ಮಹೀಂದ್ರ ಬೊಲೆರೊ ಮ್ಯಾಕ್ಸ್ ಪಿಕ್‌ಅಪ್ ವಾಹನದ ಹೊಸ ವೇರಿಯೆಂಟ್ ಅನಾವರಣ ಮಾಡಲಾಗಿದೆ. ಹೊಚ್ಚ ಹೊಸ ವಾಹನದಲ್ಲಿ ಎಸಿ ಸೇರಿದಂತೆ 14 ಫೀಚರ್ಸ್ ಹೆಚ್ಚುವರಿ ಸೇರ್ಪಡೆ ಮಾಡಲಾಗಿದೆ. ನೂತನ ವಾಹನದ ವಿಶೇಷತೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ(ಫೆ.19) ಭಾರತದಲ್ಲಿ ಪಿಕ್ ಅಪ್ ವಾಹನಗಳಲ್ಲಿ ಇದೀಗ ಹೊಸ ಹೊಸ ಫೀಚರ್ಸ್ ಸೇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಮಹತ್ವ ಹೆಜ್ಜೆ ಇಟ್ಟಿದೆ. ಮಹೀಂದ್ರ ಇದೀಗ ಹೊಚ್ಚ ಹೊಸ ಬೊಲೆರೊ ಮ್ಯಾಕ್ಸ್‌ಪಿಕ್ ವಾಹನದ ಹೊಸ ವೇರಿಯೆಂಟ್ ಅನಾವರಣ ಮಾಡಿದೆ. ಈ ಪಿಕ್‌ಅಪ್ ವಾಹನದಲ್ಲಿ ಎಸಿ ಕ್ಯಾಬಿನ್ ನೀಡಲಾಗಿದೆ. ಇದರ ಜೊತೆಗೆ ಒಟ್ಟು 14 ಹೆಚ್ಚುವರಿ ಫೀಚರ್ಸ್ ನೀಡಲಾಗಿದೆ.
ಬೊಲೆರೊ ಮ್ಯಾಕ್ಸ್‌ಪಿಕ್-ಅಪ್ ಶ್ರೇಣಿಯು ಅದರ ಸೂಕ್ತವಾದ ಗಾತ್ರ ಮತ್ತು ಬಹುಮುಖ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಪೇಲೋಡ್ ಸಾಮರ್ಥ್ಯ, ಇಂಧನ ದಕ್ಷತೆ, ಸುರಕ್ಷತೆ ಮತ್ತು ಒಟ್ಟಾರೆ ಚಾಲನಾ ಅನುಭವದಲ್ಲಿ ಗ್ರಾಹಕರಿಗೆ ಅಭೂತಪೂರ್ವ ಸೌಕರ್ಯಗಳನ್ನು ಒದಗಿಸುತ್ತದೆ. ಈಗಾಗಲೇ 1.4 ಲಕ್ಷ ಬೊಲೆರೊ ಪಿಕ್‌ಅಪ್ ಮಾರಾಟವಾಗಿದೆ. ದಾಖಲೆ ಸಮಯದಲ್ಲಿ 1 ಲಕ್ಷ ಯುನಿಟ್ ಉತ್ಪಾದನೆ ಮಾಡಿದ ಸಾಧೆ ಮಾಡಿದೆ. ವಾಣಿಜ್ಯ ಲೋಡ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ವಿತರಣೆಯ ದಾಖಲೆ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮನ್ನಣೆಯನ್ನು ಗಳಿಸಿದೆ.
ಟೆಸ್ಟ್‌ಗೆ ಡೆಬ್ಯೂ ಮಾಡಿದ ಸರ್ಫರಾಜ್ ಖಾನ್ ತಂದೆಗೆ ಥಾರ್ ಗಿಫ್ಟ್ ಘೋಷಿಸಿದ ಆನಂದ್ ಮಹೀಂದ್ರ!
ಕಾರ್ಯಕ್ಷಮತೆ ಹಾಗೂ ವಿನ್ಯಾಸ
ಬೊಲೆರೊ ಮ್ಯಾಕ್ಸ್‌ಪಿಕ್-ಅಪ್ ಶ್ರೇಣಿಯು, ಮಹೀಂದ್ರಾದ ಸುಧಾರಿತ ಎಂ2ಡಿಐ ಎಂಜಿನ್ ಡೀಸೆಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೆ ಬರುತ್ತಿದ್ದು, 52.2ಕೆಡಬ್ಲ್ಯೂ/200ಎನ್‌ಎಂ ನಿಂದ 59.7 ಕೆಡಬ್ಲ್ಯೂ /220 ಎನ್‌ಎಂವರೆಗಿನ ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.3 ಟನ್ ನಿಂದ 2 ಟನ್ ವರೆಗಿನ ಅದರ ಪೇಲೋಡ್ ಸಾಮರ್ಥ್ಯ ಮತ್ತು 3050 ಎಂಎಂ ವರೆಗಿನ ಕಾರ್ಗೋ ಬೆಡ್ ಉದ್ದ ಇರುವ ಈ ವಾಹನ ಸರಕುಗಳನ್ನು ಸಾಗಿಸಲು ಸೂಕ್ತವಾಗಿದೆ. ಸಿಎಂವಿಆರ್-ಪ್ರಮಾಣೀಕೃತ ಡಿ+2 ಸೀಟ್ ಗಳು, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ಗಳು, ಟರ್ನ್ ಸೇಫ್ ಲ್ಯಾಂಪ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಇಂಟೀರಿಯರ್ ಗಳು ಮತ್ತು ನಗರ ಮತ್ತು ಹೆದ್ದಾರಿ ಎರಡಕ್ಕೂ ಸೂಕ್ತವಾದ ಹೊರಭಾಗಗಳಂತಹ ಫೀಚರ್ ಗಳನ್ನು ಹೊಂದಿರುವ ಬೊಲೆರೊ ಮ್ಯಾಕ್ಸ್‌ಪಿಕ್-ಅಪ್ ಶ್ರೇಣಿಯು ಸೌಕರ್ಯ ಮತ್ತು ಕೆಲಸದ ಸಾಮರ್ಥ್ಯ ಎರಡಕ್ಕೂ ಆದ್ಯತೆ ನೀಡಿದೆ. ಹೀಟರ್ ಮತ್ತು ಡಿಮಿಸ್ಟರ್‌ನೊಂದಿಗೆ ಸಂಯೋಜಿತ ಹವಾನಿಯಂತ್ರಣವನ್ನು ಒದಗಿಸಿರುವುದರಿಂದ ಡ್ರೈವಿಂಗ್ ಅನುಭವವನ್ನು ಇನ್ನಷ್ಟು ಅಪೂರ್ವಗೊಳಿಸಲಾಗಿದೆ. ಏಸಿ ಮೂಲಕ, ನಗರದ ಟ್ರಾಫಿಕ್ ನಲ್ಲಿ ಚಲಿಸುವುದು ಅಥವಾ ಹೆದ್ದಾರಿಗಳಲ್ಲಿ ಪ್ರಯಾಣಿಸುವುದು ಖುಷಿದಾಯಕ ವಿಚಾರವಾಗಿದೆ. ಬೊಲೆರೊ ಮ್ಯಾಕ್ಸ್‌ಪಿಕ್-ಅಪ್ ಶ್ರೇಣಿಯು ಹೆಚ್ಚಿನ ಸೌಕರ್ಯವನ್ನು ಬಯಸುವ ಗ್ರಾಹಕರಿಗೆ ಸೂಕ್ತವಾದ ಆಯ್ಕೆಯಾಗಿದೆ.
ವೈಶಿಷ್ಟ್ಯಗಳು &ಐಮ್ಯಾಕ್ಸ್
ವಾಹನ ನಿರ್ವಹಣಾ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು, ಇತ್ತೀಚಿನ ಐಮ್ಯಾಕ್ಸ್‌ಅಪ್‌ಡೇಟ್ 14 ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಪ್ರಮುಖ ಪ್ರಗತಿಗಳನ್ನು ಉದ್ದೇಶಿತ ವರ್ಗಕ್ಕೆ ತಲುಪಿಸುವ ಜಿಯೋಫೆನ್ಸ್ ಆಧಾರಿತ ಅಭಿಯಾನ ಮತ್ತು ಸುವ್ಯವಸ್ಥಿತ ಕಾರ್ಯಾಚರಣೆಗಳಿಗಾಗಿ ಡ್ರೈವರ್ ಕಮ್ ಓನರ್ ಫೀಚರ್ ಅನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಮೈ ಮ್ಯಾಕ್ಸ್ ಸ್ಕೋರ್ ಡ್ರೈವರ್‌ಗಳಿಗೆ ಮೌಲ್ಯಯುತವಾದ ಕಾರ್ಯಕ್ಷಮತೆಯ ಒಳನೋಟಗಳನ್ನು ನೀಡುತ್ತದೆ, ಫ್ಲೀಟ್ ಮ್ಯಾನೇಜರ್‌ಗಳು ಕೆಲವು ಶ್ರದ್ಧಾವಂತ ಚಾಲಕರಿಗೆ ಹೆಚ್ಚಿನ ಗಮನ ನೀಡುತ್ತಾರೆ.
500 ಕಿ.ಮೀ ಮೈಲೇಜ್, 6.61 ಲಕ್ಷ ರೂ ಬೆಲೆಯ ಮಹೀಂದ್ರ ಸುಪ್ರೋ ಪ್ರಾಫಿಟ್ ಟ್ರಕ್ ಲಾಂಚ್!
ಇದಲ್ಲದೆ, ಸಿಸ್ಟಂನ ಹೊಸ ಅಲರ್ಟ್ ಗಳು ವಾಹನ ಸುರಕ್ಷತೆ ಮತ್ತು ದಕ್ಷತೆ ಎರಡಕ್ಕೂ ಆದ್ಯತೆ ನೀಡುತ್ತವೆ. ಆಕ್ರಮಣಕಾರಿ ಆಕ್ಸಲರೇಷನ್, ಅಪೂರ್ಣ ಬ್ರೇಕಿಂಗ್, ಶಾರ್ಪ್ ಕಾರ್ನರಿಂಗ್ ಮತ್ತು ಇಂಧನ ಕಳ್ಳತನ ಪತ್ತೆಗೆ ಅಲರ್ಟ್ ಗಳನ್ನು ನೀಡಲಾಗುತ್ತದೆ. ಈ ವೈಶಿಷ್ಟ್ಯಗಳು ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಟ್ಟಾರೆ ದಕ್ಷತೆಯನ್ನು ಸುಧಾರಿಸಲು ಸಹ ಕೊಡುಗೆ ನೀಡುತ್ತವೆ. ಇದಲ್ಲದೆ, ಐಮ್ಯಾಕ್ಸ್ ವೈಶಿಷ್ಟ್ಯವು ಮಾರುಕಟ್ಟೆಯಲ್ಲಿ ಗಮನಾರ್ಹ ಪ್ರಭಾವವನ್ನು ಬೀರಿದ್ದು, ಈಗಾಗಲೇ 30000 ಐಮ್ಯಾಕ್ಸ್ ವಾಹನಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ. ಫಾಸ್ಟ್ಯಾಗ್ ಇಂಟಿಗ್ರೇಷ್ ಮತ್ತು ವೆಚ್ಚ ನಿರ್ವಹಣೆಯಂತಹ ನಿರಂತರ ಅಪ್‌ಡೇಟ್‌ಗಳು, ಬಳಕೆದಾರ ಬಳಕೆ ಹೆಚ್ಚಳ ಮತ್ತು ದೀರ್ಘಾವಧಿಯ ಅಪ್ಲಿಕೇಶನ್ ಬಳಕೆಯನ್ನು ಸೂಚಿಸುತ್ತವೆ.