ಕುಡಿದ ಮತ್ತಿನಲ್ಲಿ ಪೊಲೀಸ್‌ಗೆ ಒದ್ದು, ಕಪಾಳಮೋಕ್ಷ ಮಾಡಿದ ಯುವತಿ!

By Suvarna News  |  First Published Dec 7, 2020, 8:34 PM IST

ರಾತ್ರಿ ವೇಳೆ ಟ್ರಾಫಿಕ್ ಪೊಲೀಸರಿಗೆ ಅತೀ ಹೆಚ್ಚು ಸವಾಲು ಎದುರಾಗುತ್ತವೆ. ಕಾರಣ ಡ್ರಂಕ್ ಅಂಡ್ ಡ್ರೈವ್ ಪರಿಶೀಲನೆ ಕಠಿಣ ಸವಾಲೇ ಸರಿ. ಹೀಗೆ ಮದ್ಯಪಾನ ಪರಿಶೀಲನೆ ನಡೆಸುತ್ತಿದ್ದ ಪೊಲೀಸರಿಗೆ ಕಾರಿನಲ್ಲಿ ಬಂದ ಕಂಠಪೂರ್ತಿ ಕುಡಿದ ಯುವತಿ ರಂಪಾಟ ನಡೆಸಿದ ಘಟನೆ ನಡೆದಿದೆ. ಪೊಲೀಸ್‌ಗೆ ಒದ್ದು, ಕಪಾಳಕ್ಕೆ ಭಾರಿಸಿದ್ದಾಳೆ.
 


ಚೆನ್ನೈ(ಡಿ.07):  ಡ್ರಿಂಕ್ ಅಂಡ್ ಡ್ರೈವ್ ಅತೀ ದೊಡ್ಡ ಅಪರಾಧವಾಗಿದೆ. ಹೀಗಾಗಿ ಟ್ರಾಫಿಕ್ ಉಲ್ಲಂಘನೆಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ದುಬಾರಿ ದಂಡ ಹಾಗೂ ಕಠಿಣ ಶಿಕ್ಷೆ ಎದುರಿಸಲೇಬೇಕು. ಹೀಗಾಗಿ ಚೆನ್ನೈ ನಗರದಲ್ಲಿ ಟ್ರಾಫಿಕ್ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೋಕ್ಸ್‌ವ್ಯಾಗನ್ ಪೊಲೋ ಕಾರಿನಲ್ಲಿ ಬಂದ ಇಬ್ಬರು ಕಂಠ ಪೂರ್ತಿ ಕುಡಿದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.

ಕಂಠ ಪೂರ್ತಿ ಕುಡಿದು ಕಾರಿನಲ್ಲಿ ಸ್ಟಂಟ್, ಮೂವರು ಯುವಕರು ಅರೆಸ್ಟ್!.. 

Latest Videos

undefined

ಕಾರು ಚಲಾಯಿಸಿಕೊಂಡ ಸೇಶು ಪ್ರಸಾದ್ ಕಂಠ ಪೂರ್ತಿ ಕುಡಿದಿದ್ದ. ಕಾರನ್ನು ತಡೆದ ಪೊಲೀಸರು ಮದ್ಯಪಾನ ಲೆವಲ್ ಪರಿಶೀಲಿಸಿದ್ದಾರೆ. ಈ ವೇಳೆ ಅಧಿಕವಾಗಿ ಮದ್ಯಪಾನ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕಾರು ವಶಕ್ಕೆ ಪಡೆದು ದಂಡ ಹಾಕಲು ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ 28ರ ಹರೆಯದ ಯುವತಿ ಕಾಮಿನಿ ಕಾರಿನಿಂದ ಇಳಿದು ಪೊಲೀಸರ ವಿರುದ್ಧ ಹಲ್ಲೆಗೆ ಮುಂದಾಗಿದ್ದಾಳೆ.

ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡವರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸ್!.

ಪೊಲೀಸಲು ವಾಗ್ವಾದ ನಡೆಸದಂತೆ ಖಡಕ್ ಸೂಚನೆ ನೀಡಿದ್ದಾರೆ. ಮೊದಲೇ ಕುಡಿದ್ದ ಯುವತಿ ನೇರವಾಗಿ ಪೊಲೀಸ್‌ಗೆ ಒದ್ದು ಕಪಾಳಕ್ಕೆ ಭಾರಿಸಿದ್ದಾಳೆ. ಇತ್ತ ಟ್ರಾಫಿಕ್ ನಿಯಮ ಮಾತ್ರವಲ್ಲ, ಕರ್ತವ್ಯದಲ್ಲಿ  ಪೋಲೀಸ್‌ಗೆ ಅಡ್ಡಿ ಪಡಿಸಿ ಕಾನೂನು ಉಲ್ಲಂಘಿಸಿದ ಯುವತಿ ಮೇಲೆ ಹಲವು ಕೇಸ್ ದಾಖಲಿಸಿದ್ದಾರೆ.

ಸೇಶು ಪ್ರಸಾದ್ ಹಾಗೂ ಯುವತಿಯನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಡಿದು ಕಾರು ಚಲಾಯಿಸಿದ ಕಾರಣಕ್ಕೆ ಸೇಶು ಪ್ರಸಾದ್ ಮೇಲೆ ಡ್ರಿಂಕ್ ಡ್ರೈವ್ ಪ್ರಕರಣ ದಾಖಲಾಗಿದೆ. ಇತ್ತ ಯುವತಿ ಮೇಲೆ ಅಶ್ಲೀಲ ಪದ ಬಳಕೆ294(b),ಕುಡಿದು ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ 323 ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಸೆಕ್ಷನ್ 353 ಕೇಸ್ ದಾಖಲಾಗಿದೆ.

 

click me!