ಬೆಂಗಳೂರು(ಜ.02): ಉದ್ಯಾನ ನಗರಿಯಲ್ಲಿ(Bengaluru) ಪೊಲೀಸರು ಹಲವು ವಾಹನಗಳನ್ನು(Vehicle) ನಿಲ್ಲಿಸಿ ಹೈಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್(HSRP)ಇಲ್ಲ ಅನ್ನೋ ಕಾರಣಕ್ಕೆ ಪೊಲೀಸರು(Police) ದಂಡ ಹಾಕುತ್ತಿದ್ದಾರೆ. ವಾಹನ ಸವಾರರು ಈ ಕುರಿತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. HSRP ನಂಬರ್ ಪ್ಲೇಟ್ ಕಡ್ಡಾಯ. ಆದರೆ ಅದಕ್ಕೂ ಇದೆ ನಿಯಮ, ಎಲ್ಲಾ ವಾಹನಕ್ಕೆ ದಂಡ ಹಾಕಲು ಸಾಧ್ಯವಿಲ್ಲ.
ಬೆಂಗಳೂರಿನ ಬೈಕ್ ಸವಾರ ಅರುಣ್ ಕೆ ಇತ್ತೀಚೆಗೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸಂಚರಿಸುವ ವೇಳೆ ನನ್ನ ಪೊಲೀಸರು ತಡೆದಿದ್ದಾರೆ. ಬಳಿಕ HSRP ನಂಬರ್ ಪ್ಲೇಟ್ ಇಲ್ಲ ಅನ್ನೋ ಕಾರಣಕ್ಕೆ 500 ರೂಪಾಯಿ ದಂಡ ಹಾಕಿದ್ದಾರೆ. ಇದು ಯಾವ ನ್ಯಾಯ ಎಂದು ಟ್ವೀಟ್ ಮಾಡಿದ್ದಾರೆ.
ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ!
ಮತ್ತೋರ್ವ ಸವಾರ ಅಲೋಕ್ ಇದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. HSRP ನಂಬರ್ ಪ್ಲೇಟ್ ಇಲ್ಲ ಅನ್ನೋ ಕಾರಣಕ್ಕೆ ಪೊಲೀಸರು ದಂಡ ಹಾಕಿದ್ದಾರೆ. ಈ HSRP ನಂಬರ್ ಪ್ಲೇಟ್ ಎಲ್ಲಿ ಲಭ್ಯವಿದೆ ಎಂದು ಮಾಹಿತಿ ಕೇಳಿದರೆ ಪೊಲೀಸರ ಬಳಿ ಉತ್ತರವಿಲ್ಲ. ಹಳೇ ವಾಹನಗಳಿಗೆ ಈ ನಿಯಮ ಅನ್ವಯವಾಗುತ್ತದೆಯೇ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ವಾಹನ ಸವಾರರಿಗೆ HSRP ನಂಬರ್ ಪ್ಲೇಟ್ ಆತಂಕ ಹೆಚ್ಚಾಗಿದೆ. HSRP ನಂಬರ್ ಇಲ್ಲ ಅನ್ನೋ ಕಾರಣಕ್ಕೆ ಇದೀಗ ಸುಖಾಸುಮ್ಮನೆ ದಂಡ ಪಾವತಿ ಮಾಡಬೇಕಾಗಿದೆ. ಆದರೆ HSRP ನಂಬರ್ ಪ್ಲೇಟ್ ನಿಯಮದ ಪ್ರಕಾರ ಎಲ್ಲಾ ವಾಹನಕ್ಕೆ ದಂಡ ಹಾಕುವಂತಿಲ್ಲ.
HSRP ನಂಬರ್ ಪ್ಲೇಟ್ ನಿಯಮ ಎಪ್ರಿಲ್ 1, 2019ರಿಂದ ಜಾರಿಗೆ ಬಂದಿದೆ. ನಿಯಮದ ಪ್ರಕಾರ 2019, ಎಪ್ರಿಲ್ 1 ರಿಂದ ಬಳಿಕ ಖರೀದಿಸಿದ ಅಥವಾ ರಿಜಿಸ್ಟರ್ಡ್ ಆಗಿರುವ ಹೊಸ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಆದರೆ ಎಪ್ರಿಲ್ 1, 2019ಕ್ಕಿಂತ ಮುಂಚಿನ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಲ್ಲ. ಈ ವಾಹನಗಳಿಗೆ HSRP ನಂಬರ್ ಪ್ಲೇಟ್ ಇಲ್ಲದಿದ್ದರೆ ಪೊಲೀಸರು ದಂಡ ಹಾಕುವಂತಿಲ್ಲ. ಆದರೆ ಈ ನಿಯಮ ಮೀರಿ ಪೊಲೀಸರು ದಂಡ ಹಾಕುತ್ತಿದ್ದಾರೆ ಅನ್ನೋದು ಹಲವು ಬೆಂಗಳೂರು ಸವಾರರು ಆಕ್ರೋಶದ ಮಾತುಗಳು.
ಕೇಂದ್ರ ಸರ್ಕಾರ ಈಗಾಗಲೇ HSRP ನಂಬರ್ ಪ್ಲೇಟ್ ಕಡ್ಡಾಯ ಮಾಡಿದೆ. 2018ರಲ್ಲಿ ಕೇಂದ್ರ ಸರ್ಕಾರ ಈ ನಿಯಮ ಘೋಷಿಸಿತ್ತು 2019ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಮೋಟಾರು ವಾಹನಕ್ಕೆ ತಿದ್ದುಪಡಿ ತಂದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಹೊಸ ನಿಯಮ ಜಾರಿಗೆ ತಂದಿದ್ದಾರೆ. ಹೈಸೆಕ್ಯೂರಿಟಿ ನಂಬರ್ ಪ್ಲೇಟ್‌ನಲ್ಲಿ ಕ್ರೋಮಿಯಂ ಹಾಲೋಗ್ರಾಮ್ ಸ್ಟಾಂಪ್ ಅಳವಡಿಸಲಾಗುತ್ತದೆ. ಈ ಸ್ಟಾಂಪ್ ಸ್ಕ್ಯಾನ್ ಮಾಡಲು ಸಾಧ್ಯವಿದೆ. ಸ್ಕ್ಯಾನ್ ಮೂಲಕ ವಾಹನದ ಎಲ್ಲಾ ಮಾಹಿತಿಗಳನ್ನು ಪಡೆಯಲು ಸಾಧ್ಯವಿದೆ.
Electric Vehicle Converter ಹಳೇ ವಾಹನ ಆತಂಕ ಬೇಡ, ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಇದೆ ಮಾನ್ಯತೆ ಪಡೆದ ಘಟಕ!
ವಾಹನದ ರಿಜಿಸ್ಟ್ರೇಶನ್, ವಿಮೆ, ಮಾಲೀಕರ ಮಾಹಿತಿ, ವಿಳಾಸ ಸೇರಿದಂತೆ ವಾಹನದ ಎಲ್ಲಾ ಮಾಹಿತಿ ಇದರಲ್ಲಿ ಅಡಕವಾಗರಲಿದೆ. ಪೊಲೀಸರು ಸ್ಕ್ಯಾನ್ ಮಾಡಿದ ತಕ್ಷಣವೇ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ಈ HSRP ನಂಬರ್ ಪ್ಲೇಟ್‌ನಿಂದ ಪೊಲೀಸರು ಸಿಸಿಟಿವಿ ಮೂಲಕ ವಾಹನ ತಪಾಸಣೆ ಮಾಡಲು, ಅಥವಾ ಇತರ ವಿಚಾರಣೆಗೆ ಸಿಸಿಟಿವಿಯಲ್ಲಿ ವಾಹನ ನಂಬರ್ ಪತ್ತೆಹಚ್ಚಲು HSRP ನಂಬರ್ ಪ್ಲೇಟ್ ನೆರವಾಗಲಿದೆ.ಇದರ ಜೊತೆಗೆ ದೇಶದಲ್ಲಿನ ಭದ್ರತೆ, ನಕಲಿ ನಂಬರ್ ಪ್ಲೇಟ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಈ HSRP ನಂಬರ್ ಪ್ಲೇಟ್ ಉತ್ತರವಾಗಲಿದೆ. ಹಲವು ಕಾರಣಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಲಾಗಿದೆ.