ಪೊಲೀಸರ ಚಲನ್ ತಪ್ಪಿಸಲು ಗರ್ಲ್‌ಫ್ರೆಂಡ್‌ನನ್ನೇ ಕೆಳಕ್ಕೆ ಬೀಳಿಸಿ ಪರಾರಿಯಾದ ಬೈಕರ್, ವಿಡಿಯೋ ವೈರಲ್!

By Suvarna News  |  First Published Aug 14, 2023, 3:47 PM IST

ಟ್ರಾಫಿಕ್ ಪೊಲೀಸ ಮುಂದೆ ನಿಯಮ ಉಲ್ಲಂಘಿಸಿದರೆ ಹಿಡಿಯದೇ ಬಿಡುತ್ತಾರಾ? ಹೀಗೆ ನಿಯಮ ಉಲ್ಲಂಘಿಸಿದ ಬೈಕ್ ರೈಡನ್ನು ಹಿಡಿಯಲು ಹೋದ ಪೊಲೀಸ್‌ಗೆ ಚಮಕ್ ನೀಡಲು ಹೋದ ಬೈಕರ್, ಒಂದೇ ಬಾರಿ ಎಕ್ಸಲೇಟರ್ ರೈಸ್ ಮಾಡಿದ್ದಾನೆ.  ಹಿಂಬದಿಯಲ್ಲಿ ಕುಳಿತಿದ್ದ ಗರ್ಲ್‌ಫ್ರೆಂಡ್‌ ಕೆಳಕ್ಕೆ ಬಿದ್ದರೂ ಲೆಕ್ಕಿಸದೇ ಪರಾರಿಯಾದ ವಿಡಿಯೋ ವೈರಲ್ ಆಗಿದೆ.


ಬೆಂಗಳೂರು(ಆ.14) ನಗರ ಹಾಗೂ ಹೆದ್ದಾರಿಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಿಸಿಟಿವಿ ಆಧರಿಸಿ ಪೂಲೀಸರು ಇ ಚಲನ್ ನೀಡುತ್ತಾರೆ. ಇನ್ನು ಕೆಲವು ಭಾಗದಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಖುದ್ದು ಪೊಲೀಸರು ಹಾಜರಿರುತ್ತಾರೆ. ಪೊಲೀಸರ ಮುಂದೆ ಸ್ಟಂಟ್ ಮಾಡುತ್ತಾ, ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹಿಡಿಯದೇ ಬಿಡುತ್ತಾರ? ಹೀಗೆ ಹಲವು ನಿಯಮ ಉಲ್ಲಂಘಿಸಿ ಸಿಗ್ನಲ್ ಬಳಿ ನಿಂತ ಬೈಕರನ್ನು ಟ್ರಾಫಿಕ್ ಪೊಲೀಸ್ ರೆಡ್ ಹ್ಯಾಂಡ್ ಆಗಿ ಹಿಡಿಯಲು ತೆರಳಿದ್ದಾರೆ. ಪೊಲೀಸ್‌ನ ನೋಡಿ ಬೈಕ್ ಎಕ್ಸಲೇಟರ್ ಒಂದೇ ಸಮನ ರೈಸ್ ಮಾಡಿ ಬೈಕ್ ಮುನ್ನುಗ್ಗಿಸಿದ್ದಾನೆ. ಆದರೆ ಈತನ ರಭಸಕ್ಕೆ ಹಿಂಭಾಗದಲ್ಲಿ ಏನೂ ಅರಿಯದ ಕುಳಿತಿದ್ದ ಈತನ ಗರ್ಲ್‌ಫ್ರೆಂಡ್ ನೆಲಕ್ಕುಳಿದ್ದಾಳೆ. ಗರ್ಲ್‌ಫ್ರೆಂಡ್ ಕೆಳಕ್ಕೆ ಬಿದ್ದರೂ ಬೈಕ್ ಮಾತ್ರ ನಿಲ್ಲಿಸದೇ ವೇಗವಾಗಿ ಪೊಲೀಸರಿಂದ ತಪ್ಪಿಸಿ ಮುಂದೆ ಸಾಗಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ವಾಹನಗಳ ಓಡಾಟ, ಜನರ ಓಡಾಟ ಸೇರಿದಂತೆ ಕಿಕ್ಕಿರಿದು ತುಂಬಿದ ರಸ್ತೆ. ಸಿಗ್ನಲ್ ಬಳಿ ವಾಹನಗಳು ನಿಂತಿದೆ. ಇದೇ ರಸ್ತೆಯಲ್ಲಿ ತನ್ನ ಗರ್ಲ್‌ಫ್ರೆಂಡ್ ಕೂರಿಸಿಕೊಂಡು ಬೈಕರ್ ಒಬ್ಬ ಬಂದಿದ್ದಾನೆ. ಈತನ ಬಳಿ ಹೆಲ್ಮೆಟ್ ಇಲ್ಲ, ಹಿಂಭಾಗದಲ್ಲಿ ಕುಳಿತ ಗರ್ಲ್‌ಫ್ರೆಂಡ್‌ಗೂ ಹೆಲ್ಮೆಟ್ ಇಲ್ಲ. ಇನ್ನು ಈತನ ವಾಹನಕ್ಕೆ ಸರಿಯಾಗಿ ನಂಬರ್ ಪ್ಲೇಟ್ ಕೂಡ ಇಲ್ಲ. ಹೀಗಾಗಿ ಆರ್‌ಸಿಬಿ, ವಿಮೆ, ಎಮಿಶನ್ ದಾಖಲೆಗಳು ಇರುವ ಸಾಧ್ಯತೆಗಳು ತೀರಾ ಕಡಿಮೆ.

