ಫಾಸ್ಟಾಗ್ ಕೆವೈಸಿ ಮಾಡದಿದ್ದರೆ ಜನವರಿ 31ರ ಬಳಿಕ ನಿಮ್ಮ ಫಾಸ್ಟಾಗ್ ನಿಷ್ಕ್ರೀಯಗೊಳ್ಳಲಿದೆ. ಅಂತಿಮ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕುವ ಮೊದಲು ನಿಮ್ಮ ಫಾಸ್ಟಾಗ್ ಕೆವೈಸಿ ಮಾಡಿಸಿಕೊಳ್ಳಿ. ಹಾಗಾದರೆ ಕೆವೈಸಿ ಪ್ರಕ್ರಿಯೆ ಅನ್‌ಲೈನ್ ಮೂಲಕ ಪೂರ್ಣಗೊಳಿಸುವುದು ಹೇಗೆ? ನಿಮ್ಮ ಫಾಸ್ಟಾಗ್ ಕೆವೈಸಿ ಪೂರ್ಣಗೊಂಡಿದೆಯಾ ಅನ್ನೋದು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ.
ಬೆಂಗಳೂರು(ಜ.16) ಟೋಲ್ ಬೂತ್‌ಗಳಲ್ಲಿ ಸುಗಮ ಸಂಚಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಫಾಸ್ಟಾಗ್ ಕಡ್ಡಾಯ ಮಾಡಿದೆ. ಒಂದು ವಾಹನ, ಒಂದು ಫಾಸ್ಟಾಗ್ ನೀತಿ ಜಾರಿಗೊಳಿಸಿ ಇದೀಗ ಶೇಕಡಾ 98ರಷ್ಟು ವಾಹನಗಳು ಫಾಸ್ಟಾಗ್ ಅಳವಡಿಕೆ ಮಾಡಿಕೊಂಡಿದೆ. ಹೆದ್ದಾರಿಗಳಲ್ಲಿ ಟೋಲ್ ಬೂತ್‌ಗಳಲ್ಲಿ ನಗದು ಪಾವತಿ ವ್ಯವಸ್ಥೆ ಬದಲು ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದೀಗ ಫಾಸ್ಟಾಗ್ ಬಳಕೆದಾರರು ಮಹತ್ವದ ಮತ್ತೊಂದು ವಿಚಾರದ ಕುರಿತು ಎಚ್ಚರವಹಿಸಬೇಕಾದಿದೆ. ಜನವರಿ 31ರೊಳಗೆ ನಿಮ್ಮ ವಾಹನದ ಫಾಸ್ಟಾಗ್ ಕೆವೈಸಿ ಪೂರ್ಣಗೊಳ್ಳದೇ ಇದ್ದಲ್ಲಿ, ಫಾಸ್ಟಾಗ್ ನಿಷ್ಕ್ರೀಯಗೊಳ್ಳಲಿದೆ. ಹಾಗಾದರೆ ನಿಮ್ಮ ಫಾಸ್ಟಾಗ್ ಕೆವೈಸಿ ಪೂರ್ಣಗೊಂಡಿದೆಯಾ ಎಂದು ಪರಿಶೀಲಿಸುವುದು ಹೇಗೆ? ಪೂರ್ಣಗೊಳ್ಳದೇ ಇದ್ದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ.
ಫಾಸ್ಟಾಗ್ ಕೆವೈಸಿ ಕಡ್ಡಯವಾಗಿದೆ. ಇದಕ್ಕೆ ನೀಡಿರುವ ಗಡುವು ಕೂಡ ಹೆಚ್ಚಿಲ್ಲ. ಕೇವಲ 15 ದಿನದೊಳಗೆ ಅಂದರೆ ಜನವರಿ 31ರೊಳಗೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲಿದ್ದರೆ ಫೆಬ್ರವರಿ 1ರಿಂದ ನಿಮ್ಮ ವಾಹನದ ಫಾಸ್ಟಾಗ್ ಖಾತೆಯಲ್ಲಿ ಹಣವಿದ್ದರೂ ಫಾಸ್ಟಾಗ್ ನಿಷ್ಕ್ರೀಯಗೊಳ್ಳಲಿದೆ.
undefined
ವಾಹನ ಸವಾರರೇ ಎಚ್ಚರ, ಜ.31ರೊಳಗೆ KYC ಮಾಡಿದಿದ್ದರೆ ನಿಮ್ಮ ಫಾಸ್ಟಾಗ್ ನಿಷ್ಕ್ರೀಯ!
ಫಾಸ್ಟಾಗ್ ಕೆವೈಸಿ ಪರಿಶೀಲನೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?
ನಿಮ್ಮ ಫಾಸ್ಟಾಗ್ ನೀಡಿದ ಬ್ಯಾಂಕ್ ಅಥವಾ ಪ್ರೊವೈಡರ್ ಪೋರ್ಟಲ್‌ಗೆ ಭೇಟಿ ನೀಡಿ
ಫಾಸ್ಟಾಗ್ ಲಾಗಿನ್ ಪೋರ್ಟಲ್ ಕ್ಲಿಕ್ ಮಾಡಿ ವಾಹನದ ರಿಜಿಸ್ಟರ್ಡ್ ನಂಬರ್ ಅಥವಾ ವಾಲೆಟ್ ಐಡಿ ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ ಆಗಿ
ಮೊಬೈಲ್ ನಂಬರ್ ಮೂಲಕ ಒಟಿಪಿ ನಮೂದಿಸಿ ಸುಲಭವಾಗಿ ಲಾಗಿನ್ ಆಗಲು ಸಾಧ್ಯ
ನಿಮ್ಮ ಫಾಸ್ಟಾಗ್ ಖಾತೆ ತೆರೆದುಕೊಂಡ ಬಳಿಕ ನ್ಯಾವಿಗೇಶನ್ ಮೆನೂ ಬಾರ್ ಬಳಿ ಅಂದರೆ ಬಲಭಾಗ ಅಥವಾ ಎಡಭಾಗದಲ್ಲಿರುವ ಮೈ ಪ್ರೊಫೈಲ್ ಆಯ್ಕೆ ಮಾಡಿಕೊಳ್ಳಿ
ಮೈ ಪ್ರೊಫೆಲ್ ಪೇಜ್‌ನಲ್ಲಿ ಕವೈಸಿ ಸ್ಟೇಟಸ್ ಪರಿಶೀಲನೆ ಮಾಡಿ
ಕೆವೈಸಿ ಸ್ಟೇಟಸ್ ಫುಲ್ ಎಂದಿದ್ದರೆ, ನಿಮ್ಮ ಫಾಸ್ಟಾಗ್ ಈಗಾಗಲೇ ಕೆವೈಸಿ ದಾಖಲೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅರ್ಥ
ಕೆವೈಸಿ ಸ್ಟೇಟಸ್ ಪೆಂಡಿಂಗ್ ಎಂದಿದ್ದರೆ, ಅಗತ್ಯ ದಾಖಲೆಗಳನ್ನು ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕು
ಟೋಲ್ ಪ್ಲಾಜಾದಲ್ಲಿ ಕ್ಯೂ ತಡೆಯಲು ಇನ್ನು 6 ತಿಂಗಳಲ್ಲಿ ಹೊಸ ತಂತ್ರಜ್ಞಾನ: ನಿತಿನ್ ಗಡ್ಕರಿ
ಕೆವೈಸಿ ಪೆಂಡಿಂಗ್ ಇದ್ದರೆ, ಕೆವೈಸಿ ಸಬ್ ಸೆಕ್ಷನ್ ಆಯ್ಕೆ ಮಾಡಿಕೊಳ್ಳಿ
ಸಬ್ ಸೆಕ್ಷನ್ ಆಯ್ಕೆ ವೇಳೆ ನಿಮ್ಮ ಕಸ್ಟಮರ್ ಟೈಪ್ ಯಾವುದೆಂದು ಆಯ್ಕೆ ಮಾಡಿಕೊಳ್ಳಿ
ಬಳಿಕ ಅಧಿಕೃತ ವಿಳಾದ ದಾಖಲೆ, ಪಾಸ್‌ಪೋರ್ಟ್ ಸೈಜ್ ಫೋಟೋ ಸೇರಿದಂತೆ ಇತರ ದಾಖಲೆ ಲಗತ್ತಿಸಿ
ದಾಖಲೆ ಲಗತ್ತಿಸಿದ ಈ ದಾಖಲೆಗಳ ಕುರಿತು ಡಿಕ್ಲರೇಶನ್ ಟಿಕ್ ಮಾಡಿಕೊಳ್ಳಿ
ವೆರಿಫಿಕೇಶನ್ ಅಂಡ್ ಸಬ್ಮಿಟ್ ಬಟನ್ ಒತ್ತಿ, ಕೆವೈಸಿ ಪೂರ್ಣಗೊಳಿಸಿ