ಲಂಡನ್‌ನಲ್ಲಿ ಕಳುವಾದ ಐಷಾರಾಮಿ Bentley Car ಪಾಕಿಸ್ತಾನದಲ್ಲಿ ಪತ್ತೆ

By Anusha Kb  |  First Published Sep 4, 2022, 3:01 PM IST

 ಲಂಡನ್‌ನಿಂದ ಕಳುವಾದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಸುಮಾರು 300,000 ಡಾಲರ್‌ ಅಂದರೆ ಭಾರತದ 2 ಕೋಟಿಗೂ ಅಧಿಕ ಬೆಲೆ ಬಾಳುವ ಈ ಕಾರು ಲಂಡನ್‌ನಿಂದ ಹಲವು ವಾರಗಳ ಹಿಂದೆ ಕಳುವಾಗಿತ್ತು. 


ಲಂಡನ್‌: ಲಂಡನ್‌ನಿಂದ ಕಳುವಾದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಸುಮಾರು 300,000 ಡಾಲರ್‌ ಅಂದರೆ ಭಾರತದ 2 ಕೋಟಿಗೂ ಅಧಿಕ ಬೆಲೆ ಬಾಳುವ ಈ ಕಾರು ಲಂಡನ್‌ನಿಂದ ಹಲವು ವಾರಗಳ ಹಿಂದೆ ಕಳುವಾಗಿತ್ತು. ಆದರೆ ವಿಚಿತ್ರ ಎಂದರೆ ಆ ಕಾರು ಈಗ ಪಾಕಿಸ್ತಾನದ ಕರಾಚಿ ಮುಂದೆ ಇರುವ ಬಂಗ್ಲೆಯೊಂದರಲ್ಲಿ ಪತ್ತೆಯಾಗಿದೆ. 

ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್‌ಗೆ (CCE) ಲಂಡನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆ (UK National Crime Agency) ನೀಡಿದ ಸುಳಿವಿನಂತೆ ಲಂಡನ್‌ನಿಂದ ಕದ್ದಂತಹ ಸೆಡಾನ್  ಬೆಂಟ್ಲಿ ಕಾರು, ಕರಾಚಿ ನಗರದ  ಐಷಾರಾಮಿ ವಸತಿ ಪ್ರದೇಶವಾದ ಡಿಎಚ್‌ಎ ಪ್ರದೇಶದ ಮನೆಯೊಂದರ ಮುಂದೆ ನಿಂತಿದೆ ಎಂಬುದು ಗೊತ್ತಾಗಿ ಆ ಸುಳಿವಿನ ಆಧಾರದ ಮೇಲೆ ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್‌ ದಾಳಿ ನಡೆಸಿತು. 

Latest Videos

undefined

ಈ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದು, ಇಂತಹ ದೊಡ್ಡ ಐಷಾರಾಮಿ ಕಾರನ್ನು ಕದ್ದ ಖದೀಮರು ಅದರಲ್ಲಿರುವ ಟ್ರೇಸಿಂಗ್ ಟ್ರಾಕರ್‌ ಅನ್ನು ಕಿತ್ತೊಗೆಯಲು ಅಥವಾ ಆಫ್‌ ಮಾಡಲು ಮರೆತಿದ್ದರು. ಪರಿಣಾಮ ಈ ಐಷಾರಾಮಿ ಕಾರನ್ನು ಲಂಡನ್‌ ತನಿಖಾಧಿಕಾರಿಗಳಿಗೆ ಪತ್ತೆ ಮಾಡಲು ಸುಲಭವಾಯಿತು. ಈ  ಐಷಾರಾಮಿ ಬೆಂಟ್ಲಿ ಕಾರಿನಲ್ಲಿದ್ದ ಅತ್ಯಾಧುನಿಕ ಟ್ರ್ಯಾಕಿಂಗ್‌ ತಂತ್ರಜ್ಞಾನದಿಂದ (tracking system) ಸ್ವಲ್ಪವೂ ಪರಿಶ್ರಮವಿಲ್ಲದೇ ಈ ಕಾರು ಸುಲಭವಾಗಿ ಪತ್ತೆಯಾಗಿದೆ. 

ದಾಳಿ ನಡೆಸಿದ ವೇಳೆ ಈ ಕಾರು ಪಾಕಿಸ್ತಾನದ ರಿಜಿಸ್ಟ್ರೇಷನ್ (Pakistani registration) ಹಾಗೂ ನಂಬರ್ ಪ್ಲೇಟ್ (number plate)ಹೊಂದಿತ್ತು. ಹೆಚ್ಚಿನ ತಪಾಸಣೆಯ ನಂತರ, ಕಾರಿನ ಚಾಸಿಸ್ ಸಂಖ್ಯೆಯು (chassis number) ಯುಕೆ ಅಧಿಕಾರಿಗಳು ಒದಗಿಸಿದ ಕದ್ದ ವಾಹನದ ವಿವರಗಳಿಗೆ ಹೊಂದಿಕೆಯಾಗುತ್ತಿರುವುದನ್ನು ಅವರು ಪತ್ತೆ ಮಾಡಿದರು.

10 ಕೋಟಿ ರೂ ಬೆಂಟ್ಲಿ ಮಲ್ಸೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

ನಂತರ ಈ ಕಾರಿನ ಬಗ್ಗೆ ದಾಖಲೆಗಳನ್ನು ಕೇಳಿದಾಗ ನಿವಾಸದ ಮಾಲೀಕರು ಸಮರ್ಪಕ ದಾಖಲೆಗಳನ್ನು ನೀಡಲು ವಿಫಲವಾಗಿದ್ದಾರೆ. ಹೀಗಾಗಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆತ ಮತ್ತು ಆತನಿಗೆ ಅತ್ಯಾಧುನಿಕ ಕಾರನ್ನು ಮಾರಾಟ ಮಾಡಿದ ದಲ್ಲಾಳಿಯನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಈ ವಾಹನದ ನೋಂದಣಿ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಾಹನಗಳ ಅಕ್ರಮ ಕಳ್ಳಸಾಗಣೆ ಮಾಫಿಯಾದಲ್ಲಿ ಭಾಗಿಯಾದವರು ಪೂರ್ವ ಯುರೋಪಿಯನ್ ದೇಶಗಳ (east European country) ರಾಜತಾಂತ್ರಿಕ (diplomat) ಅಧಿಕಾರಿಗಳ ದಾಖಲೆಗಳನ್ನು ಬಳಸಿ ಈ ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಸಿದ್ಧಪಡಿಸಿದ ಎಫ್‌ಐಆರ್‌ನಲ್ಲಿ(FIR), ಈ ಕದ್ದ ವಾಹನದ ಕಳ್ಳಸಾಗಣೆಯಿಂದಾಗಿ 300 ಮಿಲಿಯನ್‌ಗಿಂತಲೂ ಹೆಚ್ಚು ಪಾಕಿಸ್ತಾನಿ ರೂಪಾಯಿಗಳ ತೆರಿಗೆಯನ್ನು ವಂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಪ್ರಕರಣದ ಪ್ರಮುಖ ಮಾಸ್ಟರ್‌ಮೈಂಡ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Bengaluru Crime: ಐಷಾರಾಮಿ ಕಾರು ಕದ್ದು ತಂದು ಬೆಂಗ್ಳೂರಲ್ಲಿ ಮಾರಾಟ, ಇಬ್ಬರ ಬಂಧನ

ಇಂದು ತಂತ್ರಜ್ಞಾನಗಳು ಎಷ್ಟು ಮುಂದುವರೆದಿವೆ ಎಂದರೆ ನೀವು ಕುಳಿತಿದ್ದಲ್ಲಿಗೆ ಎಲ್ಲವೂ ಬರುತ್ತದೆ. ನೀವು ಕುಳಿತ ಸ್ಥಳದಿಂದಲೇ ಫ್ಯಾನ್ ಆಫ್ ಮಾಡಬಹುದು, ಚಾನೆಲ್ ಬದಲಿಸಬಹುದು. ಕಾರನ್ನು ಲಾಕ್‌ ಮಾಡಬಹುದು. ಕದ್ದ ಮೊಬೈಲ್‌ನ್ನು ನೀವು ಎಲ್ಲಿದೆ ಎಂದು ಟ್ರ್ಯಾಕ್‌ ಮಾಡಬಹುದು. ಅದರ ಜೊತೆಗೆ ಕಳ್ಳರನ್ನು ಕೂಡ ಹಿಡಿಯಬಹುದು. ಇದಕ್ಕೆ ಪಾಕಿಸ್ತಾನದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಲಂಡನ್‌ನಲ್ಲಿ ಕಾರು ಕದ್ದ ಕಳ್ಳರು ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಕಳ್ಳರ ಪತ್ತೆಗೆ ಸಹಕಾರಿಯಾದುದು ಕಾರಿನಲ್ಲಿ ಅಳವಡಿಸಿದ ಟ್ರ್ಯಾಕರ್ ತಂತ್ರಜ್ಞಾನದಿಂದ ಕಾರು ಎಲ್ಲಿದೆ ಎಂಬುದು ತಿಳಿದು ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

click me!