'JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ'..!

Published : Oct 18, 2019, 11:44 AM ISTUpdated : Oct 18, 2019, 11:47 AM IST
'JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ'..!

ಸಾರಾಂಶ

JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ ಎಂದು ಶಾಸಕ ಡಿ. ಸಿ. ತಮ್ಮಣ್ಣ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್ ಮುಖಂಡರು ಬಿಜೆಪಿ ಸಚಿವರನ್ನು ಭೇಟಿ ಮಾಡೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯ(ಅ.18): ಜೆಡಿಎಸ್‌ನ ಯಾವ ಶಾಸಕರೂ ಪಕ್ಷ ತೊರೆಯುವುದಿಲ್ಲ ಎಂದು ಶಾಸಕ ಡಿಸಿ ತಮ್ಮಣ್ಣ ಹೇಳಿದ್ದಾರೆ. ಜೆಡಿಎಸ್‌ ಶಾಸಕರು ಬಿಜೆಪಿ ಸಚಿವರನ್ನು ಅಭಿವೃದ್ಧಿ ದೃಷ್ಟಿಯಿಂದ ಭೇಟಿ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ನ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ. ಇದು ಕೇವಲ ವದಂತಿ ಮಾತ್ರ ಎಂದು ಶಾಸಕ ಡಿ.ಸಿ. ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

ಚಾಮುಂಡಿ ತಾಯಿ ಮುಂದೆ ಕೈಕಟ್ಟಿ ಕೂತು ಕಣ್ಣೀರಿಟ್ಟ ಸಾರಾ ಮಹೇಶ್..!

ಮದ್ದೂರು ತಾಲೂಕಿನ ನಿಡಘಟ್ಟಮತ್ತು ಬೆಸಗರಹಳ್ಳಿ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ನಿಗಮದ ವತಿಯಿಂದ ಮುಸ್ಲಿಂ ಕಾಲೋನಿಗಳ ಕಾಂಕ್ರೀಟ್‌ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿ,  ಜೆಡಿಎಸ್‌ ಶಾಸಕರು ಬಿಜೆಪಿ ಸಚಿವರನ್ನು ಅಭಿವೃದ್ಧಿ ದೃಷ್ಟಿಯಿಂದ ಭೇಟಿ ಮಾಡುವುದು ಅನಿವಾರ್ಯವಾಗಿದೆ. ಆದರೆ ಭೇಟಿಯನ್ನೇ ಪಕ್ಷ ಸೇರುತ್ತೇವೆ ಎಂಬುದನ್ನು ಬಿಂಬಿಸುವುದರಲ್ಲಿ ಅರ್ಥವಿಲ್ಲ. ನನಗೆ ಗೊತ್ತಿರುವ ಪ್ರಕಾರ ಜೆಡಿಎಸ್‌ನ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಡ್ಯ: ಕಾರು ಅಡ್ಡಗಟ್ಟಿ ದೋಚಿದ್ರು 80 ಲಕ್ಷ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್‌ನ ಜಿಲ್ಲಾ ಉಪಾಧ್ಯಕ್ಷ ಸಿ.ಕೆ. ಸ್ವಾಮಿಗೌಡ, ಮದ್ದೂರು ತಾಲೂಕು ಯುವ ಘಟಕದ ಅಧ್ಯಕ್ಷ ಸಿ.ಟಿ. ಶಂಕರ್‌, ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ರಘು ಅವರುಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಮೈಸೂರು ವಿಭಾಗದ ವೀಕ್ಷಕ ಎಸ್.ಪಿ. ಸ್ವಾಮಿ ಅವರನ್ನು ಉಚ್ಚಾಟಿಸುವುದು ಪಕ್ಷದ ರಾಜ್ಯಾಧ್ಯಕ್ಷರ ವಿವೇಚನೆಗೆ ಬಿಡಲಾಗಿದೆ ಎಂದು ತಮ್ಮಣ್ಣ ತಿಳಿಸಿದ್ದಾರೆ.

ಅಭಿವೃದ್ಧಿಗೆ ಗ್ರಾಮೀಣ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಸ್ತೆ ಅಭಿವೃದ್ಧಿಗಾಗಿ ಮದ್ದೂರು ವಿಧಾನ ಸಭಾ ಕ್ಷೇತ್ರದ ನಿಡಘಟ್ಟ, ಕೆಸ್ತೂರು, ಬೆಸಗರಹಳ್ಳಿ ಗ್ರಾಮಗಳ ಅಲ್ಪಸಂಖ್ಯಾತರ ಕಾಲೋನಿಗಳ ಕಾಂಕ್ರಿಚ್‌ ರಸ್ತೆ ಅಭಿವೃದ್ಧಿಗಾಗಿ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಮದ್ದೂರು ಕ್ಷೇತ್ರದ ಶಾಸಕನಾದ ನಂತರ ನಿಗಮದ ವತಿಯಿಂದ ಮುಸ್ಲೀಂ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ಒಟ್ಟು 6 ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ. ಮದ್ದೂರು ಪಟ್ಟಣದಲ್ಲಿ ಶೀಘ್ರದಲ್ಲೇ ಒಂದು ಕೋಟಿ ರೂ. ವೆಚ್ಚದಲ್ಲಿ ಮುಸ್ಲೀಂ ಕಾಲೋನಿಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ

ಜಿ.ಪಂ. ಸದಸ್ಯರಾದ ಬೋರಯ್ಯ, ಮರಿಹೆಗ್ಗಡೆ, ಡಿಸಿಸಿ ಬ್ಯಾಂಕ್ ನಿರ್ದೆಶಕ ಹೊನ್ನೇಗೌಡ, ನಿಡಘಟ್ಟಗ್ರಾ.ಪಂ. ಅಧ್ಯಕ್ಷೆ ವರಲಕ್ಷ್ಮಿ, ಬೆಸಗರಹಳ್ಳಿ ಗ್ರಾ.ಪಂ. ಸದಸ್ಯ ನಾಗೇಶ್, ಮುಖಂಡರಾದ ಮಾದನಾಯಕನಹಳ್ಳಿ ರಾಮಣ್ಣ, ಕೆರೆಮೇಗಲದೊಡ್ಡಿ ಶೇಖರ್‌, ಪ್ರಸನ್ನ ಮತ್ತಿತರರಿದ್ದರು.

PREV
click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!