ಮಂಗಳೂರು, ಉಡುಪಿ ಸೇರಿ ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದ್ದು, ಸುಳ್ಯ ತಾಲೂಕಿನಲ್ಲಿ ಗಾಳಿ ಮಳೆಗೆ 500ಕ್ಕೂ ಹೆಚ್ಚು ಅಡಕೆ ಮರಗಳು ಧರೆಗುರುಳಿವೆ.ಹಲವು ಕಡೆ ಮನೆಗಳಿಗೂ ಹಾನಿಯಾಗಿದೆ.
ಮಂಗಳೂರು(ಅ.17): ಸುಳ್ಯ ತಾಲೂಕಿನ ಕನಕಮಜಲು ಭಾಗದಲ್ಲಿ ಭಾರಿ ಗಾಳಿ-ಮಳೆಗೆ 500ಕ್ಕಿಂತಲೂ ಜಾಸ್ತಿ ಅಡಕೆ ಮರ ಧರೆಗೆ ಉರುಳಿದ್ದು, ಮನೆಗಳಿಗೂ ಹಾನಿಯಾಗಿದೆ.
ಸೋಮವಾರ, ಮಂಗಳವಾರ ಬೀಸಿದ ಭಾರಿ ಗಾಳಿ-ಮಳೆಗೆ ಪುಟ್ಟಣ್ಣ ಕೋಳ್ತಮಜಲು, ಪದ್ಮನಾಭ ಕೋಟೆಬರಿ, ಆನಂದ ಪಲ್ಲತ್ತಡ್ಕ, ಮಂಜಪ್ಪ ಕೋಲ್ತಮಜಲು, ವಸಂತ ಮೂರ್ಜೆ, ವಾಸುದೇವ ಕೋಳ್ತಮಜಲು, ಗಂಗಾಧರ ಕಣಜಾಲು, ಕಿಶನ್ ದೇವರಗುಂಡ, ಶಿವರಾಮ ಪಲ್ಲತ್ತಡ್ಕ, ಪದ್ಮಿನಿ ಮೂರ್ಜೆ ಸೇರಿದಂತೆ ಹಲವು ರೈತರ ಅಡಕೆ ಮರಗಳು ಹಾನಿಯಾಗಿವೆ.
ಮಂಗಳೂರು: ಜಿಲ್ಲಾದ್ಯಂತ ಬಿಜೆಪಿ ಧ್ವಜ ರಹಿತ ಪಾದಯಾತ್ರೆ
ನಾನಾ ರೈತರ ತೋಟದಲ್ಲಿ 500ಕ್ಕಿಂತ ಜಾಸ್ತಿ ಅಡಕೆಮರ, ತೆಂಗಿನಮರ, ರಬ್ಬರ್‌ಮರ ಧರೆಗುರುಳಿವೆ. ಇದರಿಂದ ಈ ಭಾಗದ ರೈತರು ಸಾಕಷ್ಟುನಷ್ಟಅನುಭವಿಸಿದ್ದಾರೆ. ಅಲ್ಲದೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಎರಡು ದಿನಗಳಿಂದ ಕತ್ತಲೆಯಲ್ಲೆ ಕಳಿಯುವಂತಾಯಿತು. ಪದ್ಮಿನಿ ಮೂರ್ಜೆ ಅವರ ಮನೆ ಮೇಲೆ ಮರ ಬಿದ್ದು, ಸಂಪೂರ್ಣ ಹಾನಿಯಾಗಿದೆ.
ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಗ್ರಾ.ಪಂ.ಸದಸ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಫ್ಲೈಟ್ ದರದಲ್ಲಿ ಭಾರೀ ವ್ಯತ್ಯಾಸ, ಕಣ್ಣೂರು ಏರ್‌ಪೋರ್ಟ್‌ನತ್ತ ಕರಾವಳಿಗರ ಚಿತ್ತ