ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗಿದೆ. ಗುಡುಗಿನ ಅಬ್ಬರ ಹೆಚ್ಚಿದ್ದರಿಂದ ಜನತೆ ಕೆಲಕಾಲ ಭಯಭೀತರಾದರು. ಆದರೆ ಅದರ ಅಬ್ಬರಕ್ಕೆ ತಕ್ಕಂತೆ ಮಳೆಯಾಗದೆ ಸಾಧಾರಣ ಮಳೆ ಸುರಿದಿದೆ.
ಮಂಗಳೂರು(ಅ.17): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಗುಡುಗು- ಸಿಡಿಲಿನಿಂದ ಕೂಡಿದ ಮಳೆ ಬುಧವಾರವೂ ಮುಂದುವರಿದಿದೆ. ಗುಡುಗಿನ ಅಬ್ಬರ ಹೆಚ್ಚಿದ್ದರಿಂದ ಜನತೆ ಕೆಲಕಾಲ ಭಯಭೀತರಾದರು. ಆದರೆ ಅದರ ಅಬ್ಬರಕ್ಕೆ ತಕ್ಕಂತೆ ಮಳೆಯಾಗದೆ ಸಾಧಾರಣ ಮಳೆ ಸುರಿದಿದೆ.
ಬುಧವಾರ ಬೆಳಗ್ಗಿನಿಂದ ಮಧ್ಯಾಹ್ನ 3.30ರವರೆಗೂ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣವಿತ್ತು. ಕೂಡಲೆ ದಟ್ಟಮೋಡ ಆವರಿಸಿ ದಿಢೀರ್ ಮಳೆಯ ಆಗಮನವಾಗಿದೆ. ಒಂದೆರಡು ಗಂಟೆ ಸುರಿದ ಬಳಿಕ ಸಂಜೆಯವರೆಗೂ ಮೋಡ ಕವಿದ ವಾತಾವರಣವಿತ್ತು.
ಕಾರವಾರದ ರಾಬಿನ್ಸನ್ ಪೂರ್ವಾಪರ ಪತ್ತೆಹಚ್ಚಿದ ಕುವೈತ್ ಅಧಿಕಾರಿಗಳು
ಮಳೆ ಪ್ರಮಾಣ: ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 26.1 ಮಿ.ಮೀ. ಮಳೆ ದಾಖಲಾಗಿದೆ. ಬಂಟ್ವಾಳದಲ್ಲಿ ಅತಿ ಹೆಚ್ಚು 40.1 ಮಿ.ಮೀ., ಬೆಳ್ತಂಗಡಿಯಲ್ಲಿ 28.8 ಮಿ.ಮೀ., ಮಂಗಳೂರಿನಲ್ಲಿ 20.6 ಮಿ.ಮೀ., ಪುತ್ತೂರಿನಲ್ಲಿ 27.4 ಮಿ.ಮೀ., ಸುಳ್ಯದಲ್ಲಿ 13.5 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ಕೇವಲ 1.3 ಮಿ.ಮೀ. ಮಳೆಯಾಗಿತ್ತು.