ಕಂಠ ಪೂರ್ತಿ ಕುಡಿದು ಕಾರಿನಲ್ಲಿ ಸ್ಟಂಟ್, ಮೂವರು ಯುವಕರು ಅರೆಸ್ಟ್!

Published : Dec 05, 2020, 06:41 PM IST
ಕಂಠ ಪೂರ್ತಿ ಕುಡಿದು ಕಾರಿನಲ್ಲಿ ಸ್ಟಂಟ್, ಮೂವರು ಯುವಕರು ಅರೆಸ್ಟ್!

ಸಾರಾಂಶ

ಡ್ರಿಂಕ್ ಅಂಡ್ ಡ್ರೈವ್ ಬಹುದೊಡ್ಡ ಅಪರಾಧವಾಗಿದೆ. ಇನ್ನು ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಕುಡಿದು ವಾಹನದಲ್ಲಿ ಸ್ಟಂಟ್ ಮಾಡುವುದು ಅಪರಾಧವಾಗಿದೆ. ಹೀಗೆ ನಿಯಮ ಉಲ್ಲಂಘಿಸಿ, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಮೂವರು ಯುವಕರು ಪೊಲೀಸರು ಅತಿಥಿಗಳಾಗಿದ್ದಾರೆ.  

ಮುಂಬೈ(ಡಿ.05): ಯುವಕರ ಗುಂಪೊಂಂದು ಕುಡಿಯುತ್ತಾ, ಕಾರಿನಲ್ಲಿ ತಿರುಗಾಡುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಮಾತ್ರವಲ್ಲ ಅಪಾಯವನ್ನುಂಟು ಮಾಡುತ್ತಿದ್ದ ಮೂವರು ಯುವಕರನ್ನು ಮುಂಬೈ ಪೊಲೀಸರು ಬಂದಿಸಿದ್ದಾರೆ. 

ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ; ಕಳೆದೆರಡು ವರ್ಷದಲ್ಲೇ ಗರಿಷ್ಠ!

ಮುಂಬೈ ವೆಸ್ಟರ್ನ್ ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿ ಕಿಟಕಿಯಿಂದ ಹೊರಬಂದು ಕುಳಿತು, ಮದ್ಯಪಾನ ಮಾಡುತ್ತಾ ಸಾಗಿದ್ದಾರೆ. ಅದು ಅತ್ಯಂತ ಅಪಾಯಕಾರಿಯೂ ಹೌದು. ಯುವಕರ ಪುಂಡಾಟವನ್ನು ಹಿಂಬದಿ ಸವಾರರು ವಿಡಿಯೋ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

ತಕ್ಷಣವೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಚಲಿಸುವ ಕಾರಿನಲ್ಲಿ ಮದ್ಯಪಾನ ಮಾಡಿದ ಮೂವರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಯುವಕರು ಈ ರೀತಿ ಪುಂಡಾಟ ಮಾಡಿದ್ದಾರೆ. ಈ ಯುವಕರ ಮೇಲೆ ಮುಂಬೈ ಪೊಲೀಸರು ರ್ಯಾಶ್ ಹಾಗೂ ನಿರ್ಲಕ್ಷ್ಯತನದ ಡ್ರೈವಿಂಗ್ ಕಾರಣ ಸೆಕ್ಷನ್ 279, ಅಪಾಯಕಾರಿ ಸ್ಟಂಟ್‌ಗಾಗಿ ಸೆಕ್ಷನ್ 336 ಸೇರಿದಂತೆ ಕೆಲ ಪ್ರಕರಣಗಳನ್ನು ದಾಖಲಿಸಿದ್ದಾರೆ.
 

PREV
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು