ರತನ್ ಟಾಟಾ ಕಾರು ನಂಬರ್ ಫೋರ್ಜರಿ ಮಾಡಿದ ಮಹಿಳೆ; BMW ಸೀಝ್, ಮಹಿಳೆ ಅರೆಸ್ಟ್!

By Suvarna News  |  First Published Jan 7, 2021, 2:39 PM IST

ಭಾರತದ ಶ್ರೀಮಂತ ಉದ್ಯಮಿ,  ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ಸಾಮಾಜಿಕ ಕಳಕಳಿ, ಸಮಾಜ ಸೇವೆ, ಮಾನವೀಯತೆಗೆ ತಲೆಬಾಗಲೇಬೇಕು. ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ರತನ್ ಟಾಟಾಗೆ ಇದೀಗ ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ಮೋಸ ಮಾಡಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಮಹಿಳೆಗೆ ತಕ್ಕ ಶಾಸ್ತಿ ಮಾಡಿದ್ದಾರೆ.


ಮುಂಬೈ(ಜ.07):  ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ದೇಶಕ್ಕೆ ನೀಡಿದ ಕೂಡುಗೆ ಅಪಾರ. ರತನ್ ಟಾಟಾ ಸಾಮಾಜಿಕ ಸೇವೆ, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಇದೀಗ ಮುಂಬೈನ ಪ್ರತಿಷ್ಠಿತ ಕಂಪನಿಯ ಮಹಿಳೆಯೊಬ್ಬರು, ರತನ್ ಟಾಟಾ ಕಾರು ನಂಬರ್ ಫೋರ್ಜರಿ ಮಾಡಿ, ತನ್ನ BMW ಕಾರಿಗೆ ಹಾಕಿಸಿಕೊಂಡಿದ್ದಾರೆ. ಆದರೆ ಚಾಲಾಕಿ ಮಹಿಳೆಯ ಮೋಸ ಇದೀಗ ಬಯಲಾಗಿದೆ.

83ನೇ ವಸಂತಕ್ಕೆ ಕಾಲಿಟ್ಟ ರೋಲ್ ಮಾಡೆಲ್, ಉದ್ಯಮಿ, ಸಹೃದಯಿ ರತನ್ ಟಾಟಾ!

Latest Videos

undefined

ಪ್ರತಿಷ್ಠಿತ ಕಂಪನಿಯ ಉದ್ಯೋಗಿಯಾಗಿರುವ ಮುಂಬೈ ಮಹಿಳೆ, ರತನ್ ಟಾಟಾ ಕಾರಿನ ರಿಜಿಸ್ಟ್ರೇಶನ್ ನಂಬರ್ ಫೋರ್ಜರಿ ಮಾಡಿ, ತನ್ನ ಕಾರಿಗೆ ಹಾಕಿಸಿಕೊಂಡಿದ್ದಾಳೆ. ಬಳಿಕ ತನ್ನ ಅಕ್ರಮ ಕೆಲಸಗಳಿಗೆ ಇದೇ ಕಾರನ್ನು ಬಳಸಿಕೊಂಡಿದ್ದಾಳೆ. ಹಲವು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾಳೆ. ಮಹಿಳೆ ಪ್ರತಿ ಬಾರಿ ನಿಯಮ ಉಲ್ಲಂಘಿಸಿದಾಗ ರತನ್ ಟಾಟಾಗೆ ಮುಂಬೈ ಪೊಲೀಸರು ಇ ಚಲನ್ ಕಳುಹಿಸಿದ್ದಾರೆ.

ಬದಲಾಗುತ್ತಿರುವ ಅಗತ್ಯಗಳಿಗೆ ಉದ್ಯಮ ಸೃಜನಶೀಲತೆ ಬದಲಾಗಬೇಕು: ರತನ್ ಟಾಟಾ!

ಒಂದೆರಡು ಬಾರಿ ರತನ್ ಟಾಟಾ ಕಚೇರಿ ಅಧಿಕಾರಿಗಳು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಪದೆ ಪದೇ ಟ್ರಾಫಿಕ್ ನಿಯಮದ ಇ ಚಲನ ರತನ್ ಟಾಟಾ ಕಚೇರಿಗೆ ಬಂದಿದೆ. ಇದರಿಂದ ಅನುಮಾನಗೊಂಡ ರತನ್ ಟಾಟಾ ಕಚೇರಿ ಸಿಬ್ಬಂಧಿಗಳು ಪೊಲೀಸರಿಗೆ ಈ ಕುರಿತು ವಿವರಣೆ ಕೇಳಿದ್ದಾರೆ. ಟಾಟಾ ಅವರ ಕಾರು ಈ ಮಾರ್ಗದಲ್ಲಿ ಸಂಚರಿಸಿಲ್ಲ, ಇಷ್ಟೇ ಅಲ್ಲ ಈ ರೀತಿಯ ಯಾವುದೇ ಟ್ರಾಫಿಕ್ ನಿಯಮ ಉಲಂಘಿಸಿಲ್ಲ ಎಂದು ಕಾರಿನ ವಿವರವನ್ನು ಪೊಲೀಸರಿಗೆ ನೀಡಿದ್ದಾರೆ.

ರತನ್ ಟಾಟಾ ಸಿಗ್ನಲ್ ಜಂಪ್, ಒನ್ ವೇ, ರಾಂಗ್ ಸೈಡ್ ಡ್ರೈವಿಂಗ್ ಮಾಡುವ ಅಥವಾ ಅವರ ಕಾರು ರೀತಿ ನಿಯಮ ಉಲ್ಲಂಘಿಸಲು ರತನ್ ಟಾಟಾ ಅನುವು ಮಾಡಿಕೊಡುವುದಿಲ್ಲ. ಹೀಗಾಗಿ ಇದರಲ್ಲೇನು ಗೋಲ್ ಮಾಲ್ ನಡೆದಿದೆ ಎಂದು ಅನುಮಾನಗೊಂಡ ಪೊಲೀಸರು ಮುಂಬೈ ಸಿಸಿಟಿ ದೃಶ್ಯ ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ರತನ್ ಟಾಟಾ ಕಾರಿನ BMW ಕಾರೊಂದು ನಗರದಲ್ಲಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. 

ಮಾಹಿತಿ ಪಡೆದ ಪೊಲೀಸರು ನೆರವಾಗಿ ರಸ್ತೆಗಿಳಿದಿದ್ದಾರೆ. ಬಳಿಕ BMW ಕಾರು ಹಾಗೂ ಮಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಫೋರ್ಜರಿ ವಿಚಾರ ಬೆಳಕಿಗೆ ಬಂದಿದೆ. ಸೆಕ್ಷನ್ 420ರ ಅಡಿ ವಂಚನೆ ಪ್ರಕರಣ, ಫೋರ್ಜರಿ ಕೇಸ್(456) ಸೇರಿದಂತೆ ಹಲವು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

click me!