HSRP ನಂಬರ್ ಪ್ಲೇಟ್ ಬುಕಿಂಗ್ ವೇಳೆ ಮೋಸಹೋಗಬೇಡಿ, ಕರ್ನಾಟಕದಲ್ಲಿ QR ಹಗರಣ ಬೆಳಕಿಗೆ!

Published : Feb 17, 2024, 10:41 AM IST
HSRP ನಂಬರ್ ಪ್ಲೇಟ್ ಬುಕಿಂಗ್ ವೇಳೆ ಮೋಸಹೋಗಬೇಡಿ, ಕರ್ನಾಟಕದಲ್ಲಿ QR ಹಗರಣ ಬೆಳಕಿಗೆ!

ಸಾರಾಂಶ

ನೀವು HSRP ನಂಬಪ್ ಪ್ಲೇಟ್ ಬುಕ್ ಮಾಡಿಲ್ಲವೇ? ಹಾಗಾದರೆ ತಕ್ಷಣ ಬುಕ್ ಮಾಡಿ ಕಾರಣ, ಮತ್ತೆ ಅವಧಿ ವಿಸ್ತರಣೆ ಸಾಧ್ಯತೆ ಇಲ್ಲ. ಆದರೆ ತರಾತುರಿಯಲ್ಲಿ ಬುಕ್ ಮಾಡಿ ಮೋಸಹೋಗಬೇಡಿ. ಕಾರಣ ಅನಧಿಕೃತ ಪೋರ್ಟಲ್‌ಗಳು ಕ್ಯೂರ್ ಕೋಡ್ ಮೂಲಕ ಹಣ ದೋಚುತ್ತಿದ್ದಾರೆ. ಇದರ ಜೊತೆಗೆ ಖಾತೆಯಲ್ಲಿನ ಹಣವನ್ನೂ ಎಗರಿಸುತ್ತಿದ್ದಾರೆ. ಹೀಗಾಗಿ ಈ ಮೋಸದಿಂದ ಎಚ್ಚರವಾಗಿರಿ.  

ಬೆಂಗಳೂರು(ಫೆ.17) ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಕಡ್ಡಾಯ ದಿನಾಂಕ 3 ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಇದೀಗ ವಾಹನ ಮಾಲೀಕರು ತರಾತುರಿಯಲ್ಲಿ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಬುಕಿಂಗ್ ಮಾಡುತ್ತಿದ್ದಾರೆ. ಆದರೆ ಹೀಗೆ HSRP ಬುಕಿಂಗ್ ಮಾಡುವಾಗ ಮೋಸಹೋಗಬೇಡಿ. ಕಾರಣ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಂದಿ ಒಂಂದೆ ಸಮನೆ HSRP ನಂಬರ್ ಪ್ಲೇಟ್ ಬುಕಿಂಗ್ ಮಾಡುತ್ತಿರುವ ಕಾರಣ ಅಧಿಕೃತ ಪೋರ್ಟಲ್‌ಗಳು ಕೆಲವೊಮ್ಮೆ ಲಭ್ಯವಾಗುತ್ತಿಲ್ಲ. ಇದೇ ವೇಳೆ ಬುಕ್ ಮೈ ಹೆಚ್‌ಎಸ್‌ಆರ್‌ಪಿ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡಿರುವ ಕೆಲ ಅನಧಿಕೃತ ಪೋರ್ಟಲ್‌ಗಳು ಅನಧಿಕೃತ ಕ್ಯೂರ್ ಕೋಡ್ ನೀಡುತ್ತಿದೆ. ಇದರಲ್ಲಿ ಕೇವಲ ಪಾವತಿ ಮಾಡಿದ ಹಣ ಮಾತ್ರವಲ್ಲ, ಖಾತೆಯಲ್ಲಿದ್ದ ಹಣವೂ ಖಾಲಿಯಾಗುವ ಸಾಧ್ಯತೆ ಇದೆ ಎಚ್ಚರ.

