MH Early Bird Incentive ಮಾರ್ಚ್ 31ರ ವರೆಗೆ ಎಲೆಕ್ಟ್ರಿಕ್ ವಾಹನ ಖರೀದಿ ಮೇಲಿನ ಸಬ್ಸಿಡಿ ವಿಸ್ತರಣೆ!

Published : Jan 01, 2022, 07:06 PM ISTUpdated : Jan 01, 2022, 07:14 PM IST
MH Early Bird Incentive ಮಾರ್ಚ್ 31ರ ವರೆಗೆ ಎಲೆಕ್ಟ್ರಿಕ್ ವಾಹನ ಖರೀದಿ ಮೇಲಿನ ಸಬ್ಸಿಡಿ ವಿಸ್ತರಣೆ!

ಸಾರಾಂಶ

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಮಹಾ ಸರ್ಕಾರದ ಸಬ್ಸಡಿ ವಿಸ್ತರಣೆ 2021ಕ್ಕೆ ಅಂತ್ಯವಾಗಿದ್ದ ಇನ್ಸೆಂಟೀವ್ ಯೋಜನೆ ಮಾರ್ಚ್‌ವರೆಗೆ ವಿಸ್ತರಣೆ ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ವಿಶೇಷ ಯೋಜನೆ

ಮುಂಬೈ(ಜ.01): ಎಲೆಕ್ಟ್ರಿಕ್ ವಾಹನ(Electric Vehicle) ಖರೀದಿಗೆ ಕೇಂದ್ರ ಸರ್ಕಾರ FAME II ಯೋಜನೆಯನ್ನು ಈಗಾಗಲೇ ವಿಸ್ತರಿಸಿದೆ. ಈ ಯೋಜನೆ ಮೂಲಕ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಕಾರು(Electric Car) ಖರೀದಿಗೆ ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ದೆಹಲಿ(Delhi), ಮಹಾರಾಷ್ಟ್ರ(Maharastra) ಸೇರಿದಂತೆ ಕೆಲ ರಾಜ್ಯಗಳು ತಮ್ಮದೇ ಆದ ಸ್ಕೀಮ್ ಘೋಷಿಸಿದೆ. ಇದೀಗ  ಮಹಾರಾಷ್ಟ್ರ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ನೀಡುತ್ತಿದ್ದ ಇನ್ಸೆಂಟೀವ್ ಸ್ಕೀಮ್(Early Bird Incentive) ಮಾರ್ಚ್ 31, 2022ರ ವರೆಗೆ ವಿಸ್ತರಿಸಿದೆ.

ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಸಬ್ಸಿಡಿ ಯೋಜನೆ ವಿಸ್ತರಿಸಿದೆ. ಇದೀಗ 3 ತಿಂಗಳಿಗೆ ಯೋಜನೆ ವಿಸ್ತರಿಸಲಾಗಿದೆ. ಈ ಕುರಿತು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

2021ರ ಎಪ್ರಿಲ್ 1 ರಿಂದ ಡಿಸೆಂಬರ್ 27ರ ವರೆಗೆ ಮಹಾರಾಷ್ಟ್ರದಲ್ಲಿ ಎಲಕ್ಟ್ರಿಕ್ ವಾಹನ ಮಾರಾಟದಲ್ಲಿ ಶೇಕಡಾ 157ರಷ್ಟು ಏರಿಕೆ ಕಂಡಿದೆ. ಇದು ರಾಜ್ಯ ಸರ್ಕಾರ ಘೋಷಿಸಿದ ಸಬ್ಸಿಡಿ ಯೋಜನೆ ಬಳಿಕ ಈ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಮತ್ತೆ ಮೂರು ತಿಂಗಳು ಸಬ್ಸಡಿ ಯೋಜನೆ ನೀಡಲಾಗಿದೆ. ಈ ಮೂಲಕ ಮಾರ್ಚ್ ತಿಂಗಳ ವರೆಗೆ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಈ ಸೌಲಭ್ಯ ಸಿಗಲಿದೆ.

