ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳ ಪೈಕಿ ಒಂದಾಗಿರುವ ಇಂಡಿಗೋ ಇದೀಗ ಆಂಧ್ರಪ್ರದೇಶದ ಮೂರು ರಾಜಧಾನಿಗಳಲ್ಲಿ ಒಂದಾಗಲಿರುವ ಕರ್ನೂಲ್‌ನಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೇವೆ ಆರಂಭಿಸಲಿದೆ. ಉಡಾನ್ ಯೋಜನೆಯಡಿ ಈ ಸೇವೆಯನ್ನು ಒದಗಿಸುತ್ತದೆ. ಕರ್ನೂಲ್‌ನಿಂದ ವಿಶಾಖಪಟ್ಟಣ ಮತ್ತು ಚೆನ್ನೈಗೂ ಸೇವೆ ದೊರೆಯಲಿದೆ.
ಬೆಂಗಳೂರು(ಫೆ. 01) ಉಡಾನ್ ಸ್ಕೀಮ್‌ನಡಿ ಇಂಡಿಗೋ ವಿಮಾನಯಾನ ಸಂಸ್ಥೆಯು ಆಂಧ್ರದ ಕರ್ನೂಲ್, ಬೆಂಗಳೂರು, ವಿಶಾಖಪಟ್ಟಣ ಮತ್ತು ಚೆನ್ನೈ ಮಧ್ಯೆ ನೇರ ವಿಮಾನ ಸಂಚಾರವನ್ನು ಮಾರ್ಚ್ 28ರಿಂದ ಆರಂಭಿಸಲಿದೆ.
ಪ್ರಾದೇಶಿಕವಾಗಿ ವಿಮಾನ ಸಂಚಾರವನ್ನು ಹೆಚ್ಚಿಸುವ ಮೂಲಕ ಜನರಿಗೆ ನೆರವು ಒದಗಿಸುವ ಉದ್ದೇಶವನ್ನು ಉಡಾನ್ ಯೋಜನೆ ಹೊಂದಿದೆ. ಈ ಮೂಲಕ ಪಟ್ಟಣ ಮತ್ತು ನಗರಗಳ ಮಧ್ಯೆ ವಿಮಾನ ಸಂಚಾರ ಹೆಚ್ಚಿಸುವುದು ಸರಕಾರದ ಉದ್ದೇಶವಾಗಿದೆ. ಹೀಗಾಗಿಯೇ ಎರಡನೇ ಸ್ತರದ ನಗರಗಳಿಗೂ ಉಡಾನ್ ಯೋಜನೆಯಡಿ ಅನೇಕ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆಯನ್ನು ಆರಂಭಿಸಿವೆ. ಇದರ ಭಾಗವಾಗಿಯೇ ಇದೀಗ ಕರ್ನೂಲ್‌ನಿಂದ ಬೆಂಗಳೂರು, ವಿಶಾಪಟ್ಟಣ, ಚೆನ್ನೈ ಮಧ್ಯೆ ಇಂಡಿಗೋ ತನ್ನ ವಿಮಾನಯಾನ ಸೇವೆ ಆರಂಭಿಸುತ್ತಿದೆ.
undefined
ಮಹೀಂದ್ರಾ XUV300 ಸೇಫ್ಟಿ ರೇಟಿಂಗ್: 5 ಸ್ಟಾರ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಕಾರು
ಈ ಬಗ್ಗೆ ಇಂಡಿಗೋ ವಿಮಾನಯಾನ ಸಂಸ್ಥೆಯು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವಿಷಯವನ್ನು ತಿಳಿಸಿದೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಸ್ಟ್ರಾಟರ್ಜಿಕಲ್ ಮಹತ್ವದ್ದಾಗಿದೆ. ಆಂಧ್ರಪ್ರದೇಶದ ಮೂರು ರಾಜಧಾನಿಗಳ ಪೈಕಿ ಕರ್ನೂಲ್ ಕೂಡ ಒಂದಾಗಿದ್ದು, ಮುಂಬರುವ ಹೈದ್ರಾಬಾದ್-ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ವಿಮಾನ ಸಂಚಾರ ಅಗತ್ಯವಾಗಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಚೀಫ್ ಸ್ಟ್ರ್ಯಾಟರ್ಜಿ ಮತ್ತು ರೆವಿನ್ಯೂ ಆಫೀಸರ್ ಸಂಜಯಕುಮಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರದಿಂದ ಕರ್ನೂಲ್, ವಿಶಾಖಪಟ್ಟಣದಿಂದ ಕರ್ನೂಲ್ ಮತ್ತು ಚೆನ್ನೈಯಿಂದ ಕರ್ನೂಲ್ ಮಾರ್ಗ ಮಧ್ಯೆ ಇಂಡಿಗೋ ತನ್ನ ವಿಮಾನ ಸಂಚಾರ ಸೇವೆಯನ್ನು ವಾರಕ್ಕೆ ನಾಲ್ಕು ದಿನ ಒದಗಿಸಲಿದೆ. ಈ ವಿಮಾನಯಾನ ಸೇವೆಯನ್ನು ಇಂಡಿಗೋ ಪ್ರಾದೇಶಿಕ ಸಂಪರ್ಕ ಯೋಜನೆಯ ಭಾಗವಾಗಿ ನೀಡುತ್ತಿದೆ ಎಂದು ಕಂಪನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉಡಾನ್ ಯೋಜನೆಯಡಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಏರ್‌ಪೋರ್ಟ್ ಆಪರೇಟರ್ಸ್ ಆಯ್ದ ವಿಮಾನಯಾನ ಸಂಸ್ಥೆಗಳಿಗೆ ಹಣಕಾಸಿನ ನೆರವು ಮತ್ತು ಪ್ರೋತ್ಸಾಹವನ್ನು ನೀಡುತ್ತವೆ. ಆ ಮೂಲಕ ವಿಮಾನಯಾನ ಸೇವೆ ಲಭ್ಯವಿಲ್ಲದ ಮತ್ತು ಕಡಿಮೆ ವಿಮಾನ ನಿಲ್ದಾಣಗಳಿಂದ ಕೂಡಿರುವ ಪ್ರದೇಶದಲ್ಲಿ ಜನರಿಗೆ ವಿಮಾನಯಾನ ದರ ಕೈಗೆಟುಕುವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಅಂದರೆ, ಎರಡನೇ ಸ್ತರದ ನಗರಗಳಿಗೂ ವಿಮಾನಯಾನ ಸೇವೆಯನ್ನು ಕಲ್ಪಿಸುವ ಮೂಲಕ ಪ್ರಾದೇಶಿಕ ವಿಮಾನಯಾನ ಸಂಚಾರವನ್ನು ಹೆಚ್ಚಿಸುವುದು ಆ ಮೂಲಕ ಪ್ರತಿಯೊಬ್ಬರು ವಿಮಾಯಾನ ಸೇವೆಯನ್ನು ಪಡೆಯುವ ಮಹತ್ವಾಕಾಂಕ್ಷೆಯನ್ನು ಈ ಉಡಾನ್ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ತೀರಾ ಏರ್ ಟ್ರಾಫಿಕ್ ಇಲ್ಲದ ನಗರಗಳಿಗೂ ವಿಮಾನಯಾನ ಸೇವೆಯನ್ನು ಒದಗಿಸಲಾಗುತ್ತದೆ ಮತ್ತು ಇದಕ್ಕೆ ಹಣಕಾಸಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.
ಇಂಡಿಯಾ ಟು ಸಿಂಗಾಪುರ ಬಸ್, ವಯಾ ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷ್ಯಾ!
ಈ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ಆರಂಭಿಸಿದ್ದರ ಫಲವಾಗಿ ಚಿಕ್ಕ ಚಿಕ್ಕನಗರಗಳಿಂದ ದೊಡ್ಡ ದೊಡ್ಡ ನಗರಗಳಿಗೆ ಏರ್ ಕನೆಕ್ಟಿವಿಟಿ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಸಣ್ಣ ವ್ಯಾಪಾರಸ್ಥರು, ಬಿಸಿನೆಸ್‌ಮನ್‌ಗಳು ಮತ್ತು ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಲು ಕಾರಣವಾಗಿದೆ.
ಆಂಧ್ರಪ್ರದೇಶದ ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲ್ ಗುರುತಿಸಿಕೊಳ್ಳುತ್ತಿದೆ. ಈ ನಗರದಿಂದ ದೇಶದ ಇತರೆ ನಗರಗಳಿಗೆ ವಿಮಾನಯಾನ ಸೇವೆಯನ್ನು ಹೆಚ್ಚಿಸುವುದರಿಂದ ಪ್ರವಾಸಿಗರಿಗೆ ಮಾತ್ರವಲ್ಲದೇ ಸರ್ಕಾರಿ ಅಧಿಕಾರಿಗಳಿಗೂ ಪ್ರಯಾಣಿಸಲು ನೆರವಾಗಲಿದೆ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆಯನ್ನು ಆರಂಭಿಸಲಾಗುತ್ತಿದೆ. ಪ್ರಾದೇಶಿಕ ವಿಮಾನಯಾನ ಸೇವೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಆರ್ಥಿಕ, ವ್ಯಾಪಾರ ಚಟುವಟಿಕೆಗಳ ಹೆಚ್ಚಲು ಈ ವಿಮಾನಯಾನ ಸೇವೆಯಿಂದ ಸಾಧ್ಯವಾಗಲಿದೆ. ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಬೀದರ್‌ನಿಂದ ಬೆಂಗಳೂರಿಗೆ ನೇರವಾಗಿ ವಿಮಾನಯಾನ ಸೇವೆ ದೊರೆತರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತೆರಳಲು ಬಹಳಷ್ಟು ಮಂದಿಗೆ ನೆರವು ದೊರೆಯುತ್ತದೆ. ಇದು ಪ್ರಾದೇಶಿಕ ವಿಮಾನಸೇವೆಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೇ ಹಲವು ರೀತಿಯಲ್ಲಿ ಲಾಭವನ್ನ ತಂದುಕೊಡುತ್ತದೆ. ಉಡಾನ್ ಯೋಜನೆಯ ಉದ್ದೇಶವೂ ಇದೇ ಆಗಿದೆ.
8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್