Sidhu Moose Wala Death ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರಿನ ನಂಬರ್ ಬಳಸಿ ಸಿಧು ಮೇಲೆ ದಾಳಿ!

By Suvarna NewsFirst Published Jun 1, 2022, 4:44 PM IST
Highlights
  • ಗಾಯಕ, ಕಾಂಗ್ರೆಸ್ ನಾಯಕ ಸಿಧು ಹತ್ಯೆ ಹಿಂದಿನ ಸೀಕ್ರೆಟ್
  • ಆನ್‌ಲೈನ್ ಮೂಲಕ ಕಾರು ಮಾರಾಟ, ಖರೀದಿ ಮಾಡುವವರೆ ಎಚ್ಚರ
  • ಸ್ಕಾರ್ಪಿಯೋ ವಾಹನದ ನಂಬರ್ ಕದ್ದ ಗ್ಯಾಂಗ್‌ಸ್ಟರ್ಸ್

ಪಂಜಾಬ್(ಜೂ.01): ಬಳಸಿದ ಕಾರುಗಳ ಮಾರಾಟ ಹಾಗೂ ಖರೀದಿ ಈಗ ಸುಲಭ. ಆನ್‌ಲೈನ್ ಮೂಲಕ ಕಾರನ್ನು ಗರಿಷ್ಠ ಮೊತ್ತಕ್ಕೆ ಮಾರಾಟ ಮಾಡಲು ಸಾಧ್ಯವಿದೆ. ಕಡಿಮೆ ಮೊತ್ತಕ್ಕೆ ಖರೀದಿ ಮಾಡಲು ಸಾಧ್ಯವಿದೆ. ಆದರೆ ಇದೇ ಆನ್‌ಲೈನ್ ವೇದಿಕೆ ಬಳಕೆ ಮಾಡುವಾಗ ಎಚ್ಚರ ವಹಿಸಬೇಕು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕಾರಣ ಖ್ಯಾತ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆಗೆ ದುಷ್ಕರ್ಮಿಗಳು ಆನ್‌ಲೈನ್‌‌ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರಿನ ನಂಬರ್ ಬಳಸಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಸಿಧು ಮೂಸೆ ವಾಲಾ ಹತ್ಯೆಗೆ ಹಲವು ದಿನಗಳಿಂದ ಪ್ಲಾನ್ ಮಾಡಲಾಗಿತ್ತು. ಎಲ್ಲಿ ಕೂಡ ಪೊಲೀಸರಿಗೆ ಸುಳಿವು ನೀಡದಂತೆ ಹತ್ಯೆ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಸಿಧು ಮೂಸೆವಾಲಗೆ ಖಾಸಗಿ ಭದ್ರತೆ ಇರುವುದರಿಂದ ಸಿಕ್ಕ ಸಣ್ಣ ಅವಕಾಶವನ್ನು ದುಷ್ಕರ್ಮಿಗಳು ಬಳಸಿಸಿಕೊಂಡಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಗುಂಡುಗಳು ಸಿಧು ದೇಹ ಹೊಕ್ಕಿವೆ. ದುಷ್ಕರ್ಮಿಗಳು ಸಿಧು ಮೇಲೆ ದಾಳಿ ನಡೆಸಲು ಬಳಸಿದ ಕಾರಿನ ನಂಬರ್ ಪ್ಲೇಟ್ ನಕಲಿಯಾಗಿದೆ. 

ನವೆಂಬರ್‌ನಲ್ಲಿ ಮದುವೆಯಾಗಲಿದ್ದ Sidhu Moose Wala ಅವರ ಫಿಯಾನ್ಸಿ ಯಾರು ಗೊತ್ತಾ?