Tap to resize

Latest Videos

undefined

ಒಂದೇ ಸ್ಕೂಟಿಯಲ್ಲಿ 7 ಮಕ್ಕಳ ಜೊತೆ ಸವಾರಿ, ವೈರಲ್ ವಿಡಿಯೋ ಬೆನ್ನಲ್ಲೇ ಅರೆಸ್ಟ್!

ಈ ಬೈಕರ್ ಗಮನಿಸಿದ  ರಸ್ತೆಯ ಬಲಭಾಗದಲ್ಲಿದ್ದ ಟ್ರಾಫಿಕ್ ಪೊಲೀಸ್ ತಕ್ಷಣವೇ ಬೈಕರ್‌ನತ್ತ ತೆರಳಿದ್ದಾರೆ. ಪೊಲೀಸ್ ತನ್ನ ಬಳಿ ಬರುತ್ತಿರುವುದನ್ನು ಗಮನಿಸಿದ ಬೈಕರ್ ಕ್ಷಣಾರ್ಧದಲ್ಲೇ ಅಲ್ಲಿಂದ ಪರಾರಿಯಾಗಲು ಪ್ಲಾನ್ ಮಾಡಿದ್ದಾನೆ. ಪೊಲೀಸರು ಹಿಡಿದು ಚಲನ್ ಹಾಕಿ ದಂಡ ಕಟ್ಟಿಸಿಕೊಳ್ಳುವ ಬದಲು ಪರಾರಿಯಾಗುವ ಪ್ಲಾನ್ ಮಾಡಿದ ಬೈಕರ್, ಒಂದೇ ಸಮನೆ ಎಕ್ಸಲೇಟರ್ ರೈಸ್ ಮಾಡಿದ್ದಾನೆ. 

 

Priorities kalesh (boy Left her Girlfriend behind to stay safe From Challan😭) pic.twitter.com/FMD7aU6cN1

— Ghar Ke Kalesh (@gharkekalesh)

 

ಬೈಕ್ ಏಕಾಏಕಿ ಮುಂದಕ್ಕೆ ನುಗ್ಗಿದೆ. ಈತನ ಕಸರತ್ತಿಗೆ ಹಿಂಭಾಗದಲ್ಲಿ ಏನು ಅರಿಯದೇ ಕುಳಿತಿದ್ದ ಗರ್ಲ್‌ಫ್ರೆಂಡ್ ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದಾಳೆ. ವೇಗವಾಗಿ ಮುಂದೆ ಸಾಗಿದ ಈತ ಎದುರಗಡೆ ಬಂದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಸೈಡ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಂದ ಮತ್ತೆ ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ಸಾಗಿದ್ದಾನೆ. ಈತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆದರೆ ಈತನ ಬೈಕ್‌ನಲ್ಲಿದ ಗರ್ಲ್‌ಪ್ರೆಂಡ್ ರಸ್ತೆಯಲ್ಲಿ ನೋವು ಹಾಗೂ ಅವಮಾನದಿಂದ ಅತ್ತಿದ್ದಾಳೆ. ಈಕೆಯನ್ನು ಸಂತೈಸಿದ ಟ್ರಾಫಿಕ್ ಪೊಲೀಸ್ ಹತ್ತಿರದ ಶಾಪ್ ಒಂದಕ್ಕೆ ಕರೆದೊಯ್ದು ಕೂರಿಸಿದ್ದಾರೆ. ನೀರು ಕೊಟ್ಟಿದ್ದಾರೆ. 

ಒಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಗರಿಷ್ಠ 22 ಲಕ್ಷ ರೂಪಾಯಿ ದಂಡ, ಹೊಸ ನೀತಿ ಜಾರಿ!

ಈ ವೈರಲ್ ವಿಡಿಯೋದ ಹೆಚ್ಚಿನ ಮಾಹಿತಿ ಲಭ್ಯವಿದೆ. ಕೋಲ್ಕಾತ್ತಾದಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಈ ವಿಡಿಯೋಗೆ ಹಲವು ಕಮೆಂಟ್ ಮಾಡಿದ್ದಾರೆ. 500 ರೂಪಾಯಿ ಚಲನ್‌ಗಾಗಿ ಪ್ರೀತಿಸಿದ ಹುಡುಗಿಯನ್ನು ನೆಲಕ್ಕುರುಳಿಸಿ ಹೋದ ಈತ ಟ್ರಾಫಿಕ್ ಮಾತ್ರವಲ್ಲ, ಹಲವು ನಿಯಮ ಉಲ್ಲಂಘಿಸುತ್ತಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗಿಯರು ಬೈಕ್ ಹಿಂದೆ ಕೂರುವಾಗ ಹುಡಗನ ಪರ್ಸ್‌ನಲ್ಲಿ ಹಣವಿದೆಯಾ ಅನ್ನೋದು ಮಾತ್ರವಲ್ಲ, ಬೈಕ್‌ ದಾಖಲೆ ಪತ್ರ ಇದೆಯಾ ಅನ್ನೋದನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ.
 

click me!