Old Diesel Vehicles ನೋಂದಣಿ ರದ್ದಾದ ಹಳೇ ಡೀಸೆಲ್ ವಾಹನ ರಿ ರಿಜಿಸ್ಟ್ರೇಶನ್ ಮಾಡಲು ಇದೆ ದಾರಿ!

By Suvarna News  |  First Published Jan 3, 2022, 6:42 PM IST
  • ಹೊಸ ವರ್ಷದಿಂದ ಹೊಸ ನಿಯಮ ಜಾರಿ, ಹಳೆ ವಾಹನಕ್ಕೆ ಸಂಕಷ್ಟ
  • 1 ಲಕ್ಷ ಹಳೇ ಡೀಸೆಲ್ ವಾಹನ ರಿಜಿಸ್ಟ್ರೇಶನ್ ರದ್ದು ಮಾಡಿದ ದೆಹಲಿ ಸರ್ಕಾರ
  • ಹಳೇ ವಾಹನ ಉಳಿಸಿಕೊಳ್ಳಲು ಇದೆ ದಾರಿ, ಆದರೆ ಬಲು ದುಬಾರಿ

ನವದೆಹಲಿ(ಜ.03): ಹೊಸ ವರ್ಷದಿಂದ ಹೊಸ ನಿಯಮ ಜಾರಿಯಾಗಿದೆ. ದೆಹಲಿ ಸರ್ಕಾರ(Delhi) ಮೊದಲೇ ಘೋಷಿಸಿದಂತೆ 10 ವರ್ಷಕ್ಕಿಂತ ಹಳೆ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ. ಮೊದಲ ಹಂತದಲ್ಲಿ ದೆಹಲಿ ಸರ್ಕಾರ ಬರೋಬ್ಬರಿ 1 ಲಕ್ಷ ಹಳೇ ಡೀಸೆಲ್ ವಾಹನದ(Old Diesel Vehicles) ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ. ಇನ್ನು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನದ ರಿಜಿಸ್ಟ್ರೇಶನ್ ಶೀಘ್ರದಲ್ಲೇ ರದ್ದಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ನೋಂದಣಿ ರದ್ದಾಗಿರುವ ಕಾರುಗಳನ್ನು ಮತ್ತೆ ರಸ್ತೆಗಿಳಿಸಿದರೆ ದುಬಾರಿ ದಂಡ ಪಾವತಿಸಬೇಕು. ಇಷ್ಟೇ ಅಲ್ಲ ಪೊಲೀಸರು ವಾಹನವನ್ನು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಸಮೀಪದ ವಾಹನ ಗುಜುರಿ ಕೇಂದ್ರಕ್ಕೆ ರವಾನಿಸಲಿದ್ದಾರೆ. ಹೀಗಾಗಿ ನೋಂದಣಿ ರದ್ದಾಗಿರುವ(deregistered) ವಾಹನಗಳನ್ನು ಯಾವುದೇ ದಾಖಲೆ ಇಲ್ಲದೆ ರಸ್ತಗಿಳಿಸಿದರೆ ದಂಡದ ಜೊತೆಗೆ ವಾಹನ ಕೂಡ ಕೈತಪ್ಪಿಹೋಗಲಿದೆ.

Tap to resize

Latest Videos

Vehicle Deregistration ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!

ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ 43 ಲಕ್ಷ ಪೆಟ್ರೋಲ್ ವಾಹನಗಳಿವೆ. ಇದರಲ್ಲಿ 32 ಲಕ್ಷ ದ್ವಿಚಕ್ರ ವಾಹ ಹಾಗೂ 11 ಲಕ್ಷ ಕಾರುಗಳಾಗಿದೆ. ಪೆಟ್ರೋಲ್ ವಾಹನಗಳ ಡಿ ರಿಡಿಸ್ಟ್ರೇಶನ್ ಕುರಿತು ದೆಹಲಿ ಶೀಘ್ರದಲ್ಲೆ ಪ್ರಕಟಣೆ ಹೊರಡಿಸಲಿದೆ. ಜನವರಿ 1, 2022ರಿಂದ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನ ನಿಷೇಧಕ್ಕೆ ಹೇರಲಾಗಿದೆ. ಜನವರಿ 1 ರಂದು ದೆಹಲಿ ಸರ್ಕಾರ 1,01,247 ಡೀಸೆಲ್ ವಾಹನಗಳ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ. ನೋಂದಣಿ ರದ್ದು ಮಾಡಿದ ವಾಹನಗಳ ಪೈಕಿ 87,000 ಕಾರುಗಳಾಗಿದೆ. ಇನ್ನುಳಿದ ವಾಹನಗಳು ಟ್ರಕ್, ಲಾರಿ,ಬಸ್ ಸೇರಿವೆ. 

ಆದರೆ ಹಳೇ ವಾಹನಗಳನ್ನು ಕಡ್ಡಾಯವಾಗಿ ಗುಜುರಿಗೆ ಹಾಕಲೇಬೇಕಂತಿಲ್ಲ. ಹಳೇ ವಾಹನ ಮಾಲೀಕರ ಮುಂದೆ ಕೆಲ ಆಯ್ಕೆಗಳಿವೆ. ವಾಹನ ಉಳಿಸಿಕೊಳ್ಳಲು ಅವಕಾಶಗಳಿದೆ. ಡೀಸೆಲ್ ವಾಹನವನ್ನು ಹಾಗೇ ಉಳಿಸಿಕೊಳ್ಳಲು ಕೆಲ ನಿಯಮಗಳಿವೆ. ಅದನ್ನು ಪಾಲಿಸಲಬೇಕು. ರಾಷ್ಟ್ರೀಯ ಹಸಿರು ಪ್ರಾಧಿಕರಣ(NGT) ನಿಮಯದಂತೆ ಸಾರಿಗೆ ಇಲಾಖೆಯಿಂದ  ನೋ ಅಬ್ಜೆಕ್ಷನ್ ಸರ್ಟಿಫಿಕೇಟ್( NOC) ಪಡೆಯಬೇಕು. ಎಮಿಶನ್ ಟೆಸ್ಟ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಹೊರ ಸೂಸುತ್ತಿದ್ದರೆ NOC ಸಿಗುವುದಿಲ್ಲ. ಇನ್ನು ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕು. ಇದು ಕೂಡ ಸುಲಭದ ಮಾತಲ್ಲ. ಕಠಿಣ ಪ್ರಕ್ರಿಯೆಗಳಲ್ಲಿ ವಾಹನ ಪಾಸ್ ಆದರೆ ಮಾತ್ರ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಎಲ್ಲಾ ದಾಖಲೆ ಪತ್ರ ಪಡೆದ ಬಳಿ ವಾಹನ ರಿಜಿಸ್ಟ್ರೇಶನ್ ಮಾಡಿಸಬೇಕು. ಇದು ಹೊಸ ವಾಹನದ ರಿಜಸ್ಟ್ರೇಶನ್‌ಗಿಂತ ದುಬಾರಿಯಾಗಿದೆ.

Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!

ಇದೊಂದೆ ಆಯ್ಕೆಯಲ್ಲ, ಹಳೇ ವಾಹನದ ಮಾಲೀಕರ ಮುಂದಿರುವ ಮತ್ತೊಂದು ಆಯ್ಕೆಯಿಂದರೆ ದೆಹಲಿ ಸರ್ಕಾರದ ಮಾನ್ಯತೆ ಪಡೆದಿರುವ ಕಂಂದ್ರಗಳಲ್ಲಿ ಹಳೇ ಇಂಧನ ವಾಹನಗಳಿಗೆ ಎಲೆಕ್ಟ್ರಿಕ್ ವಾಹನ ಕಿಟ್ ಅಳವಡಿಸಬಹುದು. ಇದರಿಂದ ಇಂಧನ ವಾಹನ ಎಲೆಕ್ಟ್ರಿಕ್ ವಾಹನವಾಗಿ ಬದಲಾಗಲಿದೆ. ಬಳಿಕ ಹೊಸ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು.

ದೆಹಲಿಯಲ್ಲಿರುವ ಹಳೇ ವಾಹನ ಮಾಲೀಕರ ಮುಂದಿರುವ ಮತ್ತೊಂದು ಆಯ್ಕೆ ಎಂದರೆ ದೆಹಲಿ ನಗರದಿಂದ ಹೊರಗಡೆಗೆ ಅಥವಾ ಬೇರೆ ರಾಜ್ಯಗಳಿಗೆ ವಾಹನ ಮಾರಾಟ ಮಾಡಬಹುದು. ಸದ್ಯ ದೆಹಲಿಯಲ್ಲಿ ಮಾತ್ರ 10 ವರ್ಷ ಹಳೆ ವಾಹನಗಳಿಗೆ ನಿಷೇಧ ಹೇರಲಾಗಿದೆ. ಇನ್ನು ಈಗಾಗಲೇ ದೆಹಲಿ ಸಾರಿಗೆ ಇಲಾಖೆ ಸದ್ಯ ರಿಜಿಸ್ಟ್ರೇಶನ್ ರದ್ದು ಮಾಡಿರುವ 10 ವರ್ಷಕ್ಕಿಂತ ಹಳೇ ವಾಹನಗಳನ್ನು ಬೇರೆ ರಾಜ್ಯದಳಲ್ಲಿ ರಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬುಹುದು ಎಂದಿದೆ. ಈ ವಾಹನಗಳನ್ನು ಮಾಲೀಕರು ಇತರರಿಗೆ ಮಾರಾಟ ಮಾಡಬಹುದು. ಆದರೆ ರಿಜಿಸ್ಟ್ರೇಶನ್ ರದ್ದಾಗಿರುವ ಕಾರಣ ಕಡಿಮೆ ಬೆಲೆಗೆ ವಾಹನ ಮಾರಾಟವಾಗಲಿದೆ.

ಕೊನೆಯ ಆಯ್ಕೆ ವಾಹನವನ್ನು ಗುಜುರಿಗೆ ಹಾಕುವುದು. ವಾಹನ ಗುಜುರಿ ನೀತಿ ಪ್ರಕಾರಣ ಹಳೇ ವಾಹನವನ್ನು ಗುಜುರಿಗೆ ಹಾಕಬಹುದು. ಗುಜುರಿಗೆ ಹಾಕುವ ವಾಹನದ ಮಾರುಕಟ್ಟೆ ಮೌಲ್ಯವನ್ನು ಅಧರಿಸಿ ಹಣವನ್ನು ಮಾಲೀಕರಿಗೆ ಪಾವತಿಸಲಾಗುತ್ತದೆ. ಸದ್ಯ ಗುಜರಿ ನೀತಿ ಪರಿಣಾಮಕಾರಿಯಾಗಿ ಜಾರಿ ಮಾಡಲು ಸರ್ಕಾರ ಹಳೇ ವಾಹನಗಳಿಗೆ ಮಾರುಕಟ್ಟೆ ಮೌಲ್ಯ ನೀಡುತ್ತಿದೆ. ಆದರೆ ಈ ಯೋಜನೆ ಶಾಶ್ವತವಲ್ಲ. 

click me!