BMW iX ಎಲೆಕ್ಟ್ರಿಕ್ ಕಾರು ಖರೀದಿಸಿ ಪರದಾಡಿದ ಬಾಲಿವುಡ್ ನಟಿ, ವಿಡಿಯೋ ವೈರಲ್!

Published : Sep 24, 2023, 05:50 PM IST
BMW iX ಎಲೆಕ್ಟ್ರಿಕ್ ಕಾರು ಖರೀದಿಸಿ ಪರದಾಡಿದ ಬಾಲಿವುಡ್ ನಟಿ, ವಿಡಿಯೋ ವೈರಲ್!

ಸಾರಾಂಶ

ಬಾಲಿವುಡ್ ನಟಿ ನುಸ್ರತ್ ಬರೂಚಾ ಹೊಚ್ಚ ಹೊಸ BMW iX ಎಲೆಕ್ಟ್ರಿಕ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಬಳಿಕ ಹೊಸ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟಿಗೆ ಸಂಕಷ್ಟ ಎದುರಾಗಿದೆ. ಹೊಸ ಕಾರಿನಿಂದ ಹಲವು ಹೊತ್ತು ಪರದಾಡಿದ್ದಾರೆ.  

ಮುಂಬೈ(ಸೆ.24) ಬಾಲಿವುಡ್ ಸೆಲೆಬ್ರೆಟಿಗಳು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ತಮ್ಮ ಐಷಾರಾಮಿ ಕಾರುಗಳ ಮೂಲಕ ಆಗಮಿಸಿ ಬಳಿಕ ವಿಮಾನದ ಮೂಲಕ ಪ್ರಯಾಣ ಮುಂದುವರಿಸುತ್ತಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಬಾಡಿಗಾರ್ಡ್, ಸಹಾಯಕರು ಸೇರಿದಂತೆ ಹಲವು ನೆರವಿಗೆ ಇರುತ್ತಾರೆ. ಆದರೆ ನಟಿ ನುಸ್ರುತ್ ಬರೂಚಾ ಮುಂಬೈ ವಿಮಾನ ನಿಲ್ದಾಣಕ್ಕೆ ತಮ್ಮ ಕುಟುಂಬ ಸದಸ್ಯರ ಜೊತೆ ಆಗಮಿಸಿದ್ದಾರೆ.  ತಮ್ಮ ಲಗೇಜ್ ಬ್ಯಾಗ್‌ಗಳನ್ನು ತೆಗೆದ ಬಳಿಕ ನುಸ್ರತ್‌ಗೆ  ಕಾರಿನ ಬೂಟ್ ಡೋರ್ ಮುಚ್ಚಲು ತೀವ್ರವವಾಗಿ ಪರದಾಡಿದ್ದಾರೆ. ಅದೇನೇ ಮಾಡಿದರೂ ಕಾರಿನ ಬೂಟ್ ಡೂರ್ ಕ್ಲೋಸ್ ಮಾಡಲು ಸಾಧ್ಯವಾಗಲಿಲ್ಲ. ಈ ವಿಡಿಯೋ ವೈರಲ್ ಆಗಿದೆ.

ನುಸ್ರತ್ ಬರೂಚ್ ಇತ್ತೀಚೆಗೆ ಹೊಚ್ಚ ಹೊಸ BMW iX ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಕೆಂಪು ಬಣ್ಣದ ಈ ಕಾರು ಅತ್ಯಾಧುನಿಕ ಫೀಚರ್ಸ್, ತಂತ್ರಜ್ಞಾನ ಹೊಂದಿದೆ. ಈ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನುಸ್ರತ್, ಕಾರಿನ ಬೂಟ್ ಡೋರ್ ತೆರೆದು ವಿಮಾನ ನಿಲ್ದಾಣದ ಸಿಬ್ಬಂದಿಗೆ ಲಗೇಜ್ ಎತ್ತಿಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ನುಸ್ರತ್ ತಮ್ಮ ತಾಯಿ ಹಾಗೂ ಸಹೋಹದರಿಗೆ ಬಾಯ್ ಬಾಯ್ ಹೇಳಿ ನಿಲ್ದಾಣದೊಳಗೆ ಪ್ರವೇಶಿಸಲು ಮುಂದಾಗಿದ್ದಾರೆ. ಇತ್ತ ಗೇಜ್ ಎತ್ತಿಟ್ಟ ಬಳಿಕ ನುಸ್ರತ್ ಅಟೋಮ್ಯಾಟಿಕ್ ಬಟನ್ ಪ್ರೆಸ್ ಮಾಡಿದ್ದಾರೆ. ಈ ವೇಳೆ ಬೂಟ್ ಡೂರ್ ನಿಧಾನವಾಗಿ ಮುಚ್ಚಲು ಆರಂಭಿಸಿದೆ. ಆದರೆ ಮುಚ್ಚಿದ ಬೆನ್ನಲ್ಲೇ ಮತ್ತೆ ತೆರೆದುಕೊಂಡಿದೆ.

ಟೆಸ್ಲಾ ಕಾರಿನ ನಂಬರ್ ಪ್ಲೇಟ್ ಮೇಲೆ ಕನ್ನಡ, ಅಮೆರಿಕದಲ್ಲಿ ಟೆಸ್ಲಾಗೆ ಮನಸೋತ ಶಿವರಾಜ್ ಕುಮಾರ್!

ಅದೆಷ್ಟೇ ಬಾರಿ ಪ್ರಯತ್ನಿಸಿದರೂ ಕಾರಿನ ಡೋರ್ ಮುಚ್ಚಲು ಸಾಧ್ಯವಾಗಲೇ ಇಲ್ಲ. ಇತ್ತ ಅಭಿಮಾನಿಗಳು ನುಸ್ರತ್ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದಾರೆ. ನುಸ್ರತ್ ಹಲವು ಬಾರಿ ಪ್ರಯತ್ನಿಸಿ ಸುಸ್ತಾಗಿದ್ದಾರೆ. ಬಳಿಕ ತಾಯಿಗೆ ಹೇಳಿ ಬೂಟ್ ಡೋರ್ ಕ್ಲೋಸ್ ಮಾಡದೇ ವಿಮಾ ನಿಲ್ದಾಣದೊಳಕ್ಕೆ ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

BMW iX ಎಲೆಕ್ಟ್ರಿಕ್ ಕಾರು 111.5-kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 324 ಕಿಲೋಟಮೀರ್ ಮೈಲೇಜ್ ನೀಡಲಿದೆ. 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಈ ಕಾರಿನ ಬೂಟ್ ಅಟೋಮ್ಯಾಟಿಕ್ ಇದೆ. ಕಾರಿನ ಚಾಲಕನ ಬಳಿ ಇರುವ ಬಟನ್ ಮೂಲಕ ಬೂಟ್ ನಿರ್ವಹಣೆ ಮಾಡಲು ಸಾಧ್ಯವಿದೆ. ಇನ್ನು ಬೂಟ್ ಡೋರ್‌ನಲ್ಲಿ ಆಟೋ ಬಟನ್ ನೀಡಲಾಗಿದೆ. ಈ ಬಟನ್ ಪ್ರೆಸ್ ಮಾಡಿದರೆ ತೆರೆದಿರುವ ಬೂಟ್ ಮುಚ್ಚಿಕೊಳ್ಳಲಿದೆ. ಆದರೆ ಬೂಟ್ ಒಳಗೆ ಯಾವುದೇ ವಸ್ತು ಡೂರ್‌ಗೆ ತಾಗಿದರೆ,ಅಥವಾ ಅಡ್ಡವಾಗಿದ್ದರೆ ಬೂಟ್ ಮುಚ್ಚಿಕೊಳ್ಳುವುದಿಲ್ಲ. 

ಒಂದು ಫಾರ್ಚುನರ್ ಮಾರಾಟವಾದರೆ ಸರ್ಕಾರಕ್ಕೆ 18 ಲಕ್ಷ ರೂ ಆದಾಯ, ಕಾರಿನ ಅಸಲಿ ಬೆಲೆ ಎಷ್ಟು?


 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು