಚಾರದಲ್ಲಿ ಪಕ್ಕಾ ಇದ್ದಾರೆ. ಚಿಹ್ನೆ, ಟ್ರಾಫಿಕ್ ನಿಯಮ, ಉಲ್ಲಂಘನೆ, ದಂಡದ ಕುರಿತು ಬಹುತೇಕರು ಸಂಪೂರ್ಣ ಮಾಹಿತಿ ಹೊಂದಿದ್ದಾರೆ.
  • ಟ್ರಾಫಿಕ್ ನಿಯಮ, ರಸ್ತೆ ಚಿಹ್ನೆ ಕುರಿತು ಹಿರಿಯರು ಹೆಚ್ಚಿನ ಜ್ಞಾನ ಹೊಂದಿದ್ದಾರೆ. ಆದರೆ ಯುವ ಸಮೂಹ ತೀರಾ ಹಿಂದೆ ಬಿದ್ದಿದೆ. 

ಚಾಲಕರಿಗೆ ಟ್ರಾಫಿಕ್ ನಿಯಮ, ರಸ್ತೆ ಚಿಹ್ನೆಗಳ ಅರಿವು ನಿರ್ಣಾಯಕವಾಗಿದೆ. ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಈ ಅರಿವು ಇರಬೇಕು. ಆದರೆ ದ್ವಿಚಕ್ರವಾಹನ, ಆಚೋ ಚಾಲಕರು, ನಾಲ್ಕು ಚಕ್ರ ವಾಹನ ಚಾಲಕರು, ಇಂದಿನ ಯುವಜನಾಂಗ ಇದರಿಂದ ಅತ್ಯಂತ ಕಡಿಮೆ ಜ್ಞಾನ ಹೊಂದಿದೆ. ಇದಕ್ಕೆ ರಸ್ತೆ ಪರವಾನಗಿ ಪ್ರಾಧಿಕಾರ ನಿಯಮಗಳನ್ನು ಕಠಿಣಗೊಳಿಸಬೇಕು. ಡ್ರೈವಿಂಗ್ ಶಾಲೆಗಳು ಸರಿಯಾದ ಮಾಹಿತಿ ನೀಡುವಂತಾಗಬೇಕು ಎಂದು ನಮ್ಮ ಬೆಂಗಳೂರು ಫೌಂಡೇಷನ್ ಜನರಲ್ ಮ್ಯಾನೇಜರ್ ವಿನೋದ್ ಜಾಕೋಬ್ ಹೇಳಿದ್ದಾರೆ.

ಆನೆ ಕಾರಿಡಾರ್‌ ಫಾಸ್ಟ್ ಟ್ರ್ಯಾಕ್ ಸರ್ವೇ.. ಡಿಸಿಗೆ NBF ಅಭಿನಂದನೆ

CFAM ಹಾಗೂ ಬೈಕಿಸಲ್ ಸಂಸ್ಥಾಪಕ ಸತ್ಯ ಶಂಕರನ್ ಈ ಬೆಳವಣಿಗೆ ಉತ್ತಮವಲ್ಲ ಎಂದಿದ್ದಾರೆ. ಆಟೋ ಚಾಲಕರು ಹಾಗೂ ಖಾಸಹಿ ವಾಹನ ಮಾಲೀಕರಿಗೆ ರಸ್ತೆ ಚಿಹ್ನೆ, ನಿಯಮಗಳ ಕುರಿತು ಶೂನ್ಯ ಜ್ಞಾನ ಇರುವುದು ಆತಂಕ ಮೂಡಿಸಿದೆ. ಹೊಸ ಚಾಲಕರಿಗಿಂತ ಹಳಯೆ ಚಾಲಕರು ಹೆಚ್ಚು ತಿಳಿದುಕೊಂಡಿದ್ದಾರೆ. ರಸ್ತೆ ನಿಯಮ ಉಲ್ಲಂಘನೆ, ಚಿಹ್ನೆಗಳ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಸತ್ಯಶಂಕರನ್ ಹೇಳಿದ್ದಾರೆ.

click me!