ದೇಶದ 32 FASTagಗೆ ಮಾತ್ರ ಅಧಿಕೃತ ಮಾನ್ಯತೆ, ಲಿಸ್ಟ್‌ನಲ್ಲಿ ನಿಮ್ಮ ಬ್ಯಾಂಕ್ ಇಲ್ಲದಿದ್ರೆ ಬದಲಾಯಿಸಿ!

By Suvarna News  |  First Published Feb 21, 2024, 5:30 PM IST

ಟೋಲ್ ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಹೊಸ ಫಾಸ್ಟ್ಯಾಗ್ ಖರೀದಿ, ಅಳವಡಿಕೆ ಅತೀ ಸುಲಭ. ಆದರೆ ಫಾಸ್ಟ್ಯಾಗ್ ಖರೀದಿ ವೇಳೆ ಎಚ್ಚರವಹಿಸಬೇಕು. ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಧಿಕೃತ ನೊಂದಾಯಿತ ಬ್ಯಾಂಕ್‌ಗಳ ಫಾಸ್ಟ್ಯಾಗ್ ಮಾತ್ರ ಬಳಕೆ ಮಾಡಲು ಸೂಚಿಸಿದೆ. ಇದಕ್ಕಾಗಿ 32 ಬ್ಯಾಂಕ್‌ಗಳ ಫಾಸ್ಟ್ಯಾಗ್ ಅಧಿಕೃತ ಎಂದು NHAI ಘೋಷಿಸಿದೆ. ಈ ಪಟ್ಟಿಯಲ್ಲಿ ನಿಮ್ಮ ವಾಹನದ ಫಾಸ್ಟ್ಯಾಗ್ ಇಲ್ಲದಿದ್ದರೆ ಈಗಲೇ ಬದಲಾಯಿಸಿಕೊಳ್ಳಿ.


ನವದೆಹಲಿ(ಫೆ.21) ಟೋಲ್ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಕಡ್ಡಾಯ. ಇಲ್ಲದಿದ್ದರೆ ದುಪ್ಪಟ್ಟ ಮೊತ್ತ ಪಾವತಿಸಬೇಕು. ಫಾಸ್ಟ್ಯಾಗ್ ಇಲ್ಲ ಎಂದು ಕೈಗೆಸಿಕ್ಕಿದ ಅನದಿಕೃತ ಫಾಸ್ಟ್ಯಾಗ್ ಖರೀದಿಸಿ ಬಳಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಂದಾಯಿತ ಬ್ಯಾಂಕ್‌ಗಳ ಅಧಿಕೃತ ಫಾಸ್ಟ್ಯಾಗ್ ಪಟ್ಟಿ ಬಿಡುಡೆ ಮಾಡಿದೆ. ಭಾರತದಲ್ಲಿ ಒಟ್ಟು 32 ಬ್ಯಾಂಕ್‌ಗಳ ಫಾಸ್ಟ್ಯಾಗ್‌ಗೆ ಮಾತ್ರ ಸರ್ಕಾರದ ಮಾನ್ಯತೆ ಇದೆ. ಈ ಪಟ್ಟಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಲ್ಲದೆ ಇರುವ ಬ್ಯಾಂಕ್‌ಗಳ ಫಾಸ್ಟ್ಯಾಗ್ ಬಳಸುತ್ತಿದ್ದರೆ, ಮಾರ್ಚ್ 15ರ ಬಳಿಕ ಕಾರ್ಯನಿರ್ವಹಿಸುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪೇಟಿಎಂ ಪೇಮೆಂಟ್‌ ಬ್ಯಾಂಕ್‌  ಫಾಸ್ಟ್ಯಾಗ್‌ನ್ನು ತೆಗೆದುಹಾಕಿದೆ. ದೇಶದಲ್ಲಿನ ಎಲ್ಲಾ ಟೋಲ್‌ಗಳ ಶುಲ್ಕ ನಿರ್ವಹಣೆಯ ಹೊಣೆ ಹೊತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಗಸಂಸ್ಥೆಯಾದ ಇಂಡಿಯನ್‌ ಹೈವೇಸ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ. (ಐಎಚ್‌ಎಂಸಿಎಲ್‌) ಇತ್ತೀಚೆಗೆ ಈ ಪಟ್ಟಿ ಬಿಡುಗಡೆ ಮಾಡಿದೆ. 

Tap to resize

Latest Videos

undefined

ಪೇಟಿಎಂ FAStag ಮಾನ್ಯವಲ್ಲ, ಬ್ಯಾಂಕ್ ಪಟ್ಟಿಯಿಂದ PBBL ತೆಗೆದು ಹಾಕಿದ ಹೆದ್ದಾರಿ ಪ್ರಾಧಿಕಾರ!

ಏರ್ಟೆಲ್ ಪಾವತಿ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, AU ಸಣ್ಣ ಹಣಕಾಸು ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಕಾಸ್ಮಾಸ್ ಬ್ಯಾಂಕ್, ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್, ಫೆಡರಲ್ ಬ್ಯಾಂಕ್, FINO ಪಾವತಿಗಳ ಬ್ಯಾಂಕ್, HDFC ಬ್ಯಾಂಕ್, ಐಸಿಐಸಿಐ ಬ್ಯಾಂಕ್, IDBI ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಜೆ & ಕೆ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ನಾಗ್ಪುರ್ ನಾಗರಿಕ್ ಸಹಕಾರಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತ್ರಿಶೂರ್ ಜಿಲ್ಲಾ ಸಹಕಾರಿ ಬ್ಯಾಂಕ್, UCO ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯೆಸ್ ಬ್ಯಾಂಕ್ ನೀಡುವ ಫಾಸ್ಟ್ಯಾಗ್ ಅಧಿಕೃತ ಎಂದು ಪ್ರಾಧಿಕಾರ ಹೇಳಿದೆ.

ಫಾಸ್ಟ್ಯಾಗ್‌ ವಿತರಿಸುವ ಬ್ಯಾಂಕ್‌ಗಳ ಪಟ್ಟಿಯಿಂದ‘ಪೇಟಿಎಂ ಪೇಮೆಂಟ್‌ ಬ್ಯಾಂಕ್‌’ ಅನ್ನು ಕೈಬಿಡಲಾಗಿದೆ.ಕೆವೈಸಿ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಫೆ.29ರಿಂದ ವಿವಿಧ ಸೇವೆಗಳನ್ನು ರದ್ದುಪಡಿಸುವಂತೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಆರ್‌ಬಿಐ ಇತ್ತೀಚೆಗೆ ಸೂಚಿಸಿತ್ತು. ಜೊತೆಗೆ ನಿಯಮಬಾಹಿರವಾಗಿ ಆರಂಭಿಸಲಾದ ಕೆಲ ಬ್ಯಾಂಕ್‌ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರಬಹುದೆಂಬ ಶಂಕೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡಾ ಬ್ಯಾಂಕ್‌ ವಿರುದ್ಧ ತನಿಖೆ ಆರಂಭಿಸಿದೆ.

ಪೇಟಿಎಂ FASTag ಗ್ರಾಹಕರಿಗೂ ಸಂಕಷ್ಟ, ಫೆ.29ರ ಬಳಿಕ ದಂಡ ತಪ್ಪಿಸಲು ಹೀಗೆ ಮಾಡಿ!

click me!