ಪ್ರಮುಖ ಕಾರು ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಭಾರತದಲ್ಲೂ ಜನಪ್ರಿಯ ಕಂಪನಿಯಾಗಿದೆ. ಪ್ರೀಮಿಯಂ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆದುಕೊಂಡಿರುವ ಕಂಪನಿ ಈ ಮಾರ್ಚ್ ತಿಂಗಳಲ್ಲಿ ತನ್ನ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಪಟ್ಟಿ ಮಾಡಿರುವ ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಗರಿಷ್ಠ 32527 ರೂಪಾಯಿವರೆಗೆ ಲಾಭ ದೊರೆಯಲಿದೆ.
ಕೋವಿಡ್ ಪೂರ್ವದಲ್ಲಿ ಭಾರಿ ನಿರಾಶೆ ಅನುಭವಿಸಿದ್ದ ಭಾರತೀಯ ಆಟೋಮೊಬೈಲ್ ಕ್ಷೇತ್ರವು ಆರ್ಥಿಕ ಹಿಂಜರಿತದಿಂದ ನಿಧಾನವಾಗಿ ಕೋವಿಡ್ ನಂತರದಲ್ಲಿ ಚೇತರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಪ್ರತಿ ತಿಂಗಳು ತಮ್ಮ ಕಾರುಗಳ ಮೇಲೆ ಒಂದಿಷ್ಟು ರಿಯಾಯ್ತಿಗಳನ್ನು ಘೋಷಿಸಿ ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತವೆ. ಅದರಂತೆ, ಈ ಮಾರ್ಚ್ ತಿಂಗಳಲ್ಲಿ ಹೋಂಡಾ ಕಾರ್ಸ್ ತನ್ನ ವಿವಿಧ ಮಾಡೆಲ್‌ಗಳ ಖರೀದಿ ಮೇಲೆ ಡಿಸ್ಕೌಂಟ್ಸ್ ಘೋಷಿಸಿದೆ.
ಹೋಂಡಾ ಕಾರುಗಳನ್ನು ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿರುವವರಿಗೆ ಇದು ಖರೀದಿಗೆ ಸಕಾಲ. ಯಾಕೆಂದರೆ, ಕಂಪನಿ ಬಂಪರ್ ಆಫರ್‌ಗಳನ್ನು ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಬಿಎಸ್6 ಕಾರುಗಳ ಮೇಲೆ ಗರಿಷ್ಠ 32527 ರೂಪಾಯಿವರೆಗೂ ಆಫರ್‌ಗಳನ್ನು ಘೋಷಿಸಿದೆ.
undefined
ಓಲಾದಿಂದ ಜಗತ್ತಿನ ಅತಿದೊಡ್ಡ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಫ್ಯಾಕ್ಟರಿ!
ಹೊಸ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೋಂಡಾ ಕಾರ್ಸ್ ಇಂಡಿಯಾ, ಬಿಎಸ್6 ನಿಯಮಗಳನ್ನು ಅಳವಡಿಸಿಕೊಂಡಿರುವ ಜಾಜ್, ಅಮೇಜ್, ಡಬ್ಲ್ಯೂಆರ್-ವಿ, ಅಮೇಜ್ ಮತ್ತು ಡಬ್ಲ್ಯೂ ಆರ್ ವಿಗಳ ಸ್ಪೆಷಲ್ ಎಡಿಷನ್‌ಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಆಫರ್‌ಗಳ ಪಟ್ಟಿಯನ್ನು ಹೋಂಡಾ ಕಾರ್ಸ್ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.
ಕಂಪನಿ ಈಗ ಘೋಷಿಸಿರುವ ಆಫರ್‌ಗಳು ಮಾರ್ಚ್ 31ರವರೆಗೆ ಮಾತ್ರ ಸಿಂಧುವಾಗಿರಲಿವೆ. ಹಾಗೆಯೇ ಲಭ್ಯತೆಯ ಆಧಾರದ ಮೇಲೆ ಮಾಡೆಲ್ ಮತ್ತು ವೆರಿಯೆಂಟ್‌ಗಳ ಮೇಲಿನ ಆಫರ್ ಕೂಡ ಬದಲಾಗಲಿದೆ. ಕಂಪನಿಯು ಗ್ರಾಹಕರಿಗೆ ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸೆಚೇಂಜ್ ಬೆನಿಫಿಟ್ಸ್‌ಗಳನ್ನು ನೀಡುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಹೋಂಡಾ ಗ್ರಾಹಕರಿಗೆ ಲಾಯಿಲ್ಟಿ ಬೋನಸ್, ಎಕ್ಸ್‌ಜೇಂಜ್ ಬೋನಸ್ ಅನ್ನು ಕ್ರಮವಾಗಿ 6,000 ರೂ. ಮತ್ತು 10,000 ರೂ. ಒದಗಿಸುತ್ತದೆ.
2020 ಹೋಂಡಾ ಡಬ್ಲ್ಯೂಆರ್-ವಿ ಕಾರು ಖರೀದಿ ಮೇಲೆ ಹೆಚ್ಚಿನ ಡಿಸ್ಕೌಂಟ್ ದೊರೆಯಲಿದೆ. ಅಂದರೆ ಗರಿಷ್ಠ 32,527 ರೂಪಾಯಿವರೆಗೂ ಲಾಭ ಪಡೆದುಕೊಳ್ಳಬಹುದು. ಇದರಲ್ಲಿ 15,000 ನಗದು ರಿಯಾಯ್ತಿ ಅಥವಾ 17,427 ರೂ. ಮೌಲ್ಯದ ಎಫ್ಒಎಸಿ ಬಿಡಿಭಾಗಗಳು ಸೇರಿವೆ. ಹಾಗೆಯೇ ಆಸಕ್ತ ಗ್ರಾಹಕರು ತಮ್ಮ ಹಳೆಯ ಕಾರುಗಳ ಮೇಲೆ 15,000 ರೂ. ಡಿಸ್ಕೌಂಟ್ ಪಡೆದುಕೊಳ್ಳಬಹುದು. ಈ ರಿಯಾಯ್ತಿಗಳು ಎಲ್ಲ ದರ್ಜೆಯ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮಾಡೆಲ್‌ಗಳ ಮೇಲೆ ಅಪ್ಲೈಯಾಗುತ್ತದೆ. ಹಾಗೆಯೇ ಎಕ್ಸ್‌ಕ್ಲೂಸಿವ್ ಎಡಿಷನ್‌ಗಳು ಮೇಲೆ 25,000 ರೂ.ವರೆಗೂ ವಿನಾಯ್ತಿ ಪಡೆದುಕೊಳ್ಳಬಹುದು. ಇದರಲ್ಲಿ ಹತ್ತು ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು 15 ಸಾವಿರ ಎಕ್ಸ್‌ಚೇಂಜ್ ಬೋನಸ್ ಮೊತ್ತವೂ ಸೇರಿದೆ.
ಹೊಸ ಅವತಾರದಲ್ಲಿ ಫೇಸ್‌ಲಿಫ್ಟ್ ಹೊಸ ಸ್ವಿಫ್ಟ್ ಕಾರು ಬಿಡುಗಡೆ
ಇನ್ನು ಕಂಪನಿಯು ಸಬ್‌ಕಾಂಪಾಕ್ಟ್ ಸೆಡಾನ್ ಆಗಿರುವ ಬಿಎಸ್6 ಅಮೇಜ್ ಖರೀದಿ ಮೇಲೆ ಗ್ರಾಹಕರಿಗೆ ಒಟ್ಟು 26,999 ರೂಪಾಯಿ ಲಾಭ ದೊರೆಯಲಿದೆ. ಇದರಲ್ಲಿ 15,000 ರೂಪಾಯಿ ನಗದು ರಿಯಾಯ್ತಿ ಸಿಗುತ್ತದೆ ಅಥವಾ 11,990 ರೂಪಾಯಿ ಮೌಲ್ಯದ ಎಫ್ಒಎಸಿ ಬಿಡಿಭಾಗಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಕಾರಿನ ವಿನಿಮಯ ಮೇಲೂ ನಿಮಗೆ 15,000 ರೂಪಾಯಿವರೆಗೂ ಲಾಭ ದೊರೆಯಲಿದೆ.
ಇದರ ಜೊತೆಗೆ ಅಮೇಜ್ ಸ್ಪೆಷಲ್ ಎಡಿಷನ್ ಕೂಡ ಮಾರಾಟಕ್ಕೆ ಇದ್ದು, ಪೆಟ್ರೋಲ್ ಮತ್ತು ಡೀಸೆಲ್ ವೆರಿಯೆಂಟ್ಸ್‌ಗಳ ಖರೀದಿಯ ಮೇಲೂ ಡಿಸ್ಕೌಂಟ್ಸ್ ಅಥವಾ ಎಕ್ಸ್‌ಚೇಂಜ್ ಬೆನೆಫಿಟ್ಸ್ ಘೋಷಿಸಲಾಗಿದೆ. ಹಾಗಾಗಿ ಗ್ರಾಹಕರು 7000 ರೂಪಾಯಿವರೆಗೆ ಡಿಸ್ಕೌಂಟ್ಸ್ ಅಥವಾ 15,000 ರೂಪಾಯಿವರೆಗೆ ಎಕ್ಸೆಚೇಂಜ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ಉತ್ಪಾದಿಸಿದ 20 ಲಕ್ಷ ಕಾರನ್ನು ವಿದೇಶಕ್ಕೆ ರಫ್ತು ಮಾಡಿದ ಮಾರುತಿ!
ಹೋಂಡಾ ಕಂಪನಿಯ ಮತ್ತೊಂದು ಜನಪ್ರಿಯ ಕಾರ್ ಆಗಿರುವ ಹೋಂಡಾ ಜಾಜ್ ಖರೀದಿಯ ಮೇಲೆ ಕಂಪನಿ ಆಫರ್‌ಗಳನ್ನು ಘೋಷಿಸಿದೆ. ಹೋಂಡಾ ಜಾಜ್ ಖರೀದಿಯ ಮೇಲೆ ಗ್ರಾಹಕರಿಗೆ ಒಟ್ಟು 32, 248 ರೂಪಾಯಿ ಲಾಭ ದೊರೆಯಲಿದೆ. ಇದರಲ್ಲಿ 15,000 ರೂಪಾಯಿವರೆಗೆ ನಗದು ಡಿಸ್ಕೌಂಟ್ ಮತ್ತು 15,000 ರೂಪಾಯಿಯವರೆಗೆ ಎಕ್ಸ್‌ಚೇಂಜ್ ಲಾಭ ಸಿಗಲಿದೆ. ಜೊತೆಗೆ ಗ್ರಾಹಕರು ಕ್ಯಾಶ್ ಡಿಸ್ಕೌಂಟ್ ಬದಲಿಗೆ 17,248 ರೂಪಾಯಿ ಮೌಲ್ಯದ ಎಫ್ಒಸಿ ಬಿಡಿಭಾಗಗಳನ್ನು ಪಡೆದುಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ. ಮಾರ್ಚ್ ತಿಂಗಳಲ್ಲಿ ಕಂಪನಿ ತನ್ನ ಈ ಎಲ್ಲ ಕಾರುಗಳ ಮೇಲೆ ಡಿಸ್ಕೌಂಟ್ ಹಾಗೂ ಬೆನೆಫಿಟ್ಸ್ ಘೋಷಿಸುವುದರ ಮೂಲಕ ಪೈಪೋಟಿಗೆ ಇಳಿದಿದೆ ಎಂದು ಹೇಳಬಹುದು.
ಜಗತ್ತಿನ ಪ್ರಮುಖ ಕಾರಗಳ ಉತ್ಪದನಾ ಕಂಪನಿಯಾಗಿರುವ ಹೋಂಡಾ ಭಾರತದಲ್ಲೂ ತನ್ನ ಪ್ರಾಬಲ್ಯವನ್ನು ಹೊಂದಿದೆ. ಪ್ರೀಮಿಯಂ ಕಾರುಗಳ ಮೂಲಕ ಹೆಚ್ಚು ಜನಪ್ರಿಯಗಳಿಸಿದೆ. ಕಂಪನಿಯು ವಿಶಿಷ್ಟ ಹಾಗೂ ಅತ್ಯಾಧುನಿಕ ಕಾರುಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ವಿಶಿಷ್ಟವಾದ ಅನುಭವವನ್ನು ಒದಗಿಸುತ್ತದೆ. ಹಾಗಾಗಿಯೇ ಹೋಂಡಾ ಕಾರುಗಳು ಭಾರತದಲ್ಲೂ ಹೆಚ್ಚು ಜನಪ್ರಿಯತೆಯನ್ನು ಗಳಸಿಕೊಂಡಿವೆ.