2019-20 ಸಾಲಿನಲ್ಲಿ  ಮಹಾರಾಷ್ಟ್ರದಲ್ಲಿ 7,400 ಎಲೆಕ್ಟ್ರಿಕ್ ವಾಹನ ಮಾರಾಟಗೊಂಡಿದೆ. ಈ ಸಂಖ್ಯೆ 2020-21ರ ಸಾಲಿನಲ್ಲಿ 9416ಕ್ಕೆ ಏರಿಕೆಯಾಗಿತ್ತು. ಇನ್ನು 2021-22ರ ಸಾಲಿನಲ್ಲಿ ಈ ಸಂಖ್ಯೆ ಇದುವರೆಗೆ 24,215ಕ್ಕೆ ಏರಿಕೆಯಾಗಿದೆ. ಇನ್ನು ಕೇವಲ ಮುಂಬೈನ ಅಂಕಿ ಅಂಶ ನೋಡುವುದಾದರೆ, ಇಲ್ಲೂ ಗಣನೀಯ ಏರಿಕೆ ಕಂಡಿದೆ. 2019-20ರ ಸಾಲಿನಲ್ಲಿ ಮುಂಬೈನಲ್ಲಿ 642 ಎಲೆಕ್ಟ್ರಿಕ್ ವಾಹನ ಮಾರಾಟಗೊಂಡಿತ್ತು. 2020-21ರಲ್ಲಿ 1,422 ಎಲೆಕ್ಟ್ರಿಕ್ ವಾಹನ ಮಾರಾಟಗೊಂಡಿತ್ತು. 2021-22ರ ಸಾಲಿನಲ್ಲಿ ಮುಂಬೈನಲ್ಲಿ 3,059 ಎಲೆಕ್ಟ್ರಿಕ್ ವಾಹನ ಮಾರಾಟಗೊಂಡಿದೆ. ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟ ಶೇಕಡ 157ರಷ್ಟು ಹೆಚ್ಚಾಗಿದ್ದರೆ, ಮುಂಬೈನಲ್ಲಿ  ಶೇಕಡಾ 112ರಷ್ಟು ಏರಿಕೆ ಕಂಡಿದೆ. 

Upcoming Electric Cars ಹೊಸ ವರ್ಷದಲ್ಲಿ ಭಾರತದ ಮಾರುಕಟ್ಟೆ ಬರಲಿರುವ ಟಾಪ್ 10 ಎಲೆಕ್ಟ್ರಿಕ್ ಕಾರು!

ಮಹಾರಾಷ್ಟ್ರ ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ರಾಜ್ಯ ಸರ್ಕಾರ ಪ್ರತಿ kWhಗೆ  5,000 ಪ್ರೋತ್ಸಾಹಕವನ್ನು ನೀಡುತ್ತಿದೆ. ಇದರಿಂದ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಕ್ಕೆ 1.5 ಲಕ್ಷ ರೂಪಾಯಿವರೆಗೆ ರಾಜ್ಯ ಸರ್ಕಾರದ ಸಬ್ಸಿಡಿ ಸಿಗಲಿದೆ. ಇನ್ನು ಎಲೆಕ್ಟ್ರಿಕ್ ದ್ವಿಚಕ್ರವಾಹನಕ್ಕೆ ಪ್ರತಿ kWhಗೆ  5,000 ಪ್ರೋತ್ಸಾಹಕವನ್ನು ನೀಡುತ್ತಿದೆ. ಇದರಿಂದ ದ್ವಿಚಕ್ರ ವಾಹನಕ್ಕೆ 15,000 ರೂಪಾಯಿ ವರೆಗೆ ರಾಜ್ಯದಿಂದ ಪ್ರೋತ್ಸಾಹಕಧನ ಸಿಗಲಿದೆ.  

ಸಬ್ಸಿಡಿ ಯೋಜನೆ ಇದೀಗ ಮಾರ್ಚ್ 31ರ ವರೆಗೆ ಇರಲಿದೆ. ಈ ಯೋಜನೆಯಿಂದ 1 ಲಕ್ಷ ರೂಪಾಯಿ ಎಲೆಕ್ಟ್ರಿಕ್ ಸ್ಕೂಟರ್ 85,000 ರೂಪಾಯಿಗಳಿಗೆ ಮಹಾರಾಷ್ಟ್ರದಲ್ಲಿ ಲಭ್ಯವಾಗಲಿದೆ. ಇನ್ನು 10 ಲಕ್ಷ ರೂಪಾಯಿ ಎಲೆಕ್ಟ್ರಿಕ್ ಕಾರು 8.5 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ. ಆದರೆ ಈ ಯೋಜನೆಯಲ್ಲಿ ಮತ್ತೊಂದು ಷರತ್ತು ವಿಧಿಸಲಾಗಿದೆ. ಈ ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನ ಖರೀದಿಸಲು 15 ಲಕ್ಷ ರೂಪಾಯಿ ಒಳಗಿನ ಎಲೆಕ್ಟ್ರಿಕ್ ವಾಹನವಾಗಿರಬೇಕು. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಈ ಯೋಜನೆ ಅಡಿಯಲ್ಲಿ ಬರಲಿದೆ.

ಕರ್ನಾಟಕದಲ್ಲಿ ಸದ್ಯ ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹಕ ಧನ ಯೋಜನೆಗಳು ಇಲ್ಲ. ಇತರ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲೂ ಸಬ್ಸಿಡಿ ಯೋಜನೆಯ ಅವಶ್ಯಕವಿದೆ ಅನ್ನೋ ಒತ್ತಾಯಗಳು ಕೇಳಬರುತ್ತಿದೆ. ಆದರೆ ಈ ಕುರಿತು ರಾಜ್ಯ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು