ಕೇಂದ್ರ ಬಜೆಟ್ 2021: ಹಳೆ ವಾಹನ ಗುಜುರಿ ನೀತಿ ಕುರಿತು ಮಹತ್ವದ ಘೋಷಣೆ!

By Suvarna News  |  First Published Feb 1, 2021, 1:06 PM IST

2019ರಲ್ಲಿ ಭಾರಿ ಸದ್ದು ಮಾಡುತ್ತಿರುವ ಹಳೆ ವಾಹನಗಳನ್ನು ಗುಜುರಿಗೆ ನೀಡುವ ನೀತಿ(ವೆಹಿಕಲ್ ಸ್ಕ್ರಾಪ್ ಪಾಲಿಸಿ) ಕುರಿತು ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. 
 


ನವದೆಹಲಿ(ಫೆ,01): ಕೊರೋನಾ ಬಿಕ್ಕಟ್ಟಿನ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಹಲವು ವಿಶೇಷತೆಗಳಿಗೂ ಸಾಕ್ಷಿಯಾಗಿದೆ. ಇನ್ನು ಆರ್ಥಿಕ ಸಂಕಷ್ಟದ ನಡುವೆ ಮಂಡಿಸಿದ ಬಜೆಟ್‌ನಲ್ಲಿ ಕೆಲ ಮಹತ್ವದ ನಿರ್ಧಾರಗಳಿವೆ. ಇದರಲ್ಲಿ ಸ್ವಯಂಪ್ರೇರಿತ ವಾಹನ ವಿಲೇವಾರಿ ಮಾಡುವ ನೀತಿ(ವೆಹಿಕಲ್ ಸ್ಕ್ರಾಪ್ ಪಾಲಿಸಿ) ನೀತಿ ಘೋಷಿಸಲಾಗಿದೆ.

"

Latest Videos

undefined

ಹಳೇ ವಾಹನಗಳನ್ನು ಗುಜುರಿಗೆ ಹಾಕೋ ನೀತಿ ಕುರಿತ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಈಗಾಗಲೇ ಹಲವು ಮಾಹಿತಿ ಬಹಿರಂಗ ಪಡಿಸಿದ್ದರು. ಇದೀಗ ಈ ಸ್ಕ್ರಾಪ್ ಪಾಲಿಸಿ ನೀತಿಯಾಗಿ ಕೇಂದ್ರ ಬಜೆಟ್‌ ಮೂಲಕ ಘೋಷಣೆಯಾಗಿದೆ. ಇದರ ಅನ್ವಯ ಇಂಧನ ಆಮದು ಕಡಿಮೆ ಮಾಡುವುದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವುದು ಹಾಗೂ ಪರಿಸರ ಮಾಲಿನ್ಯ ತಗ್ಗಿಸಲು ನಿರ್ಮಲಾ ಸೀತಾರಾಮನ್ ಹಳೇ ವಾಹನಗಳನ್ನು ಸ್ವಯಂ ಪ್ರೇರಿತರಾಗಿ ಗುಜುರಿಗೆ ಹಾಕುವ ಸ್ಕ್ರಾಪ್ ಪಾಲಿಯನ್ನು ಘೋಷಿಸಿದ್ದಾರೆ.

 ಚುನಾವಣಾ ಹೊಸ್ತಿಲಲ್ಲಿ ನಾಲ್ಕು ರಾಜ್ಯಗಳಿಗೆ ಬಂಪರ್, ರಸ್ತೆ ನಿರ್ಮಾಣಕ್ಕೆ 2.27 ಲಕ್ಷ ಕೋಟಿ!..

ಪ್ರೈವೇಟ್ ವಾಹನ(ವೈಯುಕ್ತಿಕ ವಾಹನ)ಗಳಿಗೆ 20 ವರ್ಷ ಹಾಗೂ ಕಮರ್ಷಿಯಲ್ ವೆಹಿಕಲ್(ವಾಣಿಜ್ಯ ವಾಹನ)ಗಳಿಗೆ 15 ವರ್ಷಗಳಿಗಿಂತ ಮೇಲ್ಪಟ್ಟ ವಾಹನಗಳನ್ನು ಗುಜುರಿಗೆ ಹಾಕುವ ನೀತಿ ಇದಾಗಿದೆ. ನೂತನ ವೆಹಿಕಲ್ ಸ್ಕ್ರಾಪಿಂಗ್ ಪಾಲಿ ಎಪ್ರಿಲ್ 1, 2022ರಿಂದ ಅಂದರೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.

ಈ ಸ್ಕ್ರಾಪಿಂಗ್ ಪಾಲಿಸಿ ಕುರಿತು ಹೆಚ್ಚಿನ ವಿವರಣೆಗಳನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆ ಹಂಚಿಕೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಣೆ ವೇಳೆ ಹೇಳಿದ್ದಾರೆ. 2019ರಲ್ಲಿ ನಿತಿನ್ ಗಡ್ಕರಿ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಇದರಲ್ಲಿ ವೆಹಿಕಲ್ ಸ್ಕ್ರಾಪಿಂಗ್ ಪಾಲಿಸಿಗೂ ತಿದ್ದುಪಡಿ ತರಲಾಗಿತ್ತು. ಈ ತಿದ್ದುಪಡಿಯಲ್ಲಿ 15 ವರ್ಷಕ್ಕಿಂತ ಹಳೇ ವಾಹನಗಳನ್ನು ಕಡ್ಡಾಯವಾಗಿ ಗುಜುರಿಗೆ ಹಾಕುವ ನೀತಿ ಮಾಡಲಾಗಿತ್ತು. 

2020ರಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ವೆಹಕಲ್ ಸ್ಕ್ರಾಪ್ ಪಾಲಿಸಿಗೆ ಸರ್ಕಾರಿಂದ ಅನುಮೋದನೆಯನ್ನು ಪಡೆದುಕೊಂಡಿತ್ತು. ಶೀಘ್ರದಲ್ಲೇ ಇದೀಗ ಕೇಂದ್ರ ಮತ್ತು ರಸ್ತೆ ಸಾರಿಗೆ ಇಲಾಖೆ ವೆಹಿಕಲ್ ಸ್ಕ್ರಾಪ್ ಪಾಲಿಸಿ ಕುರಿತು ವಿವರಣೆಗಳನ್ನು ಹಂಚಿಕೊಳ್ಳಲಿದೆ.

click me!