ಬೆಂಗಳೂರು ನಿವಾಸಿಯೊಬ್ಬರು ಹೀಗೆ ಹಣ ಕಳೆದುಕೊಂಡಿದ್ದಾರೆ. ತಮಗಾಗಿರುವ ಮೋಸದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ರಕ್ಷಿತ್ ಪಾಂಡೆ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ಮೋಸದ ಕುರಿತು ಮಾಹಿತಿ ನೀಡಿದ್ದಾರೆ. ರಕ್ಷಿತ್ ಪಾಂಡೆ HSRP ನಂಬರ್ ಪ್ಲೇಟ್ ಆನ್‌ಲೈನ್ ಮೂಲಕ ಬುಕಿಂಗ್ ಮಾಡಲು ಬುಕಿಂಗ್ ಪೋರ್ಟಲ್ ಕ್ಲಿಕ್ ಮಾಡಿದ್ದಾರೆ. ಆದರೆ ಈ ಲಿಂಕ್ ತೆರೆದುಕೊಂಡಿಲ್ಲ. ಇದೇ ವೇಳೆ ಕ್ಯೂಆರ್ ಕೋಡ್ ಮೂಲಕ ಮತ್ತೊಂದು ಲಿಂಕ್ ಒಪನ್ ಆಗಿದೆ. ಇಲ್ಲಿ ಅಗತ್ಯ ಮಾಹಿತಿ ತುಂಬಿ ಪಾವತಿಗೆ ಕ್ಯೂರ್ ಕೋಡ್ ತೋರಿಸಿದೆ. ಇದೇ ವೇಳೆ ಕ್ಯೂರ್ ಮೂಲಕ ಪಾವತಿಗೆ ಪ್ರಯತ್ನಿಸಿದಾಗ, ಮೊಹಮ್ಮದ್ ಆಸೀಫ್ ಎಂದು ತೋರಿಸುತ್ತಿದೆ. ಹೀಗಾಗಿ ಅನುಮಾನಗೊಂಡ ರಕ್ಷಿತ ಪಾಂಡೆ ಪಾವತಿ ಮಾಡಿಲ್ಲ. ಕೂಲಂಕುಷವಾಗಿ ಪರಿಶೀಲಿಸಿದಾಗ ಇದು ಕ್ಯೂರ್ ಕೋಡ್ ಸ್ಕ್ಯಾಮ್ ಅನ್ನೋದು ಪತ್ತೆಯಾಗಿದೆ. ಸಾರ್ವಜನಿಕರು ಯಾರೂ ಮೋಸಹೋಗಬೇಡಿ ಎಂದು ರಕ್ಷಿತ್ ಪಾಂಡೆ ಸೂಚನೆ ನೀಡಿದ್ದಾರೆ.

 ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

ಬೆಂಗಳೂರು ಸೈಬರ್ ಪೊಲೀಸರು ಈ ಕುರಿತು ಅಲರ್ಟ್ ಆಗಿದ್ದಾರೆ. ವಾಹನ ಮಾಲೀಕರು ಹೆಸ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ವೇಳೆ ಮೋಸಹೋಗದಂತೆ ತಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ. ಅಧಿಕೃತ ಪೋರ್ಟಲ್ ಮೂಲಕವೇ ಬುಕಿಂಗ್ ಮಾಡಲು ಮನವಿ ಮಾಡಿದ್ದಾರೆ. HSRP ನಂಬರ್ ಪ್ಲೇಟ್ ಆನ್‌ಲೈನ್ ಬುಕಿಂಗ್ ಮಾಡಲು ಅಧಿಕೃತ ಪೋರ್ಟಲ್ ಬಿಟ್ಟು ಇನ್ಯಾವ ಪೋರ್ಟಲ್ ಕೂಡ ಕ್ಲಿಕ್ ಮಾಡಬೇಡಿ. ಏಕಕಾಲಕ್ಕೆ ಹಲವರು ನಂಬರ್ ಪ್ಲೇಟ್ ಬುಕಿಂಗ್ ಮಾಡುವ ಕಾರಣ ಸರ್ವರ್ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಆದರೆ ತಾಳ್ಮೆಯಿಂದ ಕೆಲ ಹೊತ್ತಿನ ಬಳಿಕ ಪ್ರಯತ್ನಿಸಿ ಬುಕಿಂಗ್ ಮಾಡಿಕೊಳ್ಳಿ.

 

 

ಫೆಬ್ರವರಿ 17, 2024 ಕರ್ನಾಟಕದಲ್ಲಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನವಾಗಿತ್ತು. ಆದರೆ ಬಹುತೇಕ ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಕೆ ಮಾಡದ ಕಾರಣ ಸರ್ಕಾರ ಮತ್ತೆ 3 ತಿಂಗಳಿಗೆ ಅವಧಿ ವಿಸ್ತರಿಸಿದೆ. ಆದರೆ ಇದು ಕೊನೆಯ ವಿಸ್ತರಣೆ ಎಂದು ಸರ್ಕಾರ ಹೇಳಿದೆ. ಈ 3 ತಿಂಗಳಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕಿಂಗ್ ಮಾಡಿ ಅಳವಡಿಸಿಕೊಳ್ಳಿ. ಅಂತಿಮ ಹಂತದಲ್ಲಿ ಬುಕಿಂಗ್, ಅಳವಡಿಕೆಯಿಂದ ವಿಳಂಬವಾಗಲಿದೆ. ಹೀಗಾಗಿ ಆದಷ್ಟು ಬೇಗ ನಂಬರ್ ಪ್ಲೇಟ್ ಬುಕಿಂಗ್ ಮಾಡಿಕೊಳ್ಳಿ, ದಂಡದಿಂದ ಪಾರಾಗಿ ಎಂದು ಸರ್ಕಾರ ಎಚ್ಚರಿಸಿದೆ.

ಹೈಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಹಾಕಿಸಲು ಮಾಲೀಕರ ನಿರಾಸಕ್ತಿ: ಕಾರಣವೇನು?
 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು