ಒಂದೊಂದು ಕಳ್ಳರ ಮನೋಭಾವವೇ ವಿಚಿತ್ರ. ಇಲ್ಲೊಬ್ಬ ಕಳ್ಳ, ರಾತ್ರಿಯಲ್ಲಾ ಕಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಬೆಳಗ್ಗೆ ದುಬಾರಿ ಕಾರು ಖರೀದಿಸಿ, ಸಮಾಜ ಸೇವೆ ಮಾಡಿಕೊಂಡು ತಿರುಗಾಡುತ್ತಿದ್ದ. ಕೊನೆಗೂ ಈ ಚಾಲಕಿ ಕಳ್ಳ ಸಿಕ್ಕಿ ಬಿದಿದ್ದಾನೆ. ಹೆಚ್ಚಿನ ವಿವರ ಇಲ್ಲಿದೆ.
ದೆಹಲಿ(ಜ.10): ಕಳ್ಳರು, ಕಳ್ಳತನ ಕುರಿತ ಹಲವು ವರದಿಗಳು, ಇತಿಹಾಸ, ಚಿತ್ರ ವಿಚಿತ್ರ ಘಟನೆಗಳನ್ನು ಹೆಚ್ಚಾಗಿ ಎಲ್ಲರು ತಿಳಿದಿರುತ್ತಾರೆ. ಇದೀಗ ರಾತ್ರಿ ಕಳ್ಳತನ ಮಾಡಿ ಬೆಳಗ್ಗೆ ಶೋಕಿ ಮಾಡುವ ಜೊತೆಗೆ ಸಮಾಜ ಸೇವೆ ಮಾಡುವ ಕಳ್ಳನ ಮೊಹಮ್ಮದ್ ಇರ್ಫಾನ್‌ನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈತನ ಹಿಸ್ಟರಿ ವಿಚಿತ್ರವಾಗಿದೆ.
ಹೊಸ ವರ್ಷದ ಸಂಭ್ರಮದಲ್ಲಿದ್ದ ನೌಕರನಿಗೆ ಶಾಕ್; ಮರ್ಸಿಡೀಸ್ ಕಂಪನಿಯ 50 ಕಾರು ಪುಡಿ ಪುಡಿ!.
ಹಾಗಾಂತ ಕಳ್ಳತನ ಮಾಡಿ ಬಡವರಿಗೆ ಹಂಚುವ ಸಮಾಧ ಸುಧಾಕರನೂ ಅಲ್ಲ. ಹೆಸರಿಗೆ ಸಮಾಜ ಸೇವೆ. ಅಸಲಿಗೆ ಶೋಕಿ ಹುಚ್ಚು. ಬ್ಯಾಂಕ್ ಬಳಿ ಹಲವರನ್ನು ವಂಚಿಸಿ ಹಣ ದೋಚಿದ ಪ್ರಕರಣಗಳು ಈತನ ಮೇಲಿದೆ. ಶ್ರೀಮಂತರ ಮನೆಗೆ ನುಗ್ಗಿ ಹಣ ದೋಚುವ ಈತ, ಈ ಹಣದಲ್ಲಿ ಜಾಗ್ವಾರ್, ಆಡಿ, ಮರ್ಸಿಡೀಸ್ ಬೆಂಝ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದ.
ತನ್ನ ಕಳ್ಳತನ ಪತ್ತೆಯಾಗದಿರಲು ಸಮಾಜ ಸೇವೆಯನ್ನೂ ಮಾಡುತ್ತಿದ್ದ. ಉಚಿತ ಹೆಲ್ತ್ ಕ್ಯಾಂಪ್, ಬಡವರಿಗೆ ಹಣ ಹಂಚಿಕೆ ಸೇರಿದಂತೆ ಕೆಲ ಸಾಮಾಜಿಕ ಕೆಲಸಗಳು ಈತ ಮಾಡಿದ್ದಾನೆ. ಇಷ್ಟೇ ಅಲ್ಲ ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗೆ ತನ್ನ ಹುಟ್ಟೂರಾದ ಬಿಹಾರದ ಸೀತಾಮಾರ್ಹಿಯಲ್ಲಿ ಅಭ್ಯರ್ಥಿಯಾಗಿದ್ದ. ದೆಹಲಿ, ಪಂಜಾಬ್ ಸೇರಿದಂತೆ ಹಲವು ಕಡೆಗಳಲ್ಲಿ ಈತ ಹಣ ದರೋಡೆ ಮಾಡಿದ್ದಾನೆ.
ಶ್ರೀಮಂತರ ಮನೆಗೆ ನುಗ್ಗಿ ಕೇವಲ ಹಣ ಮತ್ತು ಚಿನ್ನಾಭರ ಮಾತ್ರ ದೋಚುತ್ತಿದ್ದ. ಬಹುದೊಡ್ಡ ಗ್ಯಾಂಗ್ ಬಳಿಸಿ ಈ ಕೃತ್ಯ ಎಸಗುತ್ತಿದ್ದ. ದೆಹಲಿ ದರೋಡೆ ಪ್ರಕರಣದ ಜಾಡು ಬೆನ್ನಟ್ಟಿದ ಪೊಲೀಸರಿಗೆ ಕೊನೆಗೂ ಈ ಚಾಲಕಿ ಕಳ್ಳ ಮೊಹಮ್ಮದ್ ಇರ್ಫಾನ್ ಸಿಕ್ಕಿಬಿದ್ದಿದ್ದಾನೆ. ಈತನಿಂದ ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