ಮಹಿಂದ್ರಾ ವಾಹನಗಳ ಖರೀದಿ ಮೇಲೆ ಗರಿಷ್ಠ 3.06 ಲಕ್ಷ ರೂ. ಡಿಸ್ಕೌಂಟ್

Suvarna News   | Asianet News
Published : Mar 16, 2021, 04:59 PM IST
ಮಹಿಂದ್ರಾ ವಾಹನಗಳ ಖರೀದಿ ಮೇಲೆ ಗರಿಷ್ಠ 3.06 ಲಕ್ಷ ರೂ. ಡಿಸ್ಕೌಂಟ್

ಸಾರಾಂಶ

ಪ್ರಯಾಣಿಕ ಮತ್ತು ವಾಣಿಜ್ಯ ಉದ್ದೇಶದ ವಾಹನಗಳ ತಯಾರಿಕೆಯಲ್ಲಿ ಮುಂಚಾಣಿಯಲ್ಲಿರುವ ಮಹಿಂದ್ರಾ ಆಂಡ್ ಮಹಿಂದ್ರಾ ಭಾರತದ ಪ್ರಮುಖ ಕಂಪನಿಯಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆಯ ಹಿನ್ನೆಲೆಯಲ್ಲಿ ಮಹಿಂದ್ರಾ ಕಂಪನಿಯ ವಾಹನಗಳು ಹೆಚ್ಚು ಗಮನ ಸೆಳೆಯುತ್ತವೆ. ಕಂಪನಿ ಇದೀಗ ತನ್ನ ವಾಹನಗಳ ಖರೀದಿ ಮೇಲೆ ಮಾರ್ಚ್ ತಿಂಗಳಲ್ಲಿ ಗರಿಷ್ಠ ಡಿಸ್ಕೌಂಟ್ ಘೋಷಿಸಿದೆ.

ಮಹಿಂದ್ರ ಆಂಡ್ ಮಹಿಂದ್ರ ಕಂಪನಿಯು ಕಾರು, ಎಸ್‌ಯುವಿ, ಎಲೆಕ್ಟ್ರಿಕ್ ವೆಹಿಕಲ್,  ಟ್ರಕ್ಕು, ಬಸ್ಸು ಸೇರಿದಂತೆ ವಾಣಿಜ್ಯ ಉದ್ದೇಶ ಹಾಗೂ ಪ್ರಯಾಣಿಕ ವಾಹನಗಳ ತಯಾರಿಕೆಯಲ್ಲಿ ದೇಶದ ಮುಂಚೂಣಿಯ ಕಂಪನಿಯಾಗಿದೆ. ತಂತ್ರಜ್ಞಾನ ಹಾಗೂ ಗರಿಷ್ಠ ಸುರಕ್ಷತೆಯ ವಾಹನಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ನಿಪುಣತೆಯನ್ನು ಸಾಧಿಸಿರುವ ಮಹಿಂದ್ರಾ ಕಂಪನಿ ತನ್ನ ವಾಹನಗಳ ಮಾರಾಟದ ಮೇಲೆ ಮಾರ್ಚ್ ತಿಂಗಳಲ್ಲಿ ಗರಿಷ್ಠ 3.06 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ಘೋಷಿಸಿದೆ.

2020ರಲ್ಲಿ ಲಾಂಚ್ ಆದ ಥಾರ್, ಆಫ್ ರೋಡರ್ ಎಸ್‌ಯುವಿಯನ್ನು ಹೊರತಪಡಿಸಿ ಬಹುತೇಕ ಉಳಿದೆಲ್ಲ ವಾಹನಗಳ ಮೇಲೆ ಡಿಸ್ಕೌಂಟ್ ಘೋಷಿಸಲಾಗಿದೆ. ಅದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಸುದ್ದಿ ಜಾಲತಾಣಗಳು ವರದಿ ಮಾಡಿವೆ.

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!

