115 ಕಿ.ಮೀ ಮೈಲೇಜ್, 3.6 ಲಕ್ಷ ರೂ, ಹೊಚ್ಚ ಹೊಸ ಮಹೀಂದ್ರ ಝೋರ್ ಎಲೆಕ್ಟ್ರಿಕ್ ಲಾಂಚ್!

By Suvarna News  |  First Published Aug 29, 2022, 4:55 PM IST

4 ಗಂಟೆಯಲ್ಲಿ ಮನೆಯಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾದ ವ್ಯವಸ್ಥೆ, ಒಂದು ಬಾರಿ ಚಾರ್ಜ್ ಮಾಡಿದರೆ 100ಕ್ಕೂ ಹೆಚ್ಚು ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ. 3 ವರ್ಷ ಅಥವಾ 80000 ಕಿಲೋಮೀಟರ್‌ ವಾಹನ ವಾರಂಟಿ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಹೀಂದ್ರ ಝೋರ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.
 


ಬೆಂಗಳೂರು(ಆ.29): ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ ಗ್ರಾಹಕರಿಗೆ ಮತ್ತೊಂದು ಆಕರ್ಷಕ ಕೊಡುಗೆ ನೀಡಿದೆ. ಹೊಚ್ಚ ಹೊಸ ಸರಕು ಸಾಗಾಣೆಯ ತ್ರಿಚಕ್ರ ವಾಹನ ಝೋರ್ ಗ್ರ್ಯಾಂಡ್‌ ಬಿಡುಗಡೆ ಮಾಡಿದೆ.  ಮಹೀಂದ್ರಾದ ಮೌಲ್ಯಯುತ ಉತ್ಪನ್ನಕ್ಕೆ ಬೆಂಗಳೂರಲ್ಲಿ ಆಕರ್ಷಕವಾದ ಎಕ್ಸ್‌-ಶೋರೂಮ್‌ ಬೆಲೆ 3.60 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.  ಮಹೀಂದ್ರಾ ಲಾಜಿಸ್ಟಿಕ್ಸ್‌, ಮೆಜೆಂಟಾ ಇವಿ ಸಲ್ಯೂಷನ್ಸ್‌, ಎಂಒಇವಿಐಎನ್‌ಜಿ, ಇವಿನೌ, ಯೆಲೊ ಇವಿ, ಝೈಂಗೊ ಮತ್ತಿತರ ಮುಂಚೂಣಿ ಸಾರಿಗೆ ಕಂಪನಿಗಳೊಂದಿಗಿನ ಕಾರ್ಯತಂತ್ರ ಒಪ್ಪಂದದ ಮೂಲಕ ಮಹೀಂದ್ರಾವು ಝೋರ್ ಗ್ರ್ಯಾಂಡ್‌ನ 14,000 ಕ್ಕೂ ಹೆಚ್ಚು ವಾಹನಗಳ ಬುಕ್ಕಿಂಗ್‌ ಮಾಡಿದೆ. ಮಹೀಂದ್ರಾ ಝೋರ್ ಗ್ರ್ಯಾಂಡ್‌ ಬಗೆಗಿನ ಈ ಅಚಲವಾದ ನಂಬಿಕೆಗೆ ಬ್ಯಾಟರಿ, ಮೋಟರ್‌ ಮತ್ತು ಕಠಿಣವಾದ ಮೌಲ್ಯಮಾಪನ ಹಾಗೂ ಅನುಭವದ ಹಿನ್ನೆಲೆಯೊಂದಿಗಿನ ಟೆಲಿಮ್ಯಾಟಿಕ್ಸ್‌ನ ಆಂತರಿಕ ದಕ್ಷತೆಯ ಬಲಿಷ್ಠವಾದ ಬೆಂಬಲದ ನೆರವು ಕಾರಣವಾಗಿದೆ. ಈ ಎಲ್ಲ ಬೆಂಬಲದಿಂದಾಗಿ ರಸ್ತೆಯಲ್ಲಿ 50000+ ತ್ರಿಚಕ್ರ ಇವಿಗಳು ಸಂಚರಿಸುವಂತಾಗಿದೆ.

ತಾಂತ್ರಿಕವಾಗಿ ಮುಂದುವರಿದ ಝೋರ್ ಗ್ರ್ಯಾಂಡ್‌, ವಾಹನಗಳ ತಂಡದ (ಫ್ಲೀಟ್)‌ ನಿರ್ವಹಣೆ ಮತ್ತು ಉತ್ತಮ ಕಾರ್ಯಾಚರಣೆ ದಕ್ಷತೆಯ ಎನ್‌ಇಎಂಒ (ನೆಮೊ) ಸಂಪರ್ಕಿತ ವಾಹನ ವೇದಿಕೆಗೆ ಸೇರಿದೆ. ಚಾರ್ಜ್‌ ಪರಿಸ್ಥಿತಿ (ಸ್ಟೇಟ್‌ ಆಫ್‌ ಚಾರ್ಜ್-ಎಸ್‌ಒಸಿ), ವ್ಯಾಪ್ತಿ, ಸ್ಪೀಡೋಮೀಟರ್‌, ಬ್ಯಾಟರಿ ಆರೋಗ್ಯ ಸೂಚಕ ಮತ್ತು ಅಪೂರ್ವವಾದ ಲೈಟ್‌ಗಳನ್ನು ಒಳಗೊಂಡ   ಸರ್ವ-ಡಿಜಿಟಲ್‌ ಸಲಕರಣೆ  ಗುಚ್ಛವನ್ನೂ ಇದು ಹೊಂದಿದೆ. ಈ ವಾಹನಕ್ಕೆ ೫ ವರ್ಷ/150000 ಕಿಲೋಮೀಟರ್‌ ಬ್ಯಾಟರಿ ವಾರಂಟಿ ನೀಡಲಾಗಿದೆ.

Tap to resize

Latest Videos

ಹೊಚ್ಚ ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆ ಘೋಷಿಸಿದ ಮಹೀಂದ್ರ, ಕಡಿಮೆ ಬೆಲೆಯಲ್ಲಿ ದೊಡ್ಡ SUV ಕಾರು!

ಕೊನೆ ತಾಣದ ವಿತರಣೆ ಮತ್ತು ಸಾರಿಗೆ ವಲಯಕ್ಕೆ ಅಮೂಲ್ಯ ಹಾಗೂ ಉನ್ನತ-ಗುಣಮಟ್ಟದ ಎಲೆಕ್ಟ್ರಿಕ್‌ ವಾಹನಗಳು ಮತ್ತು ಕಡಿಮೆ ವೆಚ್ಚದ ಸರಕು ಸಾಗಣೆ ವಾಹನದ ಅಗತ್ಯವಿದೆ ಎಂದು ಮಹೀಂದ್ರಾ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ನ ಸಿಇಒ ಸುಮನ್‌ ಮಿಶ್ರಾ ಹೇಳಿದರು.  ಈ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು  ಸರ್ವ-ವಿನೂತನವಾದ ಝೋರ್ ಗ್ರ್ಯಾಂಡ್‌ ಆರಂಭದಿಂದ ನಮಗೆ ರೋಮಾಂಚನವಾಗಿದೆ. ಇದು ಪ್ರಬಲವಾದ ಕಾರ್ಯಕ್ಷಮತೆ ಹೊಂದಿದೆ ಹಾಗೂ ನಮಗೆ ಮತ್ತು ನಮಗೆ ಸಂಬಂಧಿಸಿದ ಎಲ್ಲರ ಸುಸ್ಥಿರ ಗುರಿಯನ್ನು ಸಾಧಿಸಲು ನೆರವಾಗುತ್ತದೆ ಎಂದು ಸುಮನ್‌ ಹೇಳಿದರು.

ಮಹೀಂದ್ರಾ ಝೋರ್ ಗ್ರ್ಯಾಂಡ್‌ ಮುಖ್ಯ ಆಕರ್ಷಣೆಗಳು:
. ಕೈಗಾರಿಕೆಯಲ್ಲೇ ಅತ್ಯುತ್ತಮವಾದುದು. 12 ಕೆಡಬ್ಲ್ಯು ಪವರ್‌ ಅತ್ಯುತ್ತಮ  ನಿರ್ವಹಣೆ, ಹೆಚ್ಚು ಟ್ರಿಪ್‌ಗಳು ಮತ್ತು ಹೆಚ್ಚು ಗಳಿಕೆಯನ್ನು ಖಾತರಿಪಡಿಸುತ್ತದೆ.

. ಕೈಗಾರಿಕೆಯಲ್ಲೇ ಅತ್ಯುತ್ತಮವಾದುದು. 11.5 ಡಿಗ್ರಿ ಗ್ರೇಡೆಬಿಲಿಟಿಯು ಅಧಿಕ ಭಾರದೊಂದಿಗೆ ಇಳಿಜಾರುಗಳನ್ನು ಸುಲಭವಾಗಿ ಏರಲು ಸುಲಭಗೊಳಿಸುತ್ತದೆ.

