100 ಗಂಟೆಯಲ್ಲಿ 100 ಕಿ.ಮೀ ರಸ್ತೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಖಲೆ ಬರೆದ ನಿತಿನ್ ಗಡ್ಕರಿ!

By Suvarna News  |  First Published May 20, 2023, 4:11 PM IST

ನಿತಿನ್ ಗಡ್ಕರಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಬಳಿಕ ಭಾರತದ ರಸ್ತೆಗಳ ಚಿತ್ರಣ ಬದಲಾಗಿದೆ. ಅತ್ಯುತ್ತಮ ಗುಣಮಟ್ಟದ ರಸ್ತೆ ಮಾತ್ರವಲ್ಲ, ದೇಶದ ಮೂಲೆ ಮೂಲೆಗೆ ಸಂಪರ್ಕ ಸುಲಭವಾಗಿದೆ. ಇದರ ಜೊತೆಗೆ ಹಲವು ದಾಖಲೆ ನಿರ್ಮಾಣವಾಗಿದೆ. ಇದೀಗ 100 ಗಂಟೆಯಲ್ಲಿ 100 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿ ದಾಖಲೆ ಬರೆಯಲಾಗಿದೆ.


ನವದೆಹಲಿ(ಮೇ.20): ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ತರ ಪ್ರಗತಿ ಕಂಡಿದೆ. ದೇಶದ ಮೂಲೆ ಮೂಲೆಗೆ ರಸ್ತೆ ಸಂಪರ್ಕ ಲಭ್ಯವಾಗಿದೆ. ಅತ್ಯಾಧುನಿಕ ಹಾಗೂ ಸುಸಜ್ಜಿತ ಗುಣಮಟ್ಟದ ರಸ್ತೆಗಳು ಭಾರತದಲ್ಲಿ ಎಲ್ಲೆಡೆ ಕಾಣಸಿಗುತ್ತಿದೆ. ಇದಕ್ಕೆ ಕಾರಣ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ. ನಿತಿನ್ ಗಡ್ಕರಿ ದೇಶದ ಬಹುತೇಕ ಭಾಗಕ್ಕೆ ಅತ್ಯುತ್ತಮ ಗುಣಮಟ್ಟದ ಸಂಪರ್ಕ ಕಲ್ಪಿಸಿದ್ದಾರೆ. ಇದರ ಜೊತೆಗೆ ಗಿನ್ನೆಸ್ ದಾಖಲೆ, ವಿಶ್ವದಾಖಲೆ ಸೇರಿದಂತೆ ಹಲವು ಇತಿಹಾಸ ಸೃಷ್ಟಿಸಿದ್ದಾರೆ. ಇದೀಗ 100 ಗಂಟೆಯಲ್ಲಿ 100 ಕಿಲೋಮೀಟರ್ ರಸ್ತೆ ನಿರ್ಮಿಸಿ ಮತ್ತೊಂದು ದಾಖಲೆ ನಿರ್ಮಿಸಲಾಗಿದೆ. ಘಾಜಿಯಾಬಾದ್-ಅಲಿಘಡ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.

ಘಾಜಿಯಾಬಾದ್-ಅಲಿಘಡ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಒಟ್ಟು 118 ಕಿಲೋಮೀಟರ್ ಹೊಂದಿದೆ. ಇದರಲ್ಲಿ 100 ಕಿ.ಮೀ ರಸ್ತೆ ಕಾಮಗಾರಿಯನ್ನು 100 ಗಂಟೆಯಲ್ಲಿ ಪೂರೈಸಲಾಗಿದೆ. ಈ ಮೂಲಕ 1 ಗಂಟೆಯಲ್ಲಿ 1 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ. ಈ ಸಾಧನೆಗೆ ನಿತಿನ್ ಗಡ್ಕರಿ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟರ್ ಮೂಲಕ ಗಡ್ಕರಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

Tap to resize

Latest Videos

undefined

 

ಶೀಘ್ರದಲ್ಲಿ ರೆಡಿಯಾಗ್ತಿದೆ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ: ಕೇವಲ 2.5 ಗಂಟೆಗಳಲ್ಲಿ ಆರಾಮಾಗಿ ಪ್ರಯಾಣ ಮಾಡ್ಬೋದು!

ದೇಶಕ್ಕೆ ಹೆಮ್ಮೆ ತರುವ ಸಂಗತಿ. ಘಾಜಿಯಾಬಾದ್-ಆಲಿಘಡ ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ. 100 ಕಿಲೋಮೀಟರ್ ರಸ್ತೆಯನ್ನು 100ಗಂಟೆಯಲ್ಲಿ ಕಾಮಗಾರಿ ಪೂರೈಸಲಾಗಿದೆ. ಇದು ಭಾರತದಲ್ಲಿ ಮೂಲಸೌಕರ್ಯಕ್ಕೆ ನೀಡುತ್ತಿರುವ ಒತ್ತು ಹಾಗೂ ಪರಿಶ್ರಮದ ಫಲವಾಗಿದೆ. ಈ ವಿಶೇಷ ಮೈಲಿಗಲ್ಲು ನಿರ್ಮಿಸಲು ಕಾರಣರಾದ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

118 ಕಿಲೋಮೀಟರ್ ಉದ್ದರ ಘಾಜಿಯಾಬಾದ್ ಅಲಿಘಡ NH-34 ಎಕ್ಸ್‌ಪ್ರೆಸ್‌ವೇ ಹಲವು ಹಲವು ಹಳ್ಳಿಗಳು, ಪಟ್ಟಣಗಳ ಮೂಲಕ ಹಾದು ಹೋಗಲಿದೆ. ಇದರಿಂದ ಈ ಪ್ರದೇಶಗಳು ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಉತ್ತರ ಪ್ರದೇಶದ ದಾದ್ರಿ, ಗೌತಮ್ ಬುದ್ಧ ನಗರ, ಸಿಕಂದರಾಬಾದ್, ಬುಲಂದಶಹರ್, ಖುರ್ಜಾ ಸೇರಿದಂತೆ ಹಲವು ಪಟ್ಟಣಗಳ ಮೂಲಕ ಹಾದು ಹೋಗಲಿದೆ. ಇದರಿಂದ ಆರ್ಥಿಕ ಪ್ರಗತಿ, ಕೈಗಾರಿಕೆಗಳ ಅಭಿವೃದ್ಧಿ, ಕೃಷಿ, ಶಿಕ್ಷಣ ಸೇರಿದಂತೆ ಸರ್ವತೋಮುಖ ಅಭಿವೃದ್ದಿಗೆ ಈ ಹೆದ್ದಾರಿ ನೆರವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 

 

ಬೆಂ-ಮೈ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾ​ಟ​ಕದ ಅಭಿ​ವೃ​ದ್ಧಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

2023-24ನೇ ಸಾಲಿನ ಹಣಕಾಸು ವರ್ಷದಲ್ಲಿ 12,500ಕಿ.ಮಿ. ಹೆದ್ದಾರಿ ನಿರ್ಮಿಸಲು ಯೋಜಿಸಲಾಗಿದೆ . ಇದರಲ್ಲಿ 118 ಕಿಲೋಮೀಟರ್ ಉದ್ದರ ಘಾಜಿಯಾ-ಆಲಿಘಡ ಹೆದ್ದಾರಿ ಕೂಡ ಸೇರಿದೆ. ಈ ಕಾಮಗಾರಿಗಳನ್ನು ನಿರ್ಮಾಣ ಮಾಡಲು 2023-2024ನೇ ಸಾಲಿಗೆ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ (ಐಎನ್‌ವಿಐಟಿಎಸ್‌) ಮೂಲಕ 10,000 ಕೋಟಿ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ. ಇಲಾಖೆಯು 2023-24 ಸಾಲಿನಲ್ಲಿ 12,000 ಕಿಲೋಮೀಟರ್‌ ರಸ್ತೆ ನಿರ್ಮಿಸಲು ಗುರಿ ಹೊಂದಿದ್ದು ಅದನ್ನು 12,500 ಕಿಲೋಮೀಟರ್‌ವರೆಗೂ ವಿಸ್ತರಿಸಲಿದೆ. ಈ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ನಿಯಮಿತ (ಎನ್‌ಎಚ್‌ಐಡಿಸಿಎಲ್‌) ಹಾಗೂ ಖಾಸಗಿ ಕಂಪನಿಗಳು ನಿರ್ಮಾಣ ಮಾಡಲಿದೆ.

click me!