
ನವದೆಹಲಿ (ಆ.04) ಕೇಂದ್ರ ಬಿಜೆಪಿ ಸರ್ಕಾರ ವಾಹನಗಳ ನೀತಿ, ನಿಯಮಗಳಲ್ಲಿ ಹಲವು ಬದಲಾವಣೆ ತಂದಿದೆ. ವಾಹನಗಳಲ್ಲಿ ಹಲವು ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಲಾಗಿದೆ. ಇದೀಗ ನಿತಿನ್ ಗಡ್ಕರಿ ನೇತೃತ್ವದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮತ್ತೊಂದು ಕಟ್ಟು ನಿಟ್ಟಿನ ನೀತಿ ಜಾರಿಗೆ ತರುತ್ತಿದೆ. ಅಕ್ಟೋಬರ್ 2028ರಿಂದ ಭಾರತದಲ್ಲಿ ಎಲ್ಲಾ ವಾಹನಗಳಲ್ಲಿ ವಿ2ವಿ ಕಡ್ಡಾಯ ಮಾಡಲಾಗಿದೆ. ಹೌದು, ಹೊಸ ವಾಹನಗಳಲ್ಲಿ ವಿ2ವಿ ಸಂಪರ್ಕ ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ರಸ್ತೆ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುವ ಸಲುವಾಗಿ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ವಿ2ವಿ ಎಂದರೆ ವೆಹಿಕಲ್ ಟು ವೆಹಿಕಲ್. ವಾಹನಗಳ ನಡುವೆ ರಿಯಲ್ ಟೈಮ್‌ನಲ್ಲಿ ವೈಯರ್‌ಲೆಸ್ ಮಾಹಿತಿ ವಿನಿಮಯ ಮಾಡುವ ತಂತ್ರಜ್ಞಾನ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವಾಗ ಪಕ್ಕದಲ್ಲಿ, ಎದುರಿನಲ್ಲಿ ಅಥವಾ ಹಿಂಬದಿಯಲ್ಲಿ ಅಥವಾ ಅಕ್ಕ ಪಕ್ಕದ ವಾಹನಗಳ ಮಾಹಿತಿಯನ್ನು ಸಿಗ್ನಲ್ ಮೂಲಕ ರವಾನಿಸುತ್ತದೆ. ಇತರ ವಾಹನದ ವೇಗ, ಸ್ಥಳ, ಸಾಗುತ್ತಿರುವ ದಿಕ್ಕು, ಬ್ರೇಕಿಂಗ್ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಿಗ್ನಲ್ ಮೂಲಕ ನೀಡಲಿದೆ. ಇದರಿಂದ ಚಾಲಕನಿಗೆ ತನ್ನ ಆಸುಪಾಸಿನ ವಾಹನಗಳ ಮಾಹಿತಿ ತಿಳಿಯಲಿದೆ.
ದೀರ್ಘ ತಿರುವು, ಬ್ಲಂಡ್ ಕರ್ವ್, ಸಿಗ್ನಲ್, ರಾಂಗ್ ಸೈಡ್‌ನಲ್ಲಿ ಬರವು ವಾಹನಗಳ ಕುರಿತು ವಿಟುವಿ ತಂತ್ರಜ್ಞಾನ ಸಿಗ್ನಲ್ ನೀಡಲಿದೆ. ವಿ2ವಿ ಕಮ್ಯೂನಿಕೇಶನ್ ಎಲ್ಲಾ ವಾಹನಗಳಲ್ಲಿ ಅಳವಡಿಸಲಾಗುತ್ತದೆ. ಈ ತಂತ್ರಜ್ಞಾನದಿಂದ ಚಾಲಕರಿಗೆ ಮುಂಚಿತವಾಗಿ ಎಚ್ಚರಿಕೆ ಸಿಗ್ನಲ್ ನೀಡಲಿದೆ. ಅಕ್ಟೋಬರಿ 2028ರಿಂದ ಭಾರತದಲ್ಲಿ ಉತ್ಪಾದನೆಯಾಗುವ ವಾಹನಗಳಲ್ಲಿ ವಿ2ವಿ ತಂತ್ರಜ್ಞಾನ ಕಡ್ಡಾಯವಾಗಿದೆ.
ಸದ್ಯ ಅಡಾಸ್ ಲೆವೆನ್ ತಂತ್ರಜ್ಞಾನಗಳು ಕಾರಿನಲ್ಲಿದೆ. ಸೆನ್ಸಾರ್ ಕ್ಯಾಮೆರಾ, ರೆಡಾರ್ ಸೆನ್ಸಾರ್‌ಗಳಿವೆ. ಆದರೆ ಈ ಎಲ್ಲಾ ತಂತ್ರಜ್ಞಾನಗಳು ತನ್ನ ನೋಟಕ್ಕೆ ಕಾಣುವ ವಾಹನಗಳ ಬಗ್ಗೆ ಸೂಚಿಸುತ್ತದೆ. ಆದರೆ ವಿ2ವಿ ತಂತ್ರಜ್ಞಾನ ಕಣ್ಣಿಗೆ ಕಾಣದ, ತಿರುವಿನಲ್ಲಿರುವ ವಾಹನಗಳ ಬಗ್ಗೆಯೂ ಸೂಚನೆ ನೀಡುತ್ತದೆ. ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿರುವಾಗ ಎದುರಿನ ವಾಹನ ದಿಢೀರ್ ಬ್ರೇಕ್ ಹಾಕಿದರೆ ತಕ್ಷಣವೇ ಸಿಗ್ನಲ್ ನೀಡುತ್ತದೆ. ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಬರುತ್ತಿದ್ದರೆ ಮೊದಲೇ ಸಿಗ್ನಲ್ ನೀಡಲಿದೆ. ಇದರಿಂದ ರಸ್ತೆ ಸುರಕ್ಷತೆಗೆ ನೆರವಾಗಲಿದೆ.
ಎರಡು ಹಂತಗಳಲ್ಲಿ ವಾಹನಗಳಲ್ಲಿ ವಿ2ವಿ ಸಂಪರ್ಕ ಅಳವಡಿತೆಯಾಗಲಿದೆ. ಅಕ್ಟೋಬರ್ 1, 2027ರಿಂದ ಮೊದಲ ಹಂತದಲ್ಲಿ ಬೈಕ್ ಸ್ಕೂಟರ್ ಸೇರಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು ಸೇರಿದಂತೆ ಪ್ಯಾಸೇಂಜರ್ ವಾಹನ, ಸರಕು ಸಾಗಾಣೆ ವಾಹನಗಳಲ್ಲಿ ವಿ2ವಿ ತಂತ್ರಜ್ಞಾನ ಅಳವಡಿಕೆಯಾಗಲಿದೆ. ಎರಡನೇ ಹಂತದಲ್ಲಿ ಎಲ್, ಎಂ, ಹಾಗೂ ಎನ್ ವಿಭಾಗದ ವಾಹನಗಳಲ್ಲಿ ಅಳವಡಿಕೆಯಾಗಲಿದೆ.