ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆ ಜಾಗದಲ್ಲಿಯೇ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ ಯತ್ನ

By Web Desk  |  First Published Oct 16, 2019, 1:01 PM IST

ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿಯೇ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. 


ಮಂಗಳೂರು [ಅ.16]: ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾದ ಜಾಗದಲ್ಲಿಯೇ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ನೇತ್ರಾವತಿ ನದಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯ ಮೀನುಗಾರರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. 

Tap to resize

Latest Videos

ಮಂಗಳೂರಿನ ನೇತ್ರಾವತಿ ಸೇತುವೆಯಿಂದ ಜನರ ಎದುರೇ ನೀರಿಗೆ ಹಾರಿದ್ದು, ತಕ್ಷಣವೇ ದೋಣಿಯಲ್ಲಿ ತೆರಳಿದ ಮೀನುಗಾರರು ಆತನನ್ನು ರಕ್ಷಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಫಿ‌ ಡೇ ಮಾಲಿಕ ಸಿದ್ದಾರ್ಥ್ ಕೂಡ ಇದೇ ಜಾಗದಲ್ಲಿ ಜುಲೈ 28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮದ್ಯವಯಸ್ಸಿನ ವ್ಯಕ್ತಿಯೂ ಕೂಡ ಇದೀಗ ಇದೇ ಜಾಗದಲ್ಲೇ ಆತ್ಮಹತ್ಯೆ ಯತ್ನ ಮಾಡಿದ್ದು, 

ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಸಿದ್ಧಾರ್ಥ್‌ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!, 20 ರೂ ನೋಟು ರಹಸ್ಯವೇನು?...

click me!