. 50 ಎನ್‌ಎಂ ಟಾರ್ಕ್-‌ ಅದ್ಭುತ ಪಿಕಪ್‌ ಮತ್ತು ಆಕ್ಸಲರೇಶನ್.‌ ಕ್ಲಚ್‌-ಮುಕ್ತ, ಗೇರ್‌ರಹಿತ, ಶಬ್ದರಹಿತ, ಅಲುಗಾಟ-ಮುಕ್ತ (ವೈಬ್ರೇಶನ್-ಫ್ರೀ) ಚಾಲನೆ, ಆಯಾಸ-ರಹಿತ ಅನುಭವ.

 

5 ಮಹೀಂದ್ರಾ ಆಲ್ ಎಲೆಕ್ಟ್ರಿಕ್ ಎಸ್ಯುವಿ ವಿನ್ಯಾಸ, ಟೀಸರ್ ಬಿಡುಗಡೆ

ಹೆಚ್ಚು ಹಣ ಉಳಿಸಿರಿ
ಡೀಸೆಲ್‌ಗೆ ಹೋಲಿಸಿದರೆ 5 ವರ್ಷಗಳಲ್ಲಿ ಮಾಲಿಕತ್ವ ವೆಚ್ಚದಲ್ಲಿ 600000. ರೂಪಾಯಿ ಹಾಗೂ ಸಿಎನ್‌ಜಿ ಕಾರ್ಗೊ ೩-ಚಕ್ರ  ವಾಹನಕ್ಕೆ ಹೋಲಿಸಿದರೆ 300000.೦೦ ರೂಪಾಯಿ ವರೆಗೆ ಉಳಿತಾಯ ಮಾಡಿರಿ.

ಸುಧಾರಿತ ಲಿಯಾನ್‌ ಬ್ಯಾಟರಿ
. ಪ್ರತಿ ಚಾರ್ಜ್‌ಗೆ 100 ಕಿಮೀಗಿಂತ ಅಧಿಕ ರೇಂಜ್.‌
. ಮುಂದುವರಿದ ಲೀಥಿಯಂ-ಅಯಾನ್‌ ತಂತ್ರಜ್ಞಾನ 4 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಚಾರ್ಜ್‌ ಮಾಡುವುದನ್ನು ಖಾತರಿಪಡಿಸುತ್ತದೆ.

ಬ್ಯಾಟರಿ ಉತ್ಪಾದಕತೆ
. 6 ಫ್ಲೀಟ್‌ಲೋಡಿಂಗ್‌ ಟ್ರೇ ಮತ್ತು ಒಇ-ಫಿಟೆಡ್‌ 140/170 ಸಿಯು.ಫೀಟ್‌ ಡೆಲಿವರಿ ಬಾಕ್ಸ್‌ –ಹೆಚ್ಚು ಸಾಗಿಸಿ, ಹೆಚ್ಚು ಗಳಿಸಿ.
. 3-ಬದಿ ತೆರೆಯುವ ಕಾರ್ಗೊ ಟ್ರೇ-ಈಸಿ ಲೋಡಿಂಗ್‌ ಮತ್ತು ಅನ್‌ಲೋಡಿಂಗ್.‌

ದೃಢವಾದ ಗುಣಮಟ್ಟ
. ಬಲಿಷ್ಠವಾದ ಮೆಟಲ್‌ ಬಾಡಿ, ಕ್ಯಾಬಿನ್‌ ಬಾಗಿಲುಗಳಿಗೆ ವೆದರ್‌ಪ್ರೂಫ್‌ ವಿನ್ಯಾಸ.
. ಆಧುನಿಕ ವಿನ್ಯಾಸ, ಆಕರ್ಷಕ ಬಣ್ಣ, ಟ್ರೆಂಡಿ ಹೊಸ ನೋಟ.

ಮಹೀಂದ್ರಾ ವಿಶ್ವಾಸಾರ್ಹತೆ
. ಉತ್ತಮ ಮಾರಾಟೋತ್ತರ ಸೇವೆಗಳಿಗಾಗಿ ಭಾರತದಾದ್ಯಂತ ೮೦೦ಕ್ಕೂ ಅಧಿಕ ಟಚ್‌ಪಾಯಿಂಟ್‌ಗಳು
. 3 ವರ್ಷ/ 80000 ಕಿಲೋಮೀಟರ್‌ ವಾಹನ ವಾರಂಟಿಯು ಮನಃಶಾಂತಿಯನ್ನು ನೀಡುತ್ತದೆ.

click me!