ಇನ್ನು ವಿಮಾನ ಟಿಕೆಟ್ ಬೆಲೆ ಕೇವಲ 500 ರೂ, 1000 ರೂ, ಮೊದಲ ಎಲೆಕ್ಟ್ರಿಕ್ ಫ್ಲೈಟ್ ಹಾರಾಟ ಆರಂಭ

Published : Aug 19, 2026, 11:59 AM IST
electric flight x1

ಸಾರಾಂಶ

ವಿಮಾನ ಟಿಕೆಟ್ ಬೆಲೆ ದುಬಾರಿ. ಹೀಗಾಗಿ ಜನಸಾಮಾನ್ಯರು 500 ರೂ, 1000 ರೂಪಾಯಿ ಕೊಟ್ಟು ರೈಲು, ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ಇನ್ನುಮುಂದೆ ವಿಮಾನ ಬೆಲೆ ಇಳಿಕೆಯಾಗಲಿದೆ.ಕಾರಣ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ನಡೆಸಿದೆ.

ನ್ಯೂಯಾರ್ಕ್ (ಆ.19) ಭಾರತದಲ್ಲಿ ಉಡಾನ್ ಯೋಜನೆ ಮೂಲಕ ವಿಮಾನ ನಿಲ್ದಾಣಗಳು, ದೇಶಿಯ ಮಟ್ಟದಲ್ಲಿ ಹೊಸ ವಿಮಾನ ಸಂಪರ್ಕ ಸೇವೆಗಳು ಲಭ್ಯವಾಗುತ್ತಿದೆ. ಆದರೆ ಜನಸಾಮಾನ್ಯರಿಗೆ ವಿಮಾನ ಪ್ರಯಾಣ ಹೊರೆಯಾಗಲಿದೆ. ಇದೀಗ ಅತೀ ಕಡಿಮೆ ಬೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುವ ದಿನ ಬರುತ್ತಿದೆ. ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಯಶಸ್ವಿಯಾಗಿ ಹಾರಾಟ ನಡೆಸಿದೆ. 27 ನಿಮಿಷಗಳ ಕಾಲ ಹಾರಾಟ ನಡೆಸಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಇದಕ್ಕೆ ಖರ್ಚಾದ ವಿದ್ಯುತ್ ವೆಚ್ಚ ಕೇವಲ 500 ರೂಪಾಯಿ ಮಾತ್ರ.

500 ರೂಪಾಯಿ ವಿದ್ಯುತ್ ವೆಚ್ಚ

ನ್ಯೂಯಾರ್ಕ್ ಮೂಲಕ ಹಾರ್ಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿ ಆಲ್ ಎಲೆಕ್ಟ್ರಿಕ್ 'X1 ವಿಮಾನ ಮೊದಲ ಹಾರಾಟ ನಡೆಸುವ ಮೂಲಕ ಯಶಸ್ವಿಯಾಗಿದೆ. ನ್ಯೂಯಾರ್ಕ್‌ನ ಪ್ಲಾಟ್ಸ್‌ಬರ್ಗ್ ವಿಮಾನ ನಿಲ್ದಾಣದಿಂದ ಪ್ರಾಯೋಗಿಗ ಹಾರಾಟ ನಡೆಸಲಾಗಿದೆ. ವಿಶೇಷ ಅಂದರೆ ವಿದ್ಯುತ್ ವೆಚ್ಚ ಕೇವಲ 5 ಅಮೆರಿಕನ್ ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ 500 ರೂಪಾಯಿ. ಇಡೀ ವಿಮಾನದ ವಿದ್ಯುತ್ ವೆಚ್ಚ ಕೇವಲ 500 ರೂಪಾಯಿ. ಹೀಗಾಗಿ ಈ ರೀತಿಯ ವಿಮಾನ ಪ್ರಯಾಣಕ್ಕೆ ಒಬ್ಬರಿಗೆ 300 ರೂಪಾಯಿಯಿಂದ ಟಿಕೆಟ್ ಆರಂಭಗೊಳ್ಳುವ ಸಾಧ್ಯತೆ ಇದೆ. 15 ರಿಂದ 20 ಮಂದಿ ಸಾಮರ್ಥ್ಯದ ಸಣ್ಣ ವಿಮಾನ ಇದಾಗಿದೆ. ವಿಶೇಷ ಅಂದರೆ ಲಕ್ಷಾಂತರ ರೂಪಾಯಿ ಇಂಧನ ವೆಚ್ಚಕ್ಕಿಂತ ಕೇವಲ 500 ರೂಪಾಯಿಯಲ್ಲಿ ಅರ್ಧ ಗಂಟೆ ಈ ವಿಮಾನ ಹಾರಾಟ ನಡೆಸಿದೆ.

ಹಾರ್ಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ X1 ಎಲೆಕ್ಟ್ರಿಕ್ ವಿಮಾನ ಸಂಪೂರ್ಣ ಬ್ಯಾಟರಿ ಚಾಲಿತ ವಿಮಾನವಾಗಿದೆ. ಟೇಕ್ ಆಫ್ ಬಳಿಕ 1,100 ಅಡಿ ಎತ್ತರಕ್ಕೆ ಹಾರಿದ ವಿಮಾನ ಯಶಸ್ವಿಯಾಗಿ 27 ನಿಮಿಷಗಳ ಕಾಲ ಹಾರಾಟ ನಡೆಸಿದೆ. ವಿಮಾನದ ರೆಕ್ಕೆ ಅಗಹಲ 106 ಅಡಿ ಹೊಂದಿದೆ. 76 ಅಡಿ ಉದ್ದ, 11.3 ಟನ್ ತೂಕದ ಈ ವಿಮಾನ ಹೊಸ ದಾಖಲೆ ಬರೆದಿದೆ. ಇದುವರೆಗೆ ಎಲೆಕ್ಟ್ರಿಕ್ ವಿಮಾನಗಳ ಪ್ರಯೋಗದಲ್ಲಿ ಈ X1 ವಿಮಾನ ಆಗಸದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ ಅತೀ ದೊಡ್ಡ ಬ್ಯಾಟರಿ ಚಾಲಿತ ವಿಮಾನ ಎಂಬ ದಾಖಲೆ ಬರೆದಿದೆ.

ಬ್ಯಾಟರಿ ಚಾಲಿತ ವಿಮಾನ ಬರೋಬ್ಬರಿ 27 ನಿಮಿಷಗಳ ಕಾಲ ಹಾರಾಟ ನಡೆಸಿ ಇತಿಹಾಸ ರಚಿಸಿದೆ. ಈ ಮೂಲಕ ವಿಮಾನ ಕ್ಷೇತ್ರದಲ್ಲೂ ಬ್ಯಾಟರಿ ಚಾಲಿತ ವಿಮಾನಗಳ ಅಭಿವೃದ್ಧಿಗೆ ಈ X1 ವಿಮಾನ ನಾಂದಿ ಹಾಡಲಿದೆ. ಇದೀಗ ಹಾರ್ಟ್ ಏವಿಯೇಶನ್ ಸಂಸ್ಥೆ ES-30 ಬ್ಯಾಟರಿ ಚಾಲಿತ ವಿಮಾನ ಅಬಿವೃದ್ಧಿಪಡಿಸುತ್ತಿದೆ. ಇದು 30 ಮಂದಿ ಪ್ರಯಾಣಿಕರ ಸಾಮರ್ಥ್ಯದ ವಿಮಾನವಾಗಿದೆ. 2031ರ ವೇಳೆಗ ಈ ವಿಮಾನ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.

ಇಂಧನ ಚಾಲಿತ ವಿಮಾನಗಳ ಬೆಲೆ ಕನಿಷ್ಠ 2000 ರೂಪಾಯಿ ಇದೆ. ಆದರೆ ಬ್ಯಾಟರಿ ಚಾಲಿತ ವಿಮಾನದ ವೆಚ್ಚ ಇಂಧನಕ್ಕೆ ಹೋಲಿಸಿದರೆ ಶೇಕಡಾ 40ರಷ್ಟು ಅಗ್ಗವಾಗಿದೆ. ಹೀಗಾಗಿ ಬ್ಯಾಟರಿ ಚಾಲಿತ ವಿಮಾನಗಳ ನಿರ್ವಹಣೆ ಅತೀ ಕಡಿಮೆ ದರದಲ್ಲಿ ನಡೆಯಲಿದೆ. ಇಷ್ಟೇ ಅಲ್ಲ ಇದರಿಂದ ಪ್ರಯಾಣಿಕರ ಟಿಕೆಟ್ ಬೆಲೆಯೂ ಭಾರಿ ಇಳಿಕೆಯಾಗಲಿದೆ. ಯುನೈಟೆಡ್ ಏರ್‌ಲೈನ್ಸ್, ಏರ್ ಕೆನಡಾ ಸೇರಿದಂತೆ ಕೆಲ ವಿಮಾನಯಾನ ಸಂಸ್ಥೆಗಳು ಬ್ಯಾಟರಿ ಚಾಲಿತ ವಿಮಾನಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿದೆ.

PREV
Read more Articles on
click me!

Recommended Stories

Mahindra Thar Facelift: ಹೊಸ ಲುಕ್, ಹೈ-ಟೆಕ್ ಫೀಚರ್‌ಗಳೊಂದಿಗೆ ರಸ್ತೆಗಿಳಿಯಲು ಸಜ್ಜಾದ ಹೊಸ ಥಾರ್
ಅಕ್ಟೋಬರ್ 2028ರಿಂದ ವಾಹನಗಳ ನಡುವೆ ವಿ2ವಿ ಕಡ್ಡಾಯ, ಏನಿದು ಕೇಂದ್ರ ಸರ್ಕಾರದ ಹೊಸ ನೀತಿ?