ಸಿಧು ಹತ್ಯೆ ಪ್ರಕರಣದಲ್ಲಿ ಶಮ್‌ಶೇರ್ ಸಿಂಗ್ ಹೆಸರು ಅನಗತ್ಯವಾಗಿ ಥಳುಕು ಹಾಕಿಕೊಂಡಿದೆ. ಕಾರಣ ಸಿಧು ಮೂಸೆವಾಲ ಹತ್ಯೆಗೆ ದುಷ್ಕರ್ಮಿಗಳು ಬಳಸಿರುವುದು ಈ ಶಮ್‌ಶೇರ್ ಸಿಂಗ್ ಖರೀದಿಸಿದ ಮಹೀಂದ್ರ ಸ್ಕಾರ್ಪಿಯೋ ಕಾರಿನ ನಂಬರ್. ಶಮ್‌ಶೇರ್ ಸಿಂಗ್ ಕಾರ್ಸ್24 ಆನ್‌ಲೈನ್ ವೇದಿಕೆ ಮೂಲಕ ಬಳಸಿದ ಮಹೀಂದ್ರ ಸ್ಕಾರ್ಪಿಯೋ ಕಾರು ಖರೀದಿಸಿದ್ದರು. DL4C-NB-8483 ವಾಹನದ ರಿಜಿಸ್ಟ್ರೇಶನ್ ನಂಬರ್. ದುರ್ಷಕರ್ಮಿಗಳು ಈ ಬೊಲೆರೋ ವಾಹನದ ನಂಬರ್‌ ನಕಲಿ ಪ್ಲೇಟ್ ಮಾಡಿಸಿ ತಮ್ಮ ವಾಹನಕ್ಕೆ ಫಿಕ್ಸ್ ಮಾಡಿದ್ದಾರೆ. ಬಳಿಕ ಸಿಧು ಮೇಲೆ ದಾಳಿ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಸ್ಕಾರ್ಪಿಯೋ ವಾಹನದ ನಕಲಿ ನಂಬರ್ ದಾಖಲಾಗಿದೆ. ಇದರಿಂದ ತನಿಖೆ ಮತ್ತೊಂದು ದಿಕ್ಕಿನತ್ತ ಸಾಗಿಸಲು ದುಷ್ಕರ್ಮಿಗಳು ಪ್ಲಾನ್ ಮಾಡಿದ್ದರು. ಇಧಕ್ಕಾಗಿ ಆನ್‌ಲೈನ್ ಜಾಲಾಡಿ ನಕಲಿ ನಂಬರ್ ಪ್ಲೇಟ್ ರೆಡಿ ಮಾಡಿಸಿಕೊಂಡಿದ್ದಾರೆ. ಹೀಗೆ ಆನ್‌ಲೈನ್ ಮೂಲಕ ಮಾರಾಟಕ್ಕಿಟ್ಟಿದ್ದ ಮಹೀಂದ್ರ ಸ್ಕಾರ್ಪಿಯೋ ಕಾರಿನ ನಂಬರ್ ಬಳಸಿ ಸಿಧು ಮೇಲೆ ದಾಳಿ ಮಾಡಿದ್ದಾರೆ. 

ಡೆಹ್ರಾಡೂನ್‌ನಲ್ಲಿ 5 ಶಂಕಿತ ಹತ್ಯೆಕೋರರು ವಶಕ್ಕೆ
ಪಂಜಾಬ್‌ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ 5 ಶಂಕಿತ ಆರೋಪಿಗಳನ್ನು ಉತ್ತರಾಖಂಡದ ಡೆಹ್ರೂಡೂನ್‌ನಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಹತ್ಯೆ ಮಾಡಿದ ಬಳಿಕ ಈ ಆರೋಪಿಗಳು ಹೇಮಕುಂಡ ಸಾಹಿಬ್‌ಗೆ ತೀರ್ಥಯಾತ್ರೆಗೆ ಹೊರಟ ಯಾತ್ರಾರ್ಥಿಗಳೊಂದಿಗೆ ಸೇರಿಕೊಂಡಿದ್ದ ಎನ್ನಲಾಗಿದೆ. ಪಂಜಾಬ್‌ ಹಾಗೂ ಉತ್ತರಾಖಂಡ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗಾಯಕ ಸಿಧು ಮೂಸೇವಾಲಾ ಹತ್ಯೆ: ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ!

ದೆಹಲಿ ತಿಹಾರ್‌ ಜೈಲಲ್ಲೇ ಹತ್ಯೆಗೆ ಸ್ಕೆಚ್‌?
ಕುಖ್ಯಾತ ಗ್ಯಾಂಗಸ್ಟರ್‌ ಲಾವ್‌ರೆನ್ಸ್‌ ಬಿಷ್ಣೋಯ್‌ ತಂಡ ಹಾಗೂ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್‌ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಎಂದು ಪಂಜಾಬ್‌ ಪೊಲೀಸರು ಭಾನುವಾರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿನಲ್ಲಿ ಬಂಧಿಯಾಗಿರುವ ಬಿಷ್ಣೋಯ್‌ಯ ಕೊಠಡಿಯನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆæ. ಜೈಲಿನ ಕೋಣೆಗಳಲ್ಲಿ ನಿರ್ಬಂಧಿತ ಕೆಲವು ಸಾಮಗ್ರಿಗಳು ತನಿಖೆಯ ವೇಳೆಗೆ ಪತ್ತೆಯಾಗಿವೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

click me!