ಮಧ್ಯಪ್ರದೇಶದ ವಧುವೊಬ್ಬಳು ಮಹೀಂದ್ರಾ ಸಂಸ್ಥೆಯ ಸ್ವರಾಜ್ ಟ್ರಾಕ್ಟರ್ ಓಡಿಸಿದ್ದು, ಇದಕ್ಕೆ ಉದ್ಯಮಿ ಆನಂದ್ ಮಹೀಂದ್ರ ಖುಷಿಯಾಗಿದ್ದು ಇದು ಅರ್ಥಪೂರ್ಣವಾಗಿದೆ ಎಂದು ಹೇಳಿದ್ದಾರೆ.
ಉದ್ಯಮಿ ಹಾಗೂ ಮಹೀಂದ್ರಾ ಮೋಟಾರು ವಾಹನ ನಿರ್ಮಾಣ ಸಂಸ್ಥೆಯ ಸಂಸ್ಥಾಪಕ ಆನಂದ್ ಮಹೀಂದ್ರಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸ್ಪೂರ್ತಿದಾಯಕ ವಿಡಿಯೋಗಳುಗಳು ಫೋಟೋಗಳಿಗೆ ಸದಾಕಾಲ ಸ್ಪಂದಿಸುತ್ತಿರುತ್ತಾರೆ. ಹಾಗೆಯೇ ಇತ್ತೀಚೆಗೆ ವಧುವೊಬ್ಬರು ತಮ್ಮ ಮದುವೆಯಂದು ಮಹೀಂದ್ರಾ ಸಂಸ್ಥೆ ನಿರ್ಮಿಸಿದ ಸ್ವರಾಜ್ ಟ್ರಾಕ್ಟರ್‌ನ್ನು ಓಡಿಸುತ್ತಾ ಮದುವೆ ಮನೆಗೆ ಆಗಮಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಂದ ಹಾಗೆ ಹೀಗೆ ಟ್ರಾಕ್ಟರ್ ಓಡಿಸುತ್ತಾ ಮದುವೆ ಮನೆಗೆ ಬಂದ ವಧುವಿನ ಹೆಸರು ಭಾರತಿ ಎಂದಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ ಭಾರತಿ ಎನ್ನುವ ವಧು ಸ್ವರಾಜ್ ಅನ್ನು ಡ್ರೈವ್ ಮಾಡಿದರು (A mahindraRise brand) ಎಂದು ಬರೆದು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಭಾರತಿ ಎಂದರೆ ಭಾರತೀಯರೆಲ್ಲರ ಆಯಿ ಸ್ವರಾಜ್ಯ ಎಂದರೆ ನಮ್ಮ ಸ್ವಂತ ದೇಶ ಹೀಗಾಗಿ ಈ ಎರಡು ಹೆಸರುಗಳು ಒಂದಂಕೊಂದು ಕೂಡಿಕೊಂಡು ತಾಯಿ ಭಾರತಿ ಸ್ವರಾಜ್ಯವನ್ನು ಮುನ್ನಡೆಸುತ್ತಿದ್ದಾಳೆ ಎಂಬ ಅರ್ಥದಲ್ಲಿ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ.
