ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸಿಟಿ ಬೀಟ್ ನಡೆಸಿದ್ದಾರೆ. ಈ ಸಂದರ್ಭ ರೌಡಿ ಗಣೇಶ್ ಅವರ ಪತ್ನಿ ಕೈಯಿಂದ ಅರ್ಜಿಯನ್ನು ಸ್ವೀಕರಿಸಿದ್ದಾರೆ.
ಮಂಗಳೂರು(ಅ.15): ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೋಮವಾರ ಸಿಟಿ ಬೀಟ್ ನಡೆಸಿದರು. ಶಕ್ತಿನಗರ ಬಳಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಬೀಟ್ ನಂ.20ರಲ್ಲಿ ಹೆಡ್‌ಕಾನ್‌ಸ್ಟೆಬಲ್ ಮನೋಜ್ ಅವರೊಂದಿಗೆ ಬೀಟ್ ಕರ್ತವ್ಯ ನಿರ್ವಹಿಸಿದ್ದಾರೆ.
ಈ ಸಂದರ್ಭ ಧರ್ಮರಾಜ್ ಎನ್ನುವವರ ಪಾಸ್‌ಪೋರ್ಟ್ ದೃಢೀಕರಣಕ್ಕೆ ಸ್ಥಳದಲ್ಲಿಯೇ ಶಿಫಾರಸು ಮಾಡಿದ ಡಾ.ಹರ್ಷ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ಪ್ರಗತಿ ತಿಳಿದುಕೊಂಡರು.
ರೌಡಿ ಪತ್ನಿಯಿಂದ ಅರ್ಜಿ ಸ್ವೀಕಾರ:
ಆಶಾಕಿರಣ ಯೋಜನೆಯ ಅನ್ವಯ ರೌಡಿ ಗಣೇಶ್ ಅವರ ಪತ್ನಿ ಕಾವೇರಿ ಗಣೇಶ್ ಎಂಬವರು ಕೌಶಲ್ಯ ತರಬೇತಿಯ ಕುರಿತು ನೀಡಿದ ಅರ್ಜಿಯನ್ನು ಸ್ವೀಕರಿಸಲಾಯಿತು. ಬೀಟ್ ವ್ಯಾಪ್ತಿಯ ರೌಡಿಗಳಾದ ಕಾರ್ತಿಕ್ ನೀತಿ ನಗರ, ಪೃಥ್ವಿರಾಜ್ ಹಾಗೂ ಅಭಿಷೇಕ್ ಮಣಿ ಅವರನ್ನು ಭೇಟಿ ಮಾಡಿ ಮುಖ್ಯವಾಹಿನಿಯಲ್ಲಿ ಬರುವಂತೆ ಸಲಹೆ ನೀಡಿದರು. ಬೀಚ್ ಸದಸ್ಯರು, ಸ್ಥಳಿಯ ಆಟೋರಿಕ್ಷಾ ಚಾಲಕರು, ಸಾರ್ವಜನಿಕರು, ಅಂಗಡಿ-ಮುಂಗಟ್ಟುಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಕಂಡಕ್ಟರ್ ಟಿಕೆಟ್ ಕೊಡಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ
ಶಕ್ತಿನಗರದ ಅಧಿಕಾರಿಗಳ ಪೊಲೀಸ್ ಕ್ವಾರ್ಟರ್ಸ್‌ಗೆ ಭೇಟಿ ನೀಡಿ ಪ್ರೊಬೆಷನರಿ ಪಿಎಸ್‌ಐಗಳಾದ ಸುಗುಮಾರನ್ ಮತ್ತು ಸುದೀಪ್ ಅವರಿಗೆ ನೂತನವಾಗಿ ನಿರ್ಮಿಸಿದ ವಸತಿ ಗೃಹಗಳನ್ನು ಮಂಜೂರು ಮಾಡಿ ಸ್ಥಳದಲ್ಲಿಯೇ ಆದೇಶಪತ್ರ ನೀಡಿದರು. ಬೀಟ್ ವೇಳೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.
ಮಹಿಳೆಯರ ರಕ್ಷಣೆಗೆ ವಾಟ್ಸಾಪ್ ಪಿಂಕ್ ಗ್ರೂಪ್..!