ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ, ಶೀಘ್ರದಲ್ಲೇ ದ್ವಿಚಕ್ರ, ಆಟೋ ರಿಕ್ಷಾ ಸಂಚಾರ ನಿಷೇಧ!

By Suvarna News  |  First Published Apr 26, 2023, 11:40 AM IST

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಉದ್ಘಾಟನೆಗೆ ಮೊದಲು ಕ್ರೆಡಿಟ್ ವಾರ್ ನಡೆದಿದ್ದರೆ, ಇದೀಗ ಅಪಘಾತಗಳಿಂದ ಸುದ್ದಿಯಾಗುತ್ತಿದೆ. ಸತತ ಆಪಘಾತಗಳಿಂದ ಇದೀಗ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರವಾಹನ, ಆಟೋ ರಿಕ್ಷಾ, ಟ್ರಾಕ್ಟರ್ ಸೇರಿದಂತೆ ಕೃಷಿ ಸಂಬಂಧಿತ ವಾಹನ ನಿಷೇಧಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.


ಬೆಂಗಳೂರು(ಏ.26): ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆ ಮತ್ತೊಂದು ರಾಜಕೀಯ ಬಡಿದಾಟಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಬೆಂಗಳೂರು ಹಾಗೂ ಮೈಸೂರು ನಡುವಿನ ಪ್ರಯಾಣದ ಸಮಯವನ್ನು 90 ನಿಮಿಷಕ್ಕೆ ಇಳಿಸಿರುವ ಈ ರಸ್ತೆ ಹಲವು ಕಾರಣಗಳಿಂದ ದೇಶಾದ್ಯಂತ ಸುದ್ದಿಯಾಗುತ್ತಿದೆ. ಅತ್ಯುತ್ತಮ ರಸ್ತೆ ಅನ್ನೋದು ಒಂದಡೆಯಾದರೆ, ಇದೀಗ ಸರಣಿ ಅಪಘಾತಕ್ಕೆ ಕಾರಣವಾಗುತ್ತಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಸರಾಸರಿ ವೇಗ 120 ರಿಂದ 140 ಕಿ.ಮೀ ಪ್ರತಿ ಗಂಟೆಗೆ. ಇದರಿಂದ ಅಪಘಾತದ ಪ್ರಮಾಣಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ದ್ವಿಚಕ್ರವಾಹನ, ಆಟೋ ರಿಕ್ಷಾ, ಟ್ರಾಕ್ಟರ್ ಸೇರಿದಂತೆ ಕೃಷಿ ಸಂಬಂಧಿತ ವಾಹನಗಳಿಗೆ ನಿಷೇಧ ಹೇರಲು ಪ್ರಸ್ತಾವನೆ ಸಲ್ಲಿಸಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಬಳಿಕ ಸರ್ವೀಸ್ ರಸ್ತೆ ಹಾಗೂ ಕೆಲ ಫ್ಲೈ ಓವರ್ ಕಾಮಾಗಾರಿ ಬಾಕಿ ಉಳಿದಿತ್ತು. ಹೀಗಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಸರ್ವೀಸ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇತ್ತ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ನಾಗರೀಕರ ಪ್ರಜ್ಞೆ ಇಲ್ಲದಂತಾಗಿದೆ. ನಿಯಮ ಉಲ್ಲಂಘಿಸುತ್ತಿರುವ ಕಾರಣ ಸರಣಿ ಅಪಘಾತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ದ್ವಿಚಕ್ರವಾಹನ, ಆಟೋ ರಿಕ್ಷಾ ಹಾಗೂ ಕೃಷಿ ಸಂಬಂಧಿತ ವಾಹನಗಳಿಗೆ ನಿಷೇಧ ಹೇರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.

Tap to resize

Latest Videos

undefined

 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ, ಒಂದೇ ಕುಟುಂಬದ ಐವರು ಸಾವು!