Bride named ‘Bharti’ driving a Swaraj. (A brand) Makes sense… https://t.co/pfSNEe1MDh
— anand mahindra (@anandmahindra)ಅಂದಹಾಗೆ ಈ ಮದುವೆ ನಡೆದಿದ್ದು ಮಧ್ಯಪ್ರದೇಶದ (Madhya Pradesh) ಬೇತುಲ್‌ನಲ್ಲಿ (Betul) ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವಧು ಭಾರತಿ ಅವರು ತಮ್ಮ ಮದುವೆ ದಿನ ಏನಾದರೂ ವಿಭಿನ್ನವಾಗಿರುವುದನ್ನು ಮಾಡಲು ಬಯಸಿದ್ದರು. ಅಲ್ಲದೇ ಪಲ್ಲಕ್ಕಿ ಅಥವಾ ಕಾರಿನಲ್ಲಿ ವಧು ಮದುವೆ ಮಂಟಪ ಪ್ರವೇಶಿಸುವ ಕ್ರಮ ಹಳೆಯದಾಗಿದೆ ಎಂದ ವಧು ಭಾರತಿ ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಟ್ರಾಕ್ಟರ್‌ಗಳು ಲಭ್ಯವಿದ್ದು ಅದರ ಚಾಲನೆ ಹೇಗೆ ಎಂಬುದು ನನಗೆ ತಿಳಿದಿದೆ ಹೀಗಾಗಿ ಮದುವೆಗೆ ಬರಲು ನಾನು ಟ್ರಾಕ್ಟರ್ ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾಳೆ. ಭಾರತಿ ಅವರ ಮದುವೆ ಮೇ.25 ರಂದು ವಾಸು ಕವಾಡ್ಕರ್ ಅವರೊಂದಿಗೆ ಬೇತುಲ್‌ನ ಜಾವ್ರಾ ಗ್ರಾಮದಲ್ಲಿ ನಡೆದಿತ್ತು.
ಕೆಂಪು ಬಣ್ಣದ ಲೆಹೆಂಗಾ ಮೈ ತುಂಬಾ ಆಭರಣದೊಂದಿಗೆ ಸಿಂಗಾರಗೊಂಡ ವಧು ಕಪ್ಪು ಕನ್ನಡಕ ಧರಿಸಿ ತನ್ನ ಸಹೋದರರಿಬ್ಬರ ಜೊತೆ ಟ್ರಾಕ್ಟರ್ ಚಲಾಯಿಸುತ್ತಾ ಮದುವೆ ಮಂಟಪಕ್ಕೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು-ಉಡುಪಿ ರಸ್ತೆಯ ಜಂಗಲ್ ಡ್ರೈವ್‌ನ ಸುಂದರ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಇತ್ತೀಚೆಗೆ ವಧು ವರರು ಮದುವೆ ಮಂಟಪಕ್ಕೆ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ನೂತನ ವಧು ಕುದುರೆ ಮೇಲೆ ಮೇಲೆ ಬುಲೆಟ್ ಮೇಲೆ ಸಾಗಿ ಬಂದಂತಹ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಈಗಾಗಲೇ ನೋಡಿದ್ದೇವೆ. ಮದುವೆ ದಿನ ರಾಣಿಯಂತೆ ಕಂಗೊಳಿಸಬೇಕು ಎಂಬುದು ಬಹುತೇಕ ಹೆಣ್ಣು ಮಕ್ಕಳ ಕನಸು. ಎಲ್ಲರ ಮದುವೆಗಿಂತ ತಮ್ಮ ಮದುವೆ ವಿಭಿನ್ನವಾಗಿರಬೇಕು ಎಂದು ಬಹುತೇಕರು ಬಯಸುತ್ತಾರೆ. ಅಲ್ಲದೇ ಎಲ್ಲರಿಗಿಂತ ಡಿಫರೆಂಟ್ ಆಗಿ ಮದುವೆ ಆಗೋದು ಇಂದಿನ ಟ್ರೆಂಡ್. ಅದಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಮದುವೆ ಹೆಣ್ಣು ಹೆಲಿಕಾಪ್ಟರ್‌ನಲ್ಲಿ, ಬುಲೆಟ್‌ನಲ್ಲಿ, ಎತ್ತಿನಗಾಡಿಯಲ್ಲಿ ಹೀಗೆ ವರ ಜೆಸಿಬಿಯಲ್ಲಿ ಬಂದಂತಹ ಹಲವು ವಿಡಿಯೋಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಕೆಲ ದಿನಗಳ ಹಿಂದೆ ವಧುವೊಬ್ಬಳು ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದಂತೆ ಡಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಿಡಿಯೋ ವೈರಲ್ ಆಗಿತ್ತು.
ಮದ್ವೆ ಮಂಟಪಕ್ಕೆ ಟ್ರಾಕ್ಟರ್ ಡ್ರೈವ್ ಮಾಡ್ತಾ ಬಂದ ವಧು: ಸಹೋದರರ ಸಾಥ್