ತಾಲೂಕು ಕಚೇರಿಗೆ ಎಸಿಬಿ ದಾಳಿ, ದಾಖಲೆ ಇಲ್ಲದ ಸಾವಿರಾರು ರೂಪಾಯಿ ಪತ್ತೆ

By Kannadaprabha NewsFirst Published Oct 15, 2019, 11:11 AM IST
Highlights

ಮಂಗಳೂರಿನ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಿಕರೊಬ್ಬರು ನೀಡಿದ ದೂರಿನನ್ವಯ ಅಧಿಕಾರಿಗಳು ದಾಳಿ ನಡೆಸಿ ಪರಶೀಲನೆ ನಡೆಸಿದ್ದಾರೆ.

ಮಂಗಳೂರು(ಅ.15): ಮೂಡುಬಿದಿರೆ ತಾಲೂಕು ಕಚೇರಿಗೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು (ಎಸಿಬಿ) ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ನಾಗಕರಿರೊಬ್ಬರ ದೂರಿನ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕಚೇರಿಯ ಅಟಲ್‌ಜೀ ಜನಸ್ನೇಹಿ ವಿಭಾಗ, ಸರ್ವೆ ವಿಭಾಗ ಹಾಗೂ ಉಪ ತಹಸೀಲ್ದಾರ್‌ ಕಚೇರಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, ಸುಮಾರು 66 ಸಾವಿರ ರು. ಹೆಚ್ಚುವರಿ ಹಣ ಪತ್ತೆಯಾಗಿದೆ.

ಮಂಗಳೂರು: ರೌಡಿ ಪತ್ನಿಯಿಂದ ಅರ್ಜಿ ಸ್ವೀಕರಿಸಿದ ಐಪಿಎಸ್ ಹರ್ಷ

ಕಾರವಾರ, ಉಡುಪಿ, ಚಿಕ್ಕಮಗಳೂರು ವಿಭಾಗಗಳ ಒಬ್ಬರು ಎಸ್‌ಪಿ, ಐದು ಮಂದಿ ನಿರೀಕ್ಷಕರು, ಏಳು ಮಂದಿ ಹೆಡ್‌ಕಾನ್ಸ್‌ಟೆಬಲ್‌, ನಾಲ್ಕು ಕಾನ್ಸ್‌ಟೆಬಲ್‌ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಸ್ಯಾಕ್ಸೋಫೋನ್ ಮಾಂತ್ರಿಕನ ಕೊನೆಯ ಸಾರ್ವಜನಿಕ ಕಛೇರಿ ಮಂಗಳೂರಲ್ಲೇ!

ಪ್ರಭಾರ ಎಸ್‌ಪಿ ಸುಧೀರ್‌ ಹೆಗ್ಡೆ, ದಾಳಿ ಕುರಿತು ಮಾಹಿತಿ ನೀಡಿ, ಮೂಡುಬಿದಿರೆ ಎಸಿಬಿಗೆ ಕಂಡುಬಂದ ಮೊದಲ ಪ್ರಕರಣವಾಗಿದ್ದು, ಅಲ್ಪ ಪ್ರಮಾಣದ ಹೆಚ್ಚುವರಿ ನಗದು ಪತ್ತೆಯಾಗಿದೆ.

ಈ ಬಗ್ಗೆ ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಸಮಜಾಯಿಸಿ ನೀಡಿದ್ದು, ತನಿಖೆ ನಡೆಸಲಾಗುವುದು. ಒಂದು ವೇಳೆ ದಾಖಲೆಗಳಿಲ್ಲದ ಹಣವಾಗಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ರಾತ್ರಿವರೆಗೂ ಅಧಿಕಾರಿಗಳು ಕಚೇರಿಯಲ್ಲಿ ವಿವರಗಳನ್ನು ಸಂಗ್ರಹಿಸಿದ್ದಾರೆ.

ಕನ್ನಡ ಬಾರದ ಶಿಕ್ಷಕಿಯನ್ನು ವಾಪಸ್‌ ಕಳುಹಿಸಿದ ವಿದ್ಯಾರ್ಥಿಗಳು!

click me!