ಮಂಗಳವಾರ ಮಂಗಳೂರು ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ನವರಾತ್ರಿ ಬಳಿಕ ದ.ಕ. ಜಿಲ್ಲೆಯಾದ್ಯಂತ ಮೊದಲ ಬಾರಿಗೆ ಮಳೆ ಕಾಣಿಸಿದೆ. ಮಂಗಳವಾರ ದಿನಪೂರ್ತಿ ಮೋಡ, ಗುಡುಗು, ಮಿಂಚು ಸಹಿತ ತುಂತುರು ಮಳೆ ಸುರಿದಿದೆ.
ಮಂಗಳೂರು(ಅ.16): ನವರಾತ್ರಿ ಬಳಿಕ ದ.ಕ. ಜಿಲ್ಲೆಯಾದ್ಯಂತ ಮೊದಲ ಬಾರಿಗೆ ಮಳೆ ಕಾಣಿಸಿದೆ. ಮಂಗಳವಾರ ದಿನಪೂರ್ತಿ ಮೋಡ, ಗುಡುಗು, ಮಿಂಚು ಸಹಿತ ತುಂತುರು ಮಳೆ ಸುರಿದಿದೆ.
ಮಂಗಳವಾರ ನಸುಕಿನ ಜಾವ ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬಳಿಕ ಹಗಲು ಹೊತ್ತು ಮೋಡ ಕವಿದ ವಾತಾವರಣ ಕಂಡುಬಂದಿದೆ. ಸಂಜೆ ವೇಳೆಗೆ ಗುಡುಗು, ಮಿಂಚು ಸಹಿತ ತುಂತುರು ಮಳೆ ಬಂದಿದೆ. ರಾತ್ರಿ ವೇಳೆಯೂ ಮಳೆಯ ವಾತಾವರಣ ಮುಂದುವರಿದಿದೆ.
ಉಡುಪಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ
ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 18.9 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬಂಟ್ವಾಳ 8.9 ಮಿ.ಮೀ, ಮಂಗಳೂರು 9.6 ಮಿ.ಮೀ, ಪುತ್ತೂರು 9.9 ಮಿ.ಮೀ, ಸುಳ್ಯ 7.2 ಮಿ.ಮೀ. ಮಳೆಯಾಗಿದ್ದು, ದಿನದ ಒಟ್ಟು ಮಳೆ 10.9 ಮಿ.ಮೀ. ದಾಖಲಾಗಿದೆ. ಕಳೆದ ವರ್ಷ ಇದೇ ದಿನ 30.7 ಮಿ.ಮೀ. ಮಳೆಯಾಗಿತ್ತು.
ಮಂಗಳೂರು: ರೌಡಿ ಪತ್ನಿಯಿಂದ ಅರ್ಜಿ ಸ್ವೀಕರಿಸಿದ ಐಪಿಎಸ್ ಹರ್ಷ
ಅಕ್ಟೋಬರ್‌ನಲ್ಲಿ ಇದುವರೆಗೆ ಒಟ್ಟು 126.2 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ 205 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಈವರೆಗೆ ಒಟ್ಟು 3,703.8 ಮಿ.ಮೀ. ಮಳೆಯಾಗಿದ್ದು, ಕಳೆದ ಬಾರಿ 4,517.6 ಮಿ.ಮೀ. ಗರಿಷ್ಠ ಮಳೆ ವರದಿಯಾಗಿತ್ತು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ 11 ಮೀಟರ್, ಕುಮಾರಧಾರ ನದಿ 10 ಮೀಟರ್ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 5.5 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.
ತಾಲೂಕು ಕಚೇರಿಗೆ ಎಸಿಬಿ ದಾಳಿ, ದಾಖಲೆ ಇಲ್ಲದ ಸಾವಿರಾರು ರೂಪಾಯಿ ಪತ್ತೆ