ಅತೀವೇಗ, ಅಡ್ಡಾದಿಡ್ಡಿ ಚಾಲನೆ, ಎಕ್ಸ್‌ಪ್ರೆಸ್‌ವೇ ಅಥವಾ ಹೆದ್ದಾರಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಚಾಲನೆ ಮಾಡುತ್ತಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಅಧಿಕೃತ ಅಧಿಸೂಚೆನೆ ಬಂದ ಬಳಿಕ ನಿರ್ದಿಷ್ಛ ವಾಹನಗಳಿಗೆ ನಿಷೇಧ ಹೇರಲಾಗುತ್ತದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವ ಕಾರಣ ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ. 

ಎಕ್ಸ್‌ಪ್ರೆಸ್‌ವೇನಲ್ಲಿನ ಎಡ ಭಾಗದಲ್ಲಿರುವ ಲೇನ್‌ನಲ್ಲಿ ಟ್ರಕ್ ಹಾಗೂ ಭಾರಿ ಗಾತ್ರದ ವಾಹನಗಳ ಸಂಚರಿಸಬೇಕು. ಮಧ್ಯದ ಲೇನ್‌ನಲ್ಲಿ 80 ಕಿ.ಮೀಗಿಂತ ವೇಗದಲ್ಲಿ ಸಂಚಿರುವ ಕಾರುಗಳು ಸಂಚರಿಸಬೇಕು. ಬಲಭಾಗದ ಲೇನ್ ಓವರ್ ಟೇಕ್ ಮಾಡಲು ಖಾಲಿ ಇರಬೇಕು. ಆದರೆ ಚಾಲಕರು ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಸದ್ಯ ಟ್ರಕ್ ಹಾಗೂ ಭಾರಿ ಘನ ವಾಹನಗಳು ಬಲಭಾಗದ ಲೇನ್ ಮೂಲಕ ಸಾಗುತ್ತಿದೆ. ಸಿಕ್ಕ ಸಿಕ್ಕ ಲೇನ್ ಮೂಲಕ ವಾಹನಗಳು ಸಾಗುತ್ತಿದೆ. ಇದರಿಂದ ಓವರ್ ಟೇಕ್ ಸಮಸ್ಯೆಯಾಗುತ್ತಿದೆ. ಅತೀ ವೇಗದಿಂದ ಆಗಮಿಸುವ ವಾಹನಗಳಿಗೆ ಓವರ್ ಟೇಕ್ ಮಾಡಲು ಲೇನ್ ಇಲ್ಲದಾಗಿದೆ. ವಾಹನಗಳ ನಡುವಿನಿಂದ ಓವರ್ ಟೇಕ್ ಮಾಡುತ್ತಿರುವ ಕಾರಣ ಅಪಘಾತ ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿ ಕಡ್ಡಾಯವಾಗಿ ರಸ್ತೆ ಶಿಸ್ತು ಪಾಲಿಸಬೇಕು. ನಾಗರೀಕ ಪ್ರಜ್ಞೆ ಇರಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು-ಬೆಂಗಳೂರು ಟೋಲ್ ದರ ಮತ್ತೆ ಹೆಚ್ಚಳ: NHAI ಜತೆ ಚರ್ಚಿಸುತ್ತೇನೆ: ಪ್ರತಾಪ್ ಸಿಂಹ

ಕೆಲ ದಿನಗಳ ಹಿಂದೆ ಅಲ್ಟೋ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ವೇಗವಾಗಿ ಸಂಚರಿಸುತ್ತಿದ್ದ ಇನೋವಾ ಕಾರಿಗೆ ಗುದ್ದಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು. ಲೇನ್ ಡಿಸಿಪ್ಲೀನ್, ಸಿವಿಕ್ ಸೆನ್ಸ್ ಅತ್ಯವಶ್ಯಕ. ರಸ್ತೆ ನಿಯಮ ಉಲ್ಲಂಘನೆ ಅಪಾಯಕ್ಕೆ ಅಹ್ವಾನ ನೀಡಿದಂತೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. 
 

click me!