ಈ ಡಿಸ್ಕೌಂಟ್‌ನಲ್ಲಿ ನಗದು ರಿಯಾಯ್ತಿ, ಎಕ್ಸ್‌ಚೇಂಜ್ ಬೆನೆಫಿಟ್ಸ್, ಕಾರ್ಪೊರೇಟ್ ಡಿಸ್ಕೌಂಟ್ಸ್ ಮತ್ತು ಇತರ ಆಫರ್‌ಗಳು ಇವೆ. ನೆನಪಿಡಬೇಕಾದ ಸಂಗತಿ ಏನೆಂದರೆ- ಈ ಎಲ್ಲ ಆಫರ್ 2021 ಮಾರ್ಚ್ ತಿಂಗಳ 31ರವರೆಗೆ ಮಾತ್ರವೇ ಸಿಂಧುವಾಗಿರುತ್ತವೆ. ಹಾಗೆಯೇ ಈ ಆಫರ್‌ಗಳ ಮೊತ್ತ ಒಂದು ಡೀಲರ್‌ಶಿಪ್‌ನಿಂದ ಮತ್ತೊಂದು ಡೀಲರ್‌ಶಿಪ್‌ನೊಂದಿಗೆ ವ್ಯತ್ಯಾಸವಿರಬಹುದು. ಹಾಗಾಗಿ, ಒಂದು ವೇಳೆ, ನೀವೇನಾದರೂ ಮಹಿಂದ್ರಾ ಪ್ರಯಾಣಿಕ ವಾಹನಗಳ ಖರೀದಿಗೆ ಪ್ಲ್ಯಾನ್ ಮಾಡಿಕೊಂಡಿದ್ದರೆ ಈ ಖರೀದಿಗೆ ಸೂಕ್ತ ಕಾಲವಾಗಿದೆ ಎಂದು ಹೇಳಬಹುದು.

ಮಹಿಂದ್ರಾ ಸ್ಕಾರ್ಪಿಯೋ ಖರೀದಿ ಮೇಲೆ ನಿಮಗೆ ಒಟ್ಟು 36542 ರೂಪಾಯಿವರೆಗೆ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿ 7,042 ಕ್ಯಾಶ್ ಡಿಸ್ಕೌಂಟ್ ಸಿಕ್ಕರೆ, ಎಕ್ಸ್‌ಚೇಂಜ್ ಬೋನಸ್ ಆಗಿ 15 ಸಾವಿರ ರೂ. ಮತ್ತು ಕಾರ್ಪೊರೇಟ್ ಆಫರ್ 4,500 ರೂ. ಇರಲಿದೆ. ಇದಕ್ಕೆ ಹೆಚ್ಚುವರಿಯಾಗಿ ಕಂಪನಿ 10 ಸಾವಿರ ರೂ. ಡಿಸ್ಕೌಂಟ್ ಘೋಷಿಸಿದೆ.

ಬೊಲೆರೋ ಖರೀದಿ ಮೇಲೂ ಕಂಪನಿ ಆಫರ್ ನೀಡುತ್ತಿದೆ. ನಿಮಗೆ ಗರಿಷ್ಠ 17,500 ರೂ.ವರೆಗೂ ಡಿಸ್ಕೌಂಟ್ ಸಿಗಲಿದೆ.

ಮಹಿಂದ್ರಾದ ಮತ್ತೊಂದು ಪ್ರಮುಖ ಪ್ರಯಾಣಿಕರ ವಾಹನವಾಗಿರುವ ಮಹಿಂದ್ರಾ ಅಲ್ಟುರಾಸ್ ಜಿ4 ಎಸ್‌ಯುವಿ ಖರೀದಿ ಮೇಲೆ ಗರಿಷ್ಠ 3.06 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಈ ಪೈಕಿ 2.2 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಸಿಕ್ಕರೆ ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಆಫರ್ ಕ್ರಮವಾಗಿ 50 ಸಾವಿರ ರೂಪಾಯಿ 16 ಸಾವಿರ ರೂಪಾಯಿ ರಿಯಾಯ್ತಿ ಸಿಗಲಿದೆ. ಇದಕ್ಕೆ ಹೆಚ್ಚುವರಿಯಾಗಿ ಕಂಪನಿ 20 ಸಾವಿರ ರೂ.ವರೆಗೂ ಬೆನೆಫಿಟ್ಸ್ ನೀಡಲಿದೆ. ಈ ಆಫರ್ ಮಾರ್ಚ್ ಮಾತ್ರವೇ ಸೀಮಿತವಾಗಿದೆ ಎಂಬುದನ್ನು ಗಮನಿಸಬೇಕು.

ಬಜಾಜ್‍ನ ಹೊಸ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಬಿಡುಗಡೆ

ಇನ್ನು ಮಹಿಂದ್ರಾ ಮರಾಝೋ ಎಂಪಿವಿ ಖರೀದಿ ಮೇಲೂ ಕಂಪನಿ ಗರಿಷ್ಟ 36 ಸಾವಿರ ರೂಪಾಯಿವರೆಗೂ ರಿಯಾಯ್ತಿ ಘೋಷಿಸಿದೆ. ಇದರಲ್ಲಿ ನಗದು ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಬೋನಸ್ ಕ್ರಮವಾಗಿ 15,000 ರೂ.ವರೆಗೂ ಸಿಗಲಿದೆ. ಜೊತೆಗೆ ಇತರೆ  ಬೆನೆಫಿಟ್ಸ್ 6 ಸಾವಿರ ರೂ.ವರೆಗೂ ಸಿಗಬಹುದು.

ಮಹಿಂದ್ರಾ ಎಕ್ಸ್‌ಯುವಿ300 ಮೇಲೆ ಗರಿಷ್ಠ 39,325 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಎಕ್ಸ್‌ಯುವಿ300 ಸಬ್‌ಕಾಂಪಾಕ್ಟ್ ಎಸ್‌ಯುವಿಯಾಗಿದ್ದು, ಈ ವಾಹನದ ಖರೀದಿ ಮೇಲೆ ಗ್ರಾಹಕರಿಗೆ 4,585 ರೂ. ಕ್ಯಾಶ್ ಡಿಸ್ಕೌಂಟ್ ಸಿಕ್ಕರೆ, ಎಕ್ಸ್‌ಚೇಂಜ್ ಬೋನಸ್ ಆಗಿ 25,000 ರೂಪಾಯಿ ಮತ್ತು ಕಾರ್ಪೊರೇಟ್ ಬೆನೆಫಿಟ್ಸ್ 4,500 ರೂಪಾಯಿವರೆಗೂ ಸಿಗಲಿದೆ. ಇದಕ್ಕೆ ಹೆಚ್ಚುವರಿಯಾಗಿ ಕಂಪನಿ 5000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

ದೇಶೀಯ ಕಂಪನಿಯಾಗಿರುವ ಮಹಿಂದ್ರಾ ಆಂಡ್ ಮಹಿಂದ್ರಾ ವಾಹನಗಳ ಕ್ಷೇತ್ರದಲ್ಲಿ ತನ್ನದೇ ಮಾರುಕಟ್ಟೆಯ ಪಾಲನ್ನು ಹೊಂದಿದೆ. ತಂತ್ರಜ್ಞಾನ ಮತ್ತು ಸರಕ್ಷತೆಯ ದೃಷ್ಟಿಯಿಂದ ಮುಂಚೂಣಿಯಲ್ಲಿ ಮಹಿಂದ್ರಾ ಕಂಪನಿಗಳ ವಾಹನಗಳಿಗೆ ಸಾರ್ವಕಾಲಿಕ ಬೇಡಿಕೆ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಕಂಪನಿ ಡಿಸ್ಕೌಂಟ್‌ನಂಥ ಉಪಕ್ರಮಗಳಿಗೆ ಮುಂದಾಗುತ್ತದೆ ಎಂದು ಹೇಳಬಹುದು.

ಟಾಟಾ ಟಿಯಾಗೋ ಈಗ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯ!

PREV
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು