ಮಿನಿಸ್ಟರ್ ಕಾರ್ ಓವರ್ ಟೇಕ್ ಮಾಡಿದ ಪ್ರವಾಸಿಗರನ್ನು ಠಾಣೆಯಲ್ಲಿ ಕೂಡಿಟ್ಟ ಪೂಲೀಸ್!

By Suvarna News  |  First Published Feb 23, 2021, 3:53 PM IST

ರಾಜಕೀಯ ನಾಯಕರು ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಯಾವುದೇ ಕ್ರಮ ಇಲ್ಲ. ಆದರೆ ಜನಸಾಮಾನ್ಯರು ಯಾವುದೇ ತಪ್ಪು ಮಾಡದಿದ್ದರೂ ಅವರ ಮೇಲೆ ಕ್ರಮ ಕೈಗೊಂಡ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸಚಿವರ ಕಾರನ್ನು ಓವರ್ ಟೇಕ್ ಮಾಡಿದ ಕಾರಣಕ್ಕೆ ಪ್ರವಾಸಿಗರನ್ನು ಪೊಲೀಸ್ ಠಾಣೆಯಲ್ಲಿ ಕೂಡಿಟ್ಟ ಘಟನೆ ನಡೆದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಒಡಿಶಾ(ಫೆ.23): ಸಚಿವರು, ಶಾಸಕರ ಪ್ರಯಾಣದ ವೇಳೆ ಬೆಂಗಾವಲು ಪಡೆ ಇದ್ದೆ ಇರುತ್ತದೆ. ಈ ಬೆಂಗಾವಲು ಪಡೆ ಹಾಗೂ ನಾಯಕರ ಕಾರುಗಳು ಅತೀ ವೇಗದಲ್ಲಿ ಚಲಿಸುತ್ತದೆ. ಹೀಗಾಗಿ ಈ ಕಾರನ್ನು ಸಾಮಾನ್ಯವಾಗಿ ಓವರ್ ಟೇಕ್ ಮಾಡಲು ಸಾಧ್ಯವಿಲ್ಲ. ಆದರೆ ಒಡಿಶಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಪರಿಣಾಮ ಅಮಾಯಕ ಪ್ರವಾಸಿಗರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯಬೇಕಾಗಿ ಬಂದಿದೆ.

 ಒಂದೇ ದಿನ 102 ಕೋಟಿ ರೂಪಾಯಿ; ದಾಖಲೆ ಬರೆದ FASTag ಟೋಲ್ ಸಂಗ್ರಹ!

Tap to resize

Latest Videos

ಕೇಂದ್ರದ ರಾಜ್ಯ ಖಾತೆ ಸಚಿವ ಪ್ರತಾಪ್ ಚಂದ್ರ ಸಾರಂಗಿ ಒಡಿಶಾದ NH16 ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಇದೇ ದಾರಿಯಲ್ಲಿ ಸಂತೋಶ್ ಶಾ ಕುಟುಂಬ ಕೋಲ್ಕತಾಗೆ ಮರಳುತ್ತಿತ್ತು. ಬಾಲಾಸೂರ್‌ನ ಪಂಚಲಿಂಗೇಶ್ವರಕ್ಕೆ ತೆರಳಿದ ಸಂತೋಶ್ ಶಾ, ಆತನ ಪತ್ನಿ, ಸಹೋದರ ಹಾಗೂ ಮಗು ಕಾರಿನ ಮೂಲಕ ಕೋಲ್ಕತಾಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸಂತೋಶ್ ಪ್ರಯಾಣದ ವೇಳೆ ಹಿಂಭಾಗದಿಂದ ಸೈರನ್ ಶಬ್ದ ಕೇಳಿಸಿದೆ. ಸಂತೋಶ್ ಆ್ಯಂಬುಲೆನ್ಸ್ ಇರಬೇಕು ಎಂದು ದಾರಿಬಿಟ್ಟಿದ್ದಾರೆ. ಆದರೆ ಅದು ಸಚಿವರ ಕಾರಾಗಿತ್ತು. ಇತ್ತ ಸಚಿವರ ಕಾರು ಸಂತೋಶ್ ಶಾ ಕಾರನ್ನು ದಾಟಿ ಮುಂದೆ ಸಾಗಿದೆ. ಕೆಲ ಹೊತ್ತು ಪ್ರಯಾಣದ ಬಳಿಕ ಮುಂಭಾಗದಲ್ಲಿದ್ದ ಸಚಿವರ ಕಾರು ರೋಡ್ ಸೈಡ್‌ನತ್ತ ಮೆಲ್ಲನೆ ಚಲಿಸಿದೆ. ಸಚಿವರ ಕಾರು ನಿಲ್ಲಿಸುತ್ತಿದ್ದಾರೆ ಎಂದುಕೊಂಡ ಸಂತೋಶ್ ಸಚಿವರ ಕಾರನ್ನು ಓವರ್ ಟೇಕ್ ಮಾಡಿದ್ದಾರೆ.

ನಿಯಮ ಉಲ್ಲಂಘಿಸಿದ 51 ವಾಹನಗಳ ಸೈಲೆನ್ಸರ್ ಕಿತ್ತು ಹಾಕಿ ರೋಲರ್ ಹರಿಸಿದ ಪೊಲೀಸ್!

ಸಚಿವರ ಹಾಗೂ ಪೊಲೀಸ್ ವಾಹನ ಓವರ್ ಟೇಕ್ ಮಾಡಿದ ಸಂತೋಶ್ ಶಾ ಮುಂದೆ ಸಾಗಿದ್ದಾರೆ. ಇದು ಸಚಿವ ಪ್ರತಾಪ್ ಚಂದ್ರ ಸಾರಂಗಿ ಕಣ್ಣು ಕೆಂಪಾಗಿಸಿದೆ. ಕಾರನ್ನು ತಡೆಯುವಂತೆ ಸೂಚಿಸಿದ್ದಾರೆ. ಪೊಲೀಸರು ಸುಮಾರು 20 ಕಿ.ಮೀ ಚೇಸ್ ಮಾಡಿ ಟೋಲ್ ಗೇಟ್ ಬಳಿ ಸಂತೋಶ್ ಶಾ ಕಾರನ್ನು ತಡೆದಿದ್ದಾರೆ.

ಕಾರಣ ಕೇಳಿದ ಸಂತೋಶ್‌ಗೆ ಆಘಾತವಾಗಿದೆ. ಸಚಿವರ ಕಾರಿನ ಹತ್ತಿರ ಹೋದ ಕಾರಣ ವಶಕ್ಕೆ ಪಡೆಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ ಕ್ಷಮಾಪಣ ಪತ್ರ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಸತತ 4 ಗಂಟೆಗಳ ಕಾಲ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ಸಂತೋಶ್ ಕುಟುಂಬ ಬಿಡುಗಡೆಗಾಗಿ ಹರಸಾಹಸ ಪಟ್ಟಿದೆ. ಹಲವರಿಗೆ ಕರೆ ಮಾಡಿದ್ದಾರೆ. ಆದರೆ ಯಾರೂ ಕೂಡ ಸ್ಪಂದಿಸಿಲ್ಲ.

ಕೊನೆಗೆ ಮುಚ್ಚಳಿಕೆಯಲ್ಲಿ ತಾವು ಇನ್ನೆಂದು ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಸುಮಾರು 5 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿದ್ದ ಸಂತೋಶ್ ಶಾ ಕುಟಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  ಸಂತೋಶ್ ಶಾ ಹಾಗೂ ಕುಟುಂಬದ ಮೇಲೆ ಯಾವುದೇ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿಲ್ಲ. ಕ್ಷಮಾಪಣಾ ಪತ್ರ ನೀಡಲಾಗಿದೆ.

ಸಚಿವರ ತಮ್ಮ ಕಾರುಗಳಲ್ಲಿ ಸೈರನ್ ಲೈಟ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಪ್ರತಾಪ್ ಚಂದ್ರ ಸಾರಂಗಿ ಬಳಸಿದ್ದಾರೆ. ಸಚಿವರಿಗೆ ಕಾನೂನು ಅನ್ವಯವಾಗುವಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ನಾವು ಕಾನೂನಿನ ಯಾವ ಸೆಕ್ಷನ್ ಅಡಿಯಲ್ಲಿ ತಪ್ಪೆಸಗಿದ್ದೇವೆ? ಸಚಿವರ ಕಾರು ಓವರ್ ಟೇಕ್ ಮಾಡಿದ್ದು ಗಂಭೀರ ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